Dailyhunt Logo
  • Light mode
    Follow system
    Dark mode
    • Play Story
    • App Story
IPL 2026: ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಐಪಿಎಲ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಸೂರ್ಯವಂಶಿ

IPL 2026: ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಐಪಿಎಲ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಸೂರ್ಯವಂಶಿ

Vishwavani 3 months ago

ಮುಲ್ಲನ್‌ಪುರ, ಎ.29: ಕೇವಲ 15 ವರ್ಷ ವಯಸ್ಸಿನಲ್ಲಿಯೇ ಹಲವು ಟಿ20 ದಾಖಲೆಗಳನ್ನು ಬರೆದಿರುವ ವೈಭವ್ ಸೂರ್ಯವಂಶಿ(Vaibhav Sooryavanshi) ಇದೀಗ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ 16 ಎಸೆತಕ್ಕೆ 43 ರನ್‌ ಸಿಡಿಸಿ ಐಪಿಎಲ್‌(IPL 2026) ಆವೃತ್ತಿಯೊಂದರಲ್ಲಿ ಅತಿ ವೇಗವಾಗಿ 400 ರನ್‌ ಕಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸೂರ್ಯವಂಶಿ 400 ರನ್‌ ಗಳಿಸಲು ಕೇವಲ 167 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ 2019ರಲ್ಲಿ ಆಯಂಡ್ರೆ ರಸೆಲ್‌ ನಿರ್ಮಿಸಿದ್ದ ದಾಖಲೆ(188 ಎಸೆತ) ಮುರಿದರು. 2024ರಲ್ಲಿ ಅಭಿಷೇಕ್‌ ಶರ್ಮಾ 195 ಎಸೆತ, 2025ರಲ್ಲಿ ನಿಕೋಲಸ್‌ ಪೂರನ್‌ 197 ಎಸೆತ ಹಾಗೂ 2014ರಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ 200 ಎಸೆತಗಳಲ್ಲಿ 400 ರನ್‌ ಮೈಲುಗಲ್ಲು ಸಾಧಿಸಿದ್ದರು.

ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಫೋಟಕ ಆರಂಭ ಒದಗಿಸಿ ರಾಯಲ್ಸ್‌ಗೆ ನೆರವಾಯಿತು. ಈ ಜೋಡಿ 3.2 ಓವರ್‌ಗಳಲ್ಲಿ 51 ರನ್‌ ಸೇರಿಸಿತು. ಅಂತಿಮವಾಗಿ ಡೊನೊವನ್‌ ಫೆರಿಯೆರಾ 25 ಎಸೆತಕ್ಕೆ ಔಟಾಗದೆ 52 ಹಾಗೂ ಶುಭಮ್‌ ದುಬೆ 12 ಎಸೆತಕ್ಕೆ ಔಟಾಗದೆ 31 ರನ್‌ ಗಳಿಸಿ ತಂಡವನ್ನು 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.

ಐಪಿಎಲ್ ಋತುವಿನಲ್ಲಿ ಅತಿ ವೇಗವಾಗಿ 400 ರನ್ ಗಳಿಸಿದವರು

167 ಎಸೆತಗಳು- ವೈಭವ್ ಸೂರ್ಯವಂಶಿ 2026*

188 ಎಸೆತಗಳು- ಆಂಡ್ರೆ ರಸೆಲ್ 2019

195 ಎಸೆತಗಳು- ಅಭಿಷೇಕ್ ಶರ್ಮಾ 2024

197 ಎಸೆತಗಳು- ನಿಕೋಲಸ್ ಪೂರನ್ 2025

200 ಎಸೆತಗಳು- ಗ್ಲೆನ್ ಮ್ಯಾಕ್ಸ್‌ವೆಲ್ 2014

IPL 2026: ರಾಜಸ್ಥಾನ್‌ ವಿರುದ್ಧ ಸೋಲಿಗೆ ಬೌಲರ್‌ಗಳನ್ನು ದೂರಿದ ಶ್ರೇಯಸ್‌ ಅಯ್ಯರ್‌

ಆಡಿರುವ 8 ಪಂದ್ಯಗಳಿಂದ 400 ರನ್ ಕಲೆಹಾಕಿರುವ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿರುವ ಸೂರ್ಯವಂಶಿ, ಪವರ್‌ಪ್ಲೇ ಒಂದರಲ್ಲೇ 130 ಎಸೆತಗಳಲ್ಲಿ 319 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 245.4. ಆಗಿದೆ. ಪವರ್‌ಪ್ಲೇನಲ್ಲಿ 29 ಸಿಕ್ಸರ್‌ ಮತ್ತು 29 ಬೌಂಡರಿಗಳನ್ನು ಬಾರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani