Dailyhunt Logo
  • Light mode
    Follow system
    Dark mode
    • Play Story
    • App Story
Jawa 42 FJ All Stars Bike: ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ 'ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್'; ಬೆಲೆ ಎಷ್ಟು?

Jawa 42 FJ All Stars Bike: ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ 'ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್'; ಬೆಲೆ ಎಷ್ಟು?

Vishwavani 2 months ago

ಬೆಂಗಳೂರು, ಆ.27: ಕ್ಲಾಸಿಕ್ ಬೈಕ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ 'ಜಾವಾ 42 ಎಫ್‌ಜೆ' ಬೈಕಿನ ಹೊಚ್ಚ ಹೊಸ 'ಆಲ್ ಸ್ಟಾರ್ಸ್' ಆವೃತ್ತಿಯನ್ನು (Jawa 42 FJ All Stars Bike) ಬಿಡುಗಡೆ ಮಾಡಿದೆ.

ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಮತ್ತು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಈ ಬೈಕ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಏನಿದು ಜಾವಾ 'ಆಲ್ ಸ್ಟಾರ್ಸ್'?

ಟ್ರೆಂಡ್ ಹಿಂದೆ ಹೋಗದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವ ರೈಡರ್‌ಗಳನ್ನು ಗುರುತಿಸುವ ಉದ್ದೇಶದಿಂದ ಜಾವಾ ಈ 'ಆಲ್ ಸ್ಟಾರ್ಸ್' ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಜಾವಾ ಬೈಕ್ ಸವಾರರ ಕ್ಯಾರೆಕ್ಟರ್, ಕಾಂಡಕ್ಟ್ ಮತ್ತು ಕರೇಜ್ (ವ್ಯಕ್ತಿತ್ವ, ನಡವಳಿಕೆ ಮತ್ತು ಧೈರ್ಯ) ಅನ್ನು ಸಂಕೇತಿಸುತ್ತದೆ. ಈ ಸರಣಿಯ ಮೊದಲ ಬೈಕ್ ಆಗಿ ʼಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್' ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಹೇಗಿದೆ ಎಂಜಿನ್ ಮತ್ತು ಪರ್ಫಾರ್ಮೆನ್ಸ್? ದರ ಎಷ್ಟು?

ಹೊಸ ಜಾವಾ 42 ಎಫ್‌ಜೆ ಬೈಕ್‌ನಲ್ಲಿ 334-ಸಿಸಿ ಸಾಮರ್ಥ್ಯದ ಆಲ್ಫಾ-2 ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದು 29.17 ಪಿಎಸ್‌ ಗರಿಷ್ಠ ಪವರ್ ಹಾಗೂ 29.62 ನ್ಯೂಟನ್‌ಮೀಟರ್‌ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ, ಈ ಬೈಕ್ ತನ್ನ ಸೆಗ್ಮೆಂಟ್‌ನ ಇತರ 350ಸಿಸಿ ಬೈಕ್‌ಗಳಿಗಿಂತ ಶೇ. 42ರಷ್ಟು ಹೆಚ್ಚು ಪವರ್ ನೀಡುತ್ತದೆ. ಸುಗಮ ಚಾಲನೆಗಾಗಿ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದ್ದು, ಇದರ ಆರಂಭಿಕ ಬೆಲೆ 2.01 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಆಗಿದೆ.

ವಿನ್ಯಾಸ ಮತ್ತು ಟಾಪ್ ಫೀಚರ್ಸ್

ನಿಯೋ-ಕ್ಲಾಸಿಕ್ ವಿನ್ಯಾಸದೊಂದಿಗೆ, ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ ಬ್ರಷ್ಡ್ ಅಲ್ಯೂಮಿನಿಯಂ ಟ್ಯಾಂಕ್ ಪ್ಯಾನೆಲ್‌ಗಳನ್ನು ನೀಡಲಾಗಿದ್ದು, ಬೈಕ್‌ಗೆ ಸ್ಪೋರ್ಟಿ ಲುಕ್ ತಂದುಕೊಟ್ಟಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಲ್-ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಇದರಲ್ಲಿದ್ದು, ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ನೀಡಲಾಗಿದೆ. ಮುಂಭಾಗ 320 ಎಂಎಂ ಮತ್ತು ಹಿಂಭಾಗ 240 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಸಸ್ಪೆನ್ಷನ್ ವಿಚಾರಕ್ಕೆ ಬರುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಸ್ಟೆಪ್ ಅಡ್ಜಸ್ಟಬಲ್ ಗ್ಯಾಸ್-ಫಿಲ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ ಇದೆ. ಗುಂಡಿ ಬಿದ್ದ ರಸ್ತೆಗಳಲ್ಲೂ ಇದು ಆರಾಮದಾಯಕ ರೈಡ್ ನೀಡುತ್ತದೆ. 790 ಎಂಎಂ ಸೀಟ್ ಎತ್ತರ, 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 12-ಲೀಟರ್ ಇಂಧನ ಟ್ಯಾಂಕ್ ಇದರಲ್ಲಿದೆ. ಬೈಕಿನ ಒಟ್ಟು ತೂಕ 184 ಕೆ.ಜಿ. ಆಗಿದೆ.

ಬಣ್ಣಗಳು ಮತ್ತು ಬೆಲೆ

ಈ ಬೈಕ್ ಒಟ್ಟು ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷವೆಂದರೆ ಇದರಲ್ಲಿ ಕ್ರೋಮ್ ಎಡಿಷನ್ ಕೂಡ ಸೇರಿದೆ. ವಿವಿಧ ಬೈಕ್‌ಗಳ ದೆಹಲಿ ಎಕ್ಸ್‌ ಶೋರೂಂ ದರಗಳು ಈ ಕೆಳಗಿನಂತಿವೆ.

  • ಆಲ್ ಸ್ಟಾರ್ಸ್ ಅರೋರಾ ಗ್ರೀನ್: 2,01,942 ರೂ.
  • ಆಲ್ ಸ್ಟಾರ್ಸ್ ರೆಡ್: 2,01,942 ರೂ.
  • ಆಲ್ ಸ್ಟಾರ್ಸ್ ನೆಬ್ಯುಲಾ ಬ್ಲೂ: 2,07,942 ರೂ.
  • ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ರೆಡ್ ಕ್ಲಾಡ್): 2,07,942 ರೂ.
  • ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ಬ್ಲ್ಯಾಕ್ ಕ್ಲಾಡ್): 2,07,942 ರೂ.
  • ಆಲ್ ಸ್ಟಾರ್ಸ್ ಕ್ರೋಮ್ : 2,15,942 ರೂ.‌

Yezdi Roadster Red Wolf: ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್‌; ಬೆಲೆ ಎಷ್ಟು?

ಗ್ರಾಹಕರಿಗೆ ಭರ್ಜರಿ ಆಫರ್

ಜಾವಾ ಯೆಜ್ಡಿ ಕಂಪನಿಯು ಈ ಬೈಕಿನ ಮೇಲೆ ಭರ್ಜರಿ ವಾರಂಟಿ ಪ್ಯಾಕೇಜ್ ಘೋಷಿಸಿದೆ.

  • 4 ವರ್ಷ ಅಥವಾ 50,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ (ಇದನ್ನು 6 ವರ್ಷಗಳವರೆಗೆ ವಿಸ್ತರಿಸಬಹುದು).
  • 8 ವರ್ಷಗಳವರೆಗೆ ರೋಡ್ ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
  • 5 ವರ್ಷಗಳವರೆಗೆ ವಾರ್ಷಿಕ ನಿರ್ವಹಣೆ (ಎಎಂಸಿ) ಪ್ಯಾಕೇಜ್‌

ವಿಶಿಷ್ಟವಾದ ನಿಯೋ ಕ್ಲಾಸಿಕ್‌ ವಿನ್ಯಾಸ, ಬಲವಾದ ರೋಡ್‌ ಪ್ರಸೆನ್ಸ್‌ ಮತ್ತು ಆಕರ್ಷಕ ಕಾರ್ಯಕ್ಷಮತೆ ಹೊಂದಿರುವ ಜಾವಾ 42 ಎಫ್‌ಜೆ ಬೈಕ್, 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ವ್ಯೂವರ್ಸ್ ಚಾಯ್ಸ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ. ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಜಾವಾ ಯೆಜ್ಡಿ ಶೋರೂಮ್‌ಗಳಲ್ಲಿ ಈ ಹೊಸ ಬೈಕ್ ಬುಕ್ಕಿಂಗ್ ಮತ್ತು ಖರೀದಿಗೆ ಲಭ್ಯವಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani