Dailyhunt Logo
  • Light mode
    Follow system
    Dark mode
    • Play Story
    • App Story
Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

Vishwavani 3 months ago

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಹೊಸ ಧಾರಾವಾಹಿ 'ಜಗದ್ಧಾತ್ರೀ' (Jagadhatri) ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಪ್ರಮುಖ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದ್ದು, ಪ್ರೋಮೋದಲ್ಲಿ ಅವರ ಎರಡು ವಿಭಿನ್ನ ಶೇಡ್​​ಗಳನ್ನು ತೋರಿಸಲಾಗಿದೆ.

'ಪಾರು'ನಲ್ಲಿ ಸಿಕ್ಕಾಪಟ್ಟೆ ಸಾಫ್ಟ್‌ ಆಗಿ ಪಾತ್ರ ನಿರ್ವಹಿಸಿದ್ದರು. ಅಭಿಮಾನಿಗಳು ಸ್ವಾಭಿಮಾನಿ ಮೋಕ್ಷಿ ಎಂದು ಪ್ರೀತಿಯಿಂದ ಕರೆಯುವುದಕ್ಕೆ ಶುರು ಮಾಡಿದರು. ಆದರೀಗ ಹೊಸ ಅವತಾರದಲ್ಲಿ ಕಂಡಿದ್ದಾರೆ. ಆದ್ರೆ ಈಗ ಧಾರಾವಾಹಿ (Serial) ಯಾವುದು ಅಂತ್ಯ ಕಾಣ್ತಿದೆ?

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜಗದ್ಧಾತ್ರೀ' ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು. ಈಗ ಸುದ್ದಿ ಕನ್ಫರ್ಮ್‌ ಆಗಿದೆ. ಪ್ರೋಮೊದಲ್ಲಿನ ಧ್ವನಿ ಕೇಳಿ ಫ್ಯಾನ್ಸ್‌ ಕನ್‌ಫರ್ಮ್‌ ಆಗಿದ್ದಾರೆ.

Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ; 'ಪೆದ್ದಿ','ದಿ ಪ್ಯಾರಡೈಸ್'ಗೆ ಲೀಕ್ ಕಾಟ

'ಜಗದ್ಧಾತ್ರೀ ಧಾರಾವಾಹಿಯ ಪ್ರೋಮೋ ಔಟ್‌

'ಜಗದ್ಧಾತ್ರೀ ಧಾರಾವಾಹಿಯ ಪ್ರೋಮೋ ಔಟ್‌ ಆಗಿದೆ. ಅಜ್ಜಿ ಓರ್ವರು ಜಗದ್ದಾತ್ರೀ ಕಾಫಿ ಕೊಡಮ್ಮ ಎಂಬ ಧ್ವನಿ ಬರುತ್ತೆ. ನಂತರ ಹಾಮ್ ಅಜ್ಜಿ ಎನ್ನುವ ವಾಯ್ಸ್ ಇದೆ. ಇದಾದ ಬಳಿಕ ಯುವತಿ ಧರಿಸಿದ ಇಯರ್‌ಪಾಡ್‌ನಲ್ಲಿ ಬಾಸ್‌ ಮಿಷನ್‌ ಇಸ್‌ ಆನ್‌, ಕಿಡ್ನಾಪರ್‌ ತಪ್ಪಿಸಿಕೊಂಡಿದ್ದಾನೆ ಎಂಬ ಕರೆ ಬರುತ್ತೆ. ಅಲ್ಲಿಂದ ಆ ಬಚ್ಚಿಟ್ಟಿದ್ದ ಗನ್‌ ತಗೊಂಡು, ಸೀದಾ ಮಾರ್ಕೆಟ್‌ಗೆ ಬಂದ ಅವಳು ಕಿಡ್ನಾಪ್‌ ಮಾಡಿದವನ ಕಾಲಿಗೆ ಗುರಿ ಇಟ್ಟು ಗುಂಡು ಹೊಡೆಯುತ್ತಾಳೆ. ಬಾಲಕಿಯನ್ನು ರಕ್ಷಣೆ ಮಾಡುತ್ತಾಳೆ . ಇದರಲ್ಲಿ ಮೋಕ್ಷಿತಾ ಅವರ ವಾಯ್ಸ್ ಇದೆ.

ತೆಲುಗು ಧಾರಾವಾಹಿ 'ಜಗದ್ಧಾತ್ರೀ' ರಿಮೇಕ್‌ ಆಗಿದೆ ಎನ್ನಲಾಗುತ್ತಿದೆ. ನಾಯಕನ ಪಾತ್ರದಲ್ಲಿ ದರ್ಶ್ ಚಂದ್ರಪ್ಪ ಅಭಿನಯಿಸಿದ್ದಾರೆ.

ಈ ಸೀರಿಯಲ್‌ ಅಂತ್ಯ!

ಇದೀಗ 'ಅಮೃತಧಾರೆ' ಧಾರಾವಾಹಿ ಕೊನೆಗೊಳ್ಳಬಹುದು ಎಂಬ ಚರ್ಚೆಗಳು ಆಗುತ್ತಿವೆ. ಅಮೃತಧಾರೆಯಲ್ಲಿಯೂ ಕಥೆ ಒಂದು ಹಂತಕ್ಕೆ ಹೋಗಿ ಮುಟ್ಟಿದೆ. ಶಕುಂತಲಾಗೆ ತನ್ನ ತಪ್ಪು ಅರಿತು ಗೌತಮ್‌ ಕಾಲಿಗೆ ಬಿದ್ದಿದ್ದಾಳೆ.

Vishnuvardhan: ಅಪ್ಪಾಜಿ ಪುಣ್ಯಭೂಮಿ ಬಗ್ಗೆ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ; ಅನಿರುದ್ಧ್

ಅಷ್ಟೇ ಅಲ್ಲ ಜೈದೇವ್‌ ಕೂಡ ತನ್ನೆಲ್ಲ ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಹೀಗಾಗಿ ಈ ಸೀರಿಯಲ್‌ ಅಂತ್ಯ ಕಾಣೋದು ಖಚಿತ ಎನ್ನಲಾಗಿದೆ . ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Vishwavani