Dailyhunt Logo
  • Light mode
    Follow system
    Dark mode
    • Play Story
    • App Story
ಇಸ್ರೋ ಕಂಬ್ಯಾಕ್‌ಗೆ ದಿನಗಣನೆ: ಸೆಪ್ಟೆಂಬರ್‌ 4ರಂದು ಮಹತ್ವಾಕಾಂಕ್ಷೆಯ Hawkeye ಉಪಗ್ರಹ ಉಡಾವಣೆ

ಇಸ್ರೋ ಕಂಬ್ಯಾಕ್‌ಗೆ ದಿನಗಣನೆ: ಸೆಪ್ಟೆಂಬರ್‌ 4ರಂದು ಮಹತ್ವಾಕಾಂಕ್ಷೆಯ Hawkeye ಉಪಗ್ರಹ ಉಡಾವಣೆ

Vishwavani 3 weeks ago

ವದೆಹಲಿ, ಆ. 28: ಸೆಪ್ಟೆಂಬರ್ 4ರಂದು ಹಾಕ್‌ಐ ಉಪಗ್ರಹ (Hawkeye Satellite) ಉಡಾವಣೆಗೆ ಇಸ್ರೋ ಮುಂದಾಗಿದೆ. ಉಡಾವಣಾ ವಾಹಕದಿಂದ (ಲಾಂಚ್ ಪ್ಯಾಡ್) ಸುಮಾರು ಎಂಟು ತಿಂಗಳ ಕಾಲ ದೂರ ಉಳಿದ ನಂತರ ಮತ್ತು ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್‌ನ ಸತತ ಎರಡು ವೈಫಲ್ಯಗಳ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಅತ್ಯಂತ ನಿರ್ಣಾಯಕ ಪುನರಾಗಮನದ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ.

ವಿ. ನಾರಾಯಣನ್ ಹೇಳಿದ್ದಾರೆ.

ಸೆಪ್ಟೆಂಬರ್ 4ರ ಮುಂಜಾನೆ, ಇಸ್ರೋ ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಭೂ ವೀಕ್ಷಣಾ ಉಪಗ್ರಹಗಳಲ್ಲಿ ಒಂದನ್ನು ಜಿಯೋ-ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV F17) ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ ಎಂದು ಡಾ. ನಾರಾಯಣನ್ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯು EOS 5 ಅನ್ನು ಹೊತ್ತೊಯ್ಯುತ್ತದೆ. ಇದನ್ನು ಮೊದಲು GISAT 1A ಎಂದು ಕರೆಯಲಾಗುತ್ತಿತ್ತು. ಇದು ಭೂಮಿಯಿಂದ ಸುಮಾರು 36,000 ಕಿಲೋ ಮೀಟರ್‌ಗಳಷ್ಟು ಅಸಾಧಾರಣ ಎತ್ತರದಿಂದ ಭಾರತಕ್ಕೆ ಪಕ್ಷಿನೋಟವನ್ನು ನಿರಂತರ ಒದಗಿಸಲು ವಿನ್ಯಾಸಗೊಳಿಸಲಾದ ಉಪಗ್ರಹವಾಗಿದೆ.

ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು:‌ ಕೇಂದ್ರ ಸರ್ಕಾರಕ್ಕೆ ತಲೆನೋವಾದ ಸಾಮೂಹಿಕ ರಾಜೀನಾಮೆ

ಇದರೊಂದಿಗೆ ಇಸ್ರೋ 2027ರ ಮಾರ್ಚ್‌ವರೆಗೆ ಏಳು ಉಡಾವಣೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿದೆ. ಇದರಲ್ಲಿ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಬಹು ನಿರೀಕ್ಷಿತ G1 ಮಿಷನ್, ಮೊದಲ ಸಿಬ್ಬಂದಿ ಇಲ್ಲದ ವಿಮಾನವೂ ಸೇರಿದೆ ಎಂದು ಡಾ. ನಾರಾಯಣನ್ ಹೇಳಿದ್ದಾರೆ.

ಇಸ್ರೋ ಅಧ್ಯಕ್ಷರು ಪ್ರಸಕ್ತ ಹಣಕಾಸು ವರ್ಷಕ್ಕೆ ಮಹತ್ವಾಕಾಂಕ್ಷೆಯ ಮಾರ್ಗದರ್ಶಿಯೊಂದನ್ನು (ರೋಡ್‌ಮ್ಯಾಪ್) ಸಿದ್ಧಪಡಿಸಿದ್ದಾರೆ. ಇದರ ಅಡಿಯಲ್ಲಿ 12 ಉಪಗ್ರಹಗಳನ್ನು ಸಾಕಾರಗೊಳಿಸಲು ಉದ್ದೇಶಿಸಲಾಗಿದ್ದು, ಎಂಟು ಉಡಾವಣಾ ವಾಹನ ಕಾರ್ಯಾಚರಣೆಗಳನ್ನು (ಲಾಂಚ್ ಮಿಷನ್ಸ್) ಗುರಿಯಾಗಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಗಳು ಸಂಪರ್ಕ, ನ್ಯಾವಿಗೇಷನ್ (ನೌಕಾಯಾನ), ಭೂ ವೀಕ್ಷಣೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಬೆಂಬಲ ನೀಡಲಿವೆ. ಜತೆಗೆ, ಭವಿಷ್ಯದ ಮಾನವಸಹಿತ ಬಾಹ್ಯಾಕಾಶ ಯಾನ ಮತ್ತು ಅನ್ವೇಷಣಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅಡಿಪಾಯವನ್ನು ಇವು ಹಾಕಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani