Dailyhunt Logo
  • Light mode
    Follow system
    Dark mode
    • Play Story
    • App Story
ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ, 23 ಜನರಿಗೆ ಗಾಯ, ಹಲವೆಡೆ ಹಾನಿ

ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ, 23 ಜನರಿಗೆ ಗಾಯ, ಹಲವೆಡೆ ಹಾನಿ

Vishwavani 1 day ago

ಟೋಕಿಯೋ: ಭಾನುವಾರ ಮುಂಜಾನೆ ಟೋಕಿಯೊ ಪ್ರದೇಶ ಸೇರಿದಂತೆ ಪೂರ್ವ ಜಪಾನ್‌ನಲ್ಲಿ 5.9 ರಷ್ಟು ತೀವ್ರತೆಯ ಮಧ್ಯಮ ಭೂಕಂಪ (Earthquake in Japan) ಸಂಭವಿಸಿದ್ದು, 23 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ದಕ್ಷಿಣ ಇಬರಾಕಿ ಪ್ರಾಂತ್ಯದಲ್ಲಿ 70 ಕಿಲೋಮೀಟರ್ (42 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ, ಇದು ಜಪಾನ್‌ನ ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುವ ಪ್ರದೇಶವಾಗಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಪ್ರಾಥಮಿಕ ತೀವ್ರತೆ 5.8 ಎಂದು ದಾಖಲಿಸಿದೆ.

ಭೂಕಂಪದಿಂದ ಸೈತಾಮಾದಲ್ಲಿ ಒಂಬತ್ತು, ಕನಗಾವಾದಲ್ಲಿ ಒಂಬತ್ತು, ಚಿಬಾದಲ್ಲಿ ನಾಲ್ಕು ಮತ್ತು ಇಬರಾಕಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ಟೋಕಿಯೊ ಮತ್ತು ನರಿಟಾ ವಿಮಾನ ನಿಲ್ದಾಣಕ್ಕೆ ಸೇವೆ ಸಲ್ಲಿಸುವ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಈಶಾನ್ಯ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಇತರ ಸ್ಥಳೀಯ ರೈಲುಗಳು ವಿಳಂಬವಾದವು. ಭೂಕಂಪದ ಪರಿಣಾಮ ಮೊಬೈಲ್ ಫೋನ್‌ಗಳಲ್ಲಿ ತುರ್ತು ಭೂಕಂಪದ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭೂಕಂಪದಿಂದಾಗಿ ಸಣ್ಣ ಪುಟ್ಟ ಹಾನಿಗಳು ಸಂಭವಿಸಿದ್ದು, ಟೋಕಿಯೊದ ಪೂರ್ವ ವಾರ್ಡ್‌ನ ಕೊಟೊದಲ್ಲಿ ಭೂಗತ ನೀರಿನ ಪೈಪ್ ಒಡೆದು ನೀರು ರಸ್ತೆಗೆ ಹರಿಯುತ್ತಿದೆ. ಟೋಕಿಯೊದಲ್ಲಿ ಸುಮಾರು 460 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು, ಜಪಾನ್‌ನ ದಕ್ಷಿಣದ ಕ್ಯುಶು ದ್ವೀಪದ ಕುಮಾಮೊಟೊ ಪ್ರದೇಶದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿ 38 ಜನರು ಸಾವನ್ನಪ್ಪಿದರು ಮತ್ತು 364 ಜನರು ಗಾಯಗೊಂಡಿದ್ದರು.

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ

ಇಂಡೋನೇಷ್ಯಾದ ಪೂರ್ವದಲ್ಲಿರುವ ಫ್ಲೋರ್ಸ್ ದ್ವೀಪದಲ್ಲಿ ಕಳೆದ ವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದ ಉತ್ತರ ಕರಾವಳಿಯಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ 7.7 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಭಾರತೀಯ ಕಾಲಮಾನ ಬೆಳಗಿನ ಜಾವ 3.28 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, 8.557°S ಅಕ್ಷಾಂಶ ಮತ್ತು 121.181°E ರೇಖಾಂಶದಲ್ಲಿದೆ ಹಾಗೂ ಕೇಂದ್ರಬಿಂದು ಎಂಡೆಯಿಂದ ವಾಯುವ್ಯಕ್ಕೆ 68 ಕಿಲೋಮೀಟರ್ ದೂರದಲ್ಲಿದೆ ಎಂದು USGS ತಿಳಿಸಿದೆ. ಅಲ್ಲದೆ, ಈ ಭಾರಿ ಭೂಕಂಪದ ಬಳಿಕ ಕೆಲವೇ ಕ್ಷಣಗಳಲ್ಲಿ ಮತ್ತೆ ಭೂಮಿ ಕಂಪಿಸಿದ್ದು, 5.6, 5.9 ಹಾಗೂ 6.1ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿರುವ ವರದಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani