Dailyhunt
ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಲೂಗಡ್ಡೆ ಬೆಳೆದ ರೈತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ : ಸಂದೀಪ್‌ ರೆಡ್ಡಿ ಮನವಿ

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಲೂಗಡ್ಡೆ ಬೆಳೆದ ರೈತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ : ಸಂದೀಪ್‌ ರೆಡ್ಡಿ ಮನವಿ

Vishwavani 1 week ago

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಸಂಕಷ್ಟದಲ್ಲಿ ಕೂಡ ಹನಿ ನೀರಾವರಿ(Drip irrigation) ಯನ್ನು ಸದ್ಬಳಕೆ ಮಾಡಿಕೊಂಡು ಚಿನ್ನದ ಬೆಳೆ ಬೆಳೆಯುತ್ತಿದ್ದಾರೆ. ರೈತರ ಬೆಳೆಗಳನ್ನು ಕಾಪಾಡಿಕೊಳ್ಳಲು ಜಿಲ್ಲೆಯಲ್ಲಿ ಸಾಕಷ್ಟು ಶೀಥಲೀಕರಣ ಘಟಕಗಳ ಕೊರತೆಯಿದೆ. ಜಿಲ್ಲಾಡಳಿತ ಉಸ್ತುವಾರಿ ಸಚಿವರು ಕೂಡಲೇ ಆಲೂಗಡ್ಡೆ(Potato) ಬೆಳೆದ ರೈತರ ಪರವಾಗಿ ನಿಲ್ಲಬೇಕಿದೆ ಎಂದು ಮನವಿ ಮಾಡಿದರು.

ನಗರಹೊರವಲಯ ನಂದಿಕೋಲ್ಡ್ ಸ್ಟೋರೇಜ್ ಬಳಿ ನಿಂತಿರುವ ನೂರಾರು ಆಲೂಗಡ್ಡೆ ಬೆಳೆಗಾರರ ಟ್ರಾಕ್ಟರ್‌ಗಳನ್ನು ನೋಡಿ ರೈತರ ಜತೆ ಮಾತನಾಡಿದ ನಂತರ ಮಾಧ್ಯಮ ದೊಂದಿಗೆ ಮಾತನಾಡಿದರು.

ಆಲೂಗಡ್ಡೆ ವಾಣಿಜ್ಯ ಬೆಳೆಯಾಗಿದ್ದು ಈ ಬಾರಿ ಉತ್ತಮ ಇಳುವರಿ ಬಂದಿದೆ. ಒಂದು ಮೂಟೆಗೆ 450-500 ರೂಪಾಯಿ ಬೆಲೆಯಿದೆ. ಉತ್ತಮ ಬೆಲೆಯಿದಿದ್ದರೆ 1200 ರಿಂದ 1500 ರೂಪಾಯಿಗೆ ಒಂದು ಮೂಟೆ ಮಾರಾಟ ಮಾಡಬೇಕಿತ್ತು. ಹೀಗಾಗಿ ಹೆಚ್ಚಿನ ಬೆಲೆಯಿದ್ದಾಗ ಮಾರಾಟ ಮಾಡಲು ಶೀಥಲೀಕರಣ ಘಟಕಕ್ಕೆ ತಂದಿದ್ದಾರೆ. ಈಗ ಬಂದಷ್ಟಕ್ಕೆ ಮಾರಿದರೆ ಎಕರೆಗೆ 50 ರಿಂದ ಒಂದು ಲಕ್ಷದ ತನಕ ನಷ್ಟಕ್ಕೆ ಒಳಗಾಗುತ್ತಾರೆ ಎಂದರು.

Vegetables Price: ಗಗನಕ್ಕೇರಿದ ತರಕಾರಿ ಬೆಲೆ, ರಸಂ ಮಾಡ್ತೀವಿ ಸಾಕು ಅಂತಿರೋ ಗ್ರಾಹಕರು!

ಆಲೂಗಡ್ಡೆ, ದ್ರಾಕ್ಷಿ, ಟೊಮೆಟೋ, ಗೋಡಂಬಿ, ದಾಳಿಂಬೆ, ಹೂವು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ, ಬೆಲೆ ಕಡಿಮೆಯಿದ್ದಾಗ ಅವುಗಳನ್ನು ಶೀಥಲೀಕರಣ ಘಟಕಗಳಲ್ಲಿ ಸಂಗ್ರಹ ಮಾಡಿ ಉತ್ತಮ ಬೆಲೆ ಬಂದಾಗ ಮಾರಿಕೊಳ್ಳಲು ಅನುಕೂಲವಾಗುವಂತೆ ಸರಕಾರಿ ಒಡೆತನದ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡುವ ಅಗತ್ಯವಿದೆ. ಈಗಿರುವ ಖಾಸಗಿ ಒಡೆತನ ದ ನಂದಿ ಕೋಲ್ಡ್ ಸ್ಟೋರೇಜ್‌ನಲ್ಲಿ ಆಲೂಗಡ್ಡೆ ಬೆಳೆದ ರೈತರು ಒಂದು ಮೂಟೆಗೆ 4 ತಿಂಗಳ ಮಟ್ಟಿಗೆ 150 ರೂಪಾಯಿ ಬಾಡಿಗೆ ನೀಡಬೇಕಿದೆ. ಇದೇ ಸರಕಾರವಿದ್ದಿದ್ದರೆ ಮೂಟೆಗೆ 50 ರೂಪಾಯಿ ಕೊಡವ ವ್ಯವಸ್ಥೆ ಆಗುತ್ತಿತ್ತು. ಇದರಿಂದ ರೈತರಿಗೂ ಸಹಾಯ ಆಗುತ್ತಿತ್ತು ಎಂದರು.

ಚಿಕ್ಕಬಬಳ್ಳಾಪುರ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕನಿಷ್ಟ 4 ಲಕ್ಷ ಮೂಟೆಗಳನ್ನು ಸಂಗ್ರಹ ಮಾಡುವ ಸರಕಾರಿ ಒಡೆತನದ ಶೀಥಲೀಕರಣ ಘಟಕ ಸ್ಥಾಪನೆ ಮಾಡಿಕೊಡಬೇಕು. ಏಕೆಂದರೆ ಈಗಿರುವ ನಂದಿ ಶೀಥಲೀಕರಣ ಘಟಕದಲ್ಲಿ ಕೇವಲ 2 ಲಕ್ಷ ಮೂಟೆಗಳನ್ನು ಸಂಗ್ರಹ ಮಾಡಬಹುದಷ್ಟೆ. ನಿಮಗೆ ರೈತರ ಪರ ಕಾಳಜಿ ಇದ್ದಲ್ಲಿ ಈ ಕೂಡಲೇ ಒಂದು ಅಥವಾ 2 ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿಸಿಕೊಡಿ ಎಂದು ಮನವಿ ಮಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani