Dailyhunt
IPL 2026: ನಮ್ಮ ಮನೆಯಲ್ಲಿ ಡಾಕ್ಟರ್‌ ಆಗು ಎಂದಿದ್ದರು, ನಾನು ಕಿಕೆಟಿಗನಾದೆ: ಆಕಿಬ್‌ ನಬಿ!

IPL 2026: ನಮ್ಮ ಮನೆಯಲ್ಲಿ ಡಾಕ್ಟರ್‌ ಆಗು ಎಂದಿದ್ದರು, ನಾನು ಕಿಕೆಟಿಗನಾದೆ: ಆಕಿಬ್‌ ನಬಿ!

Vishwavani 2 weeks ago

ವದೆಹಲಿ: ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಯಶಸ್ಸಿಗೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌(Irfan Pathan) ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗದ ಬೌಲರ್‌ ಆಕಿಬ್‌ ನಬಿ (Auqib Nabi) ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ ವಿರುದ್ಧದ ತನ್ನ ಮೊದಲ ತವರು ಪಂದ್ಯಕ್ಕೂ ಮುನ್ನ ಜಿಯೊ ಸ್ಟಾರ್‌ ಜೊತೆ ಮಾತನಾಡಿದ ನಬಿ, 2018ರಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ತಂಡಕ್ಕೆ ಇರ್ಫಾನ್‌ ಪಠಾಣ್‌ ಮೆಂಟರ್‌ ಆಗಿ ಸೇರ್ಪಡೆಯಾದ ಬಳಿಕ ನಾನು ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಲು ಅವರು ನೆರವು ನೀಡಿದ್ದರು ಎಂದು ಹೇಳಿದ್ದಾರೆ.

ನಬಿ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತ, ಬಾಲ್ಯದಲ್ಲಿ ಕುಟುಂಬದಿಂದ ಹೆಚ್ಚು ಬೆಂಬಲವನ್ನು ಪಡೆಯಲಿಲ್ಲವೆಂದು ಹೇಳಿದರು. ನಬಿ ವೈದ್ಯರಾಗಬೇಕೆಂದು ಅವರ ತಂಡ ಬಯಸಿದ್ದರು. ಬಾಲ್ಯದಲ್ಲಿಯೇ ಟೆಲಿವಿಷನ್‌ನಲ್ಲಿ ಡೇಲ್‌ ಸ್ಟೇನ್‌ ಅವರ ಆಟವನ್ನು ನೋಡಿ ವೇಗದ ಬೌಲರ್ ಆಗಲು ಪ್ರೇರಣೆ ಪಡೆದಿದ್ದೇನೆ ಮತ್ತು ಭವಿಷ್ಯದಲ್ಲಿ ಭಾರತ ತಂಡದ ಪರ ಆಡಲು ಕನಸು ಕಂಡಿದ್ದೆ ಎಂದು ನಬಿ ಹೇಳಿದ್ದಾರೆ.

IPL 2026: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್‌ ಶರ್ಮಾಗೆ ದಂಡ

"ನಾನು ಬಾಲ್ಯದಲ್ಲಿ ಬಹಳಷ್ಟು ಸಮಯ ಡೇಲ್‌ ಸ್ಟೇನ್‌ ಅವರನ್ನು ವೀಕ್ಷಿಸುತ್ತಿದ್ದೆ. ಅವರು ಚೆನ್ನಾಗಿ ವೇಗವಾಗಿ ಬಾಲ್ ಸ್ವಿಂಗ್ ಮಾಡುವ ರೀತಿ ನನಗೆ ವೇಗದ ಬೌಲರ್ ಆಗಲು ಪ್ರೇರಣೆ ನೀಡಿತು ಮತ್ತು ಭವಿಷ್ಯದಲ್ಲಿ ಭಾರತ ಪರ ಆಡಲು ಕನಸು ಕಂಡಿದ್ದೆ," ಎಂದು ಆಕಿಬ್‌ ನಬಿ ಜಿಯೊ ಸ್ಟಾರ್‌ಗೆ ತಿಳಿಸಿದ್ದಾರೆ.

"ನಾನು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದ ಕಾರಣ ತಂದೆಯಿಂದ ಸಾಕಷ್ಟು ಬಾರಿ ಬೈಸಿಕೊಂಡಿದ್ದೆ, ಏಕೆಂದರೆ ಅವರಿಂದ ನನಗೆ ಬೆಂಬಲ ಇರಲಿಲ್ಲ. ಅವರು ನನಗೆ ವೈದ್ಯರಾಗಬೇಕು ಎಂದು ಬಯಸಿದ್ದರು," ಎಂದು 29ರ ವಯಸ್ಸಿನ ಆಕಿಬ್‌ ನಬಿ ಹೇಳಿದರು.

IPL 2026: ರಘುವಂಶಿ ಹೊಸ ಆರೆಂಜ್ ಕ್ಯಾಪ್ ಲೀಡರ್, ಉನಾದ್ಕತ್‌ಗೆ ಪರ್ಪಲ್‌ ಕ್ಯಾಪ್‌

ತಮ್ಮ ಯಶಸ್ಸಿನ ಶ್ರೇಯ ಇರ್ಫಾನ್‌ ಪಠಾಣ್‌ಗೆ ಸಲ್ಲಬೇಕು

ಇರ್ಫಾನ್‌ ಪಠಾಣ್‌ ರಾಜ್ಯ ತಂಡಕ್ಕೆ ಮೆಂಟರ್ ಆಗಿ ಸೇರಿದ ಬಳಿಕ ವೇಗದ ಬೌಲರ್ ಆಕಿಬ್‌ ನಬಿಯ ವೃತ್ತಿಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿತ್ತು. ಪಠಾಣ್‌ ಅವರ ಮಾರ್ಗದರ್ಶನದಿಂದ ತಮ್ಮ ಆಟವನ್ನು ಸುಧಾರಿಸಲು ಸಾಧ್ಯವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

"ಇರ್ಫಾನ್‌ ಭಾಯ್‌ ಜಮ್ಮು ಮತ್ತು ಕಾಶ್ಮೀರ ತಂಡದ ಮೆಂಟರ್ ಆಗಿ ಸೇರಿದಾಗ, ನಾನು ಅಂಡರ್-23 ತಂಡದಲ್ಲಿ ಆಡುತ್ತಿದ್ದೆ ಮತ್ತು ನನ್ನ ಪ್ರದರ್ಶನಗಳು ಅವರ ಗಮನ ಸೆಳೆದವು. ಅವರು ನನ್ನನ್ನು ಜಮ್ಮು ಮತ್ತು ಕಾಶ್ಮೀರ ಹಿರಿಯ ತಂಡದಲ್ಲಿ ಡೆಬ್ಯೂ ಮಾಡಲು ಸಹಾಯ ಮಾಡಿದರು. ಅವರು ನನಗೆ ಸಲಹೆ ನೀಡುತ್ತಾ ಮಾರ್ಗದರ್ಶನ ಮಾಡುತ್ತಿದ್ದರು ಮತ್ತು ತುಂಬಾ ನೆರವಾಗಿದ್ದರು," ಎಂದು ನಬಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani