Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡಿಗರ ಸಾಂಬಾರ್‌ ಪ್ರೀತಿಗೆ ಸಂಗೀತದ ಸ್ಪರ್ಶ: ಎಂ.ಟಿ.ಆರ್- ವಾಸು ದೀಕ್ಷಿತ್ ಜುಗಲ್‌ಬಂದಿಯಲ್ಲಿ ಮೂಡಿಬಂತು ವಿಶೇಷ ಸಾಂಬಾರ್ ಆಯಂಥಮ್‌

ಕನ್ನಡಿಗರ ಸಾಂಬಾರ್‌ ಪ್ರೀತಿಗೆ ಸಂಗೀತದ ಸ್ಪರ್ಶ: ಎಂ.ಟಿ.ಆರ್- ವಾಸು ದೀಕ್ಷಿತ್ ಜುಗಲ್‌ಬಂದಿಯಲ್ಲಿ ಮೂಡಿಬಂತು ವಿಶೇಷ ಸಾಂಬಾರ್ ಆಯಂಥಮ್‌

Vishwavani 2 weeks ago

ಬೆಂಗಳೂರು: ಕನ್ನಡಿಗರ ದೈನಂದಿನ ಬದುಕಿನ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಅವಿಭಾಜ್ಯ ಅಂಗವಾಗಿರುವ ಸಾಂಬಾರ್‌ ಮೇಲಿನ ಪ್ರೀತಿಯನ್ನು ಸಂಭ್ರಮಿಸಲು ಪ್ರಮುಖ ಆಹಾರ ಬ್ರ್ಯಾಂಡ್ ಎಂ.ಟಿ.ಆರ್ ಫುಡ್ಸ್ ವಿಶೇಷ ಸಾಂಬಾರ್ ಆಯಂಥಮ್‌ ಅನ್ನು ಲೋಕಾರ್ಪಣೆ ಮಾಡಿದೆ. ಖ್ಯಾತ ಗಾಯಕ ಹಾಗೂ ಸಂಗೀತಗಾರ ವಾಸು ದೀಕ್ಷಿತ್ ಅವರ ದನಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ನಡೆದ ವಿಶೇಷ ಲೈವ್ ಪ್ರದರ್ಶನದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

ಕರ್ನಾಟಕದ ಮನೆಮನಗಳ ರುಚಿ, ಸಾಂಬಾರ್‌ ನೊಂದಿಗಿನ ಭಾವನಾತ್ಮಕ ನೆನಪುಗಳು ಹಾಗೂ ತಲೆಮಾರುಗಳಿಂದ ನಡೆದು ಬಂದಿರುವ ಸಂಪ್ರದಾಯಗಳಿಗೆ ಸಂಗೀತದ ಮೂಲಕ ಗೌರವ ಸಲ್ಲಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ.

ತಲೆಮಾರುಗಳಿಂದಲೂ ಕರ್ನಾಟಕದಲ್ಲಿ ಸಾಂಬಾರ್ ಎನ್ನುವುದು ಕೇವಲ ಒಂದು ಅಡುಗೆಯಾಗಿ ಉಳಿದಿಲ್ಲ, ಬದಲಿಗೆ ಅದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಮುಂಜಾನೆಯ ಬಿಸಿಬಿಸಿ ಇಡ್ಲಿ- ದೋಸೆಯ ಜೊತೆಯಿಂದ ಹಿಡಿದು, ಮಧ್ಯಾಹ್ನ ಹಾಗೂ ರಾತ್ರಿಯ ಕೌಟುಂಬಿಕ ಭೋಜನ ಮತ್ತು ಹಬ್ಬ ಹರಿದಿನಗಳ ವಿಶೇಷ ಊಟದವರೆಗೆ ಎಲ್ಲಾ ಸಂದರ್ಭಗಳಿಗೂ ಸಾಂಬಾರ್ ಇರಲೇ ಬೇಕು. ಭಾಷೆ, ಪ್ರಾಂತ್ಯ ಹಾಗೂ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಈ ಖಾದ್ಯಕ್ಕಿದೆ.

Bangalore News: ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಇಲ್ಲಿನ ಪ್ರತಿ ಮನೆಯೂ ತನ್ನದೇ ಆದ ವಿಶಿಷ್ಟ ರೆಸಿಪಿ, ಮಸಾಲೆ ಹದ ಹಾಗೂ ಸಾಂಬಾರ್‌ ನೊಂದಿಗಿನ ಆಪ್ತವಾದ ಕಥೆಗಳನ್ನು ಹೊಂದಿದೆ. ಹೀಗಾಗಿ ಇದು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಹತ್ತಿರವಾಗಿರುವ ಜೊತೆಗೆ, ಜಾಗತಿಕವಾಗಿಯೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಊಟದ ಮೇಜಿನ ಮೇಲಿನ ಮನದಾಳದ ಮಾತುಕತೆಗಳಿಗೆ ಹಾಗೂ ಹರಟೆಗಳಿಗೆ ಈ ಸಾಂಬಾರ್ ಪ್ರೇರಣೆಯಾಗಿದೆ.

ಪ್ರಖ್ಯಾತ ಸಂಗೀತಗಾರ ವಾಸು ದೀಕ್ಷಿತ್ ಅವರ ಸಹಯೋಗದೊಂದಿಗೆ ಸಿದ್ಧವಾಗಿರುವ ಈ ಗೀತೆಯು, ಕನ್ನಡಿಗರ ದೈನಂದಿನ ಜೀವನದ ಇಂಥದ್ದೇ ಸುಂದರ ಕ್ಷಣಗಳು ಮತ್ತು ನೆನಪುಗಳ ಸಾರವನ್ನು ಅತ್ಯಂತ ಯಶಸ್ವಿಯಾಗಿ ಸೆರೆಹಿಡಿದಿದೆ.

ಕರ್ನಾಟಕದ ಸಾಂಬಾರ್ ಮಸಾಲೆ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಎಂ.ಟಿ.ಆರ್, ರಾಜ್ಯದ ಲಕ್ಷಾಂತರ ಮನೆಗಳ ಅಡುಗೆಮನೆಯ ವಿಶ್ವಾಸಾರ್ಹ ಭಾಗವಾಗಿ ದಶಕಗಳಿಂದಲೂ ಸಾಂಬಾರ್‌ ನ ಅಪ್ಪಟ ಮತ್ತು ಸಾಂಪ್ರದಾಯಿಕ ರುಚಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಇದೀಗ ಬಿಡುಗಡೆಯಾಗಿರುವ ಸಾಂಬಾರ್ ಆಯಂಥಮ್‌ ಮೂಲಕ ಸಂಸ್ಥೆಯು ತನ್ನದೇ ಆದ ಈ ಪರಂಪರೆ ಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದು, ಆಹಾರ, ಸಂಗೀತ ಮತ್ತು ಸಮುದಾಯವನ್ನು ಒಂದುಗೂಡಿಸುವ ಮೂಲಕ ಕನ್ನಡಿಗರ ಬದುಕಿನಲ್ಲಿ ಸಾಂಬಾರ್‌ ಗೆ ಇರುವ ವಿಶಿಷ್ಟ ಸ್ಥಾನವನ್ನು ಸಂಭ್ರಮಿಸಿದೆ.

ಈ ವಿಶೇಷ ಗೀತೆಯ ಅತ್ಯಂತ ಆಕರ್ಷಕ ಅಂಶವೆಂದರೆ, ಇದರಲ್ಲಿ ಕೇಳಿಬರುವ ಸಾರ್ವಜನಿಕರ ಧ್ವನಿ. ಈ ಅಭಿಯಾನದ ಭಾಗವಾಗಿ ಎಂ.ಟಿ.ಆರ್ ಮತ್ತು ವಾಸು ದೀಕ್ಷಿತ್ ಅವರು ಸಾರ್ವಜನಿಕ ರಿಂದ ಸಾಂಬಾರ್‌ ಗೆ ಸಂಬಂಧಿಸಿದ ಅವರದೇ ಆದ ಅಪೂರ್ವ ನೆನಪುಗಳು, ಕಥೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದರು. ಗ್ರಾಹಕರಿಂದ ಬಂದ ಇಂತಹ ನೈಜ ಮತ್ತು ಭಾವನಾತ್ಮಕ ನೆನಪುಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು, ವಾಸು ದೀಕ್ಷಿತ್ ಅವರು ಅದಕ್ಕೊಂದು ಸುಂದರ ಸಂಗೀತ ರೂಪ ನೀಡಿದ್ದಾರೆ. ಈ ಗೀತೆಯು ಸಾಂಬಾರ್ ಕನ್ನಡಿಗರಲ್ಲಿ ಮೂಡಿಸುವ ಆಪ್ತತೆ, ಹಳೆಯ ನೆನಪುಗಳು ಮತ್ತು ನಮ್ಮತನದ ಭಾವನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಧ್ವನಿಸುವಂತೆ ಮೂಡಿಬಂದಿದೆ.

ಈ ಗೀತೆಯ ಬಿಡುಗಡೆಯ ಅಂಗವಾಗಿ, ವಾಸು ದೀಕ್ಷಿತ್ ಅವರು ಬೆಂಗಳೂರಿನಲ್ಲಿ ಸಾಂಬಾರ್ ಆಯಂಥಮ್‌ ಅನ್ನು ಲೈವ್ ಆಗಿ ಪ್ರದರ್ಶಿಸಿದರು. ಈ ಕಾರ್ಯಕ್ರಮವು ಆಹಾರ ಪ್ರಿಯರು, ಸಂಗೀತಾ ಸಕ್ತರು ಮತ್ತು ಗ್ರಾಹಕರನ್ನು ಒಂದುಗೂಡಿಸುವ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಯನ್ನು ಸಂಭ್ರಮಿಸುವ ವೇದಿಕೆಯಾಯಿತು.

ಈ ವಿನೂತನ ಪ್ರಯತ್ನದ ಕುರಿತು ಮಾತನಾಡಿದ ಎಂ.ಟಿ.ಆರ್ ಫುಡ್ಸ್‌ ನ ಸಿಇಓ ಸುನಯ್ ಭಾಸಿನ್ ಅವರು, "ತಲೆಮಾರುಗಳಿಂದಲೂ ಎಂ.ಟಿ.ಆರ್ ಸಂಸ್ಥೆಯು ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಅಪ್ಪಟ ರುಚಿಗಳನ್ನು ಗೌರವಿಸುತ್ತಾ ಬಂದಿದೆ. ಈ ಪೈಕಿ ಸಾಂಬಾರ್ ನಮ್ಮ ಅತ್ಯಂತ ಪ್ರೀತಿಯ ಆಹಾರದ ಸಂಕೇತವಾಗಿದೆ. ಎಂ.ಟಿ.ಆರ್ ಸಾಂಬಾರ್ ಪೌಡರ್ ಮತ್ತು ನಮ್ಮ ಇತರ ಉತ್ಪನ್ನಗಳ ಮೂಲಕ ಲಕ್ಷಾಂತರ ಕುಟುಂಬಗಳ ಊಟ ಹಾಗೂ ನೆನಪುಗಳ ಭಾಗವಾಗುವ ಸೌಭಾಗ್ಯ ನಮಗೆ ಸಿಕ್ಕಿದೆ. ಸಾಂಬಾರ್ ಮೇಲಿರುವ ಕನ್ನಡಿಗರ ಪ್ರೀತಿಯನ್ನು ನಾವು ಸಂಭ್ರಮಿಸಲು ಹೊರಟಾಗ, ಈ ನೆಲದ ಸಂಸ್ಕೃತಿ ಮತ್ತು ಉತ್ಸಾಹವನ್ನು ಪ್ರಾಮಾಣಿಕವಾಗಿ ಬಿಂಬಿಸುವ ಧ್ವನಿಯೊಂದರ ಹುಡುಕಾಟದಲ್ಲಿದ್ದೆವು. ಕರ್ನಾಟಕದ ಮಣ್ಣಿನ ನಂಟು ಹೊಂದಿರುವ ಹಾಗೂ ಸಂಗೀತದ ಮೂಲಕ ಸ್ಥಳೀಯ ಕಥೆಗಳಿಗೆ ಜೀವ ತುಂಬುವ ಅದ್ಭುತ ಸಾಮರ್ಥ್ಯವಿರುವ ವಾಸು ದೀಕ್ಷಿತ್ ಅವರು ಈ ಸಹಯೋಗಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಿದ್ದರು. ಒಂದು ಸರಳವಾದ ಖಾದ್ಯವು ಹೇಗೆ ಕಥೆಗಳು, ಸಂಭಾಷಣೆಗಳು ಮತ್ತು ನಮ್ಮತನದ ಭಾವನೆಯನ್ನು ಜಾಗೃತ ಗೊಳಿಸುತ್ತದೆ ಎಂಬುದನ್ನು ಈ ಗೀತೆಯ ಮೂಲಕ ಜಗತ್ತಿಗೆ ತೋರಿಸುವುದು ನಮ್ಮ ಉದ್ದೇಶ ವಾಗಿತ್ತು" ಎಂದು ಹೇಳಿದರು.

ಎಂ.ಟಿ.ಆರ್ ಜೊತೆಗಿನ ಸಹಯೋಗದ ಕುರಿತು ಮಾತನಾಡಿದ ಸಂಗೀತಗಾರ ವಾಸು ದೀಕ್ಷಿತ್ ಅವರು, "ಒಬ್ಬ ಸಂಗೀತಗಾರನಾಗಿ, ಜನರನ್ನು ಒಂದುಗೂಡಿಸುವ ಕಥೆಗಳಿಗಾಗಿ ನಾನು ಯಾವಾಗಲೂ ಹುಡುಕಾಟ ನಡೆಸುತ್ತಿರುತ್ತೇನೆ. ಕರ್ನಾಟಕದಲ್ಲಿ ಸಾಂಬಾರ್‌ ನಷ್ಟು ಹೆಮ್ಮೆ, ಹಳೆಯ ನೆನಪುಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕುವ ಮತ್ತೊಂದು ವಿಷಯ ನನಗೆ ಸಿಗಲಿಕ್ಕಿಲ್ಲ. ನಾನು ಈ ಆಯಂಥಮ್‌ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ, ಸಾಂಬಾರ್ ಅನ್ನು ಕೇವಲ ಒಂದು ಅಡುಗೆಯಾಗಿ ನೋಡಲಿಲ್ಲ; ಬದಲಿಗೆ ಅದರ ಸುತ್ತಲಿರುವ ಸೌಂಡ್ಸ್, ರಿದಮ್, ನೆನಪುಗಳು ಮತ್ತು ಭಾವನೆಗಳನ್ನು ಕಲ್ಪಿಸಿಕೊಂಡೆ. ತಲೆಮಾರುಗಳಿಂದ ಕರ್ನಾಟಕದ ಆಹಾರ ಸಂಸ್ಕೃತಿಯ ಭಾ ಗವಾಗಿರುವ ಎಂ.ಟಿ.ಆರ್ ಬ್ರ್ಯಾಂಡ್ ಜೊತೆಗೂಡಿ, ನಮ್ಮೆಲ್ಲರ ಈ ಹಂಚಿಕೊಂಡ ಸಾಂಸ್ಕೃತಿಕ ಅನುಭವವನ್ನು ಜನರು ಕೇಳುವ, ಜೊತೆಗೆ ಹಾಡುವ ಮತ್ತು ಒಟ್ಟಾಗಿ ಸಂಭ್ರಮಿಸುವ ಒಂದು ಗೀತೆಯಾಗಿ ಪರಿವರ್ತಿಸಲು ನಾವು ಬಯಸಿದ್ದೆವು. ಪ್ರತಿಯೊಬ್ಬ ಕೇಳುಗನಿಗೂ ಈ ಸಂಗೀತದಲ್ಲಿ ತನ್ನದೇ ಮನೆ, ಕುಟುಂಬ ಅಥವಾ ನೆಚ್ಚಿನ ಸಾಂಬಾರ್‌ನ ನೆನಪು ಮರುಕಳಿಸಲಿದೆ ಎಂಬ ಭರವಸೆ ನನಗಿದೆ" ಎಂದು ಹೇಳಿದರು.

ಈ ಸಾಂಬಾರ್ ಆಯಂಥಮ್‌ ಮೂಲಕ ಎಂ.ಟಿ.ಆರ್ ಸಂಸ್ಥೆಯು ಕರ್ನಾಟಕದ ವೈವಿಧ್ಯಮಯ ಆಹಾರ ಪರಂಪರೆಯನ್ನು ಅರ್ಥಪೂರ್ಣ ಮತ್ತು ಆಧುನಿಕ ಶೈಲಿಯಲ್ಲಿ ಸಂರಕ್ಷಿಸುವ ಹಾಗೂ ಸಂಭ್ರಮಿಸುವ ತನ್ನ ದಶಕಗಳ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆಹಾರ, ಸಂಸ್ಕೃತಿ ಮತ್ತು ಸಾರ್ವಜನಿಕರ ಧ್ವನಿಯನ್ನು ಒಂದುಗೂಡಿಸುವ ಮೂಲಕ, ಪ್ರಾದೇಶಿಕ ಆಹಾರ ಸಂಪ್ರದಾಯಗಳನ್ನು ಸದಾ ಜೀವಂತವಾಗಿಡುವಲ್ಲಿ ಹಾಗೂ ನೈಜ ಕಥೆಗಳು ಮತ್ತು ಹಂಚಿಕೊಂಡ ಸುಂದರ ಅನುಭವಗಳ ಮೂಲಕ ಗ್ರಾಹಕರೊಂದಿಗೆ ಮತ್ತಷ್ಟು ಆಳವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವಲ್ಲಿ ಎಂ.ಟಿ.ಆರ್ ಮುಂಚೂಣಿಯಲ್ಲಿದೆ ಎಂಬುದನ್ನು ಈ ಅಭಿಯಾನವು ಮತ್ತೊಮ್ಮೆ ದೃಢಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani