Dailyhunt Logo
  • Light mode
    Follow system
    Dark mode
    • Play Story
    • App Story
KD The Devil: ಧ್ರುವ ಸರ್ಜಾ ನಟನೆಯ 'KD' ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

KD The Devil: ಧ್ರುವ ಸರ್ಜಾ ನಟನೆಯ 'KD' ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

Vishwavani 3 months ago

ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್‌ನ 'ಕೆಡಿ ದಿ ಡೆವಿಲ್' ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾವೊಂದಕ್ಕೆ ಫ್ಯಾನ್ಸ್ ಶೋ ಹಾಕಲಾಗಿತ್ತು. 'ಕೆಡಿ' ಫ್ಯಾನ್ಸ್ ಶೋ ರದ್ದಾಗಿದೆ (KD Fans Show) ಅನ್ನೋ ಮಾತು ಸಖತ್‌ ಕೇಳಿ ಬಂದಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೈರಲ್‌ ಆಗುತ್ತಿದೆ.

ಕೆಡಿ ಸಿನಿಮಾ ಬೆಳಗಿನ ಶೋಗಳು ಸಾಕಷ್ಟು ಕಡೆಗಳಲ್ಲಿ ರದ್ದಾಗಿದೆ.. ಕಂಟೆಂಟ್ ಬಂದಿಲ್ಲ ಎಂದು ಚಿತ್ರಮಂದಿರಗಳ ಮಾಲೀಕರು ಸ್ಪಷ್ಟನೆ.. ಹೊಂಗಸಂದ್ರದ ಬೃಂದಾ ಚಿತ್ರಮಂದಿರದಲ್ಲಿ 6.30ರ ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ..ಎಂದು ಅಭಿಮಾನಿಯೊಬ್ಬರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Tumbbad 2: ಹಾರರ್‌ ಚಿತ್ರ 'ತುಂಬಾಡ್ 2' ರಿಲೀಸ್‌ ದಿನಾಂಕ ಘೋಷಣೆ!

ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾದ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆ ಬಳಿಕ ಸೆನ್ಸಾರ್‌ನಲ್ಲಿ ಸಮಸ್ಯೆ ಎದುರಾಯ್ತು. ಇದೆಲ್ಲದರ ಮಧ್ಯೆ ಸಿನಿಮಾ ಈಗ ರಿಲೀಸ್‌ ಆಗಿದೆ. 'ಕೆಡಿ' ಸಿನಿಮಾಗೆ ಕೆಲವು ಸಂಸ್ಥೆಗಳಿಂದ ಕ್ಲಿಯರೆನ್ಸ್ ಸಿಗುವುದು ತಡವಾಗಿದೆ. ಹೀಗಾಗಿ ಸಿನಿಮಾವನ್ನು ಕ್ಯೂಬ್ ಹಾಗೂ ಯುಎಫ್‌ಓಗೆ ಕಳಿಸುವುದು ತಡವಾಗಿದೆ. ಹೀಗಾಗಿ ಫ್ಯಾನ್ಸ್‌ ಶೋ ರದ್ದಾಗಿದೆ ಎನ್ನಲಾಗುತ್ತಿದೆ.

ಟ್ರೈಲರ್ ಬಿಡುಗಡೆವರೆಗೂ 'ಕೆಡಿ' ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಜಬರ್ದಸ್ತ್ ಟ್ರೈಲರ್ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ. ಇನ್ನು ಈಗಾಗಲೇ ಸಾಂಗ್ಸ್ ಹಿಟ್ ಆಗಿದೆ.

ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಮೂರು ವರ್ಷಗಳ ಹಿಂದೆ ಸೆಟ್ಟೇರಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ಚಿತ್ರ ಬಿಡುಗಡೆಗೊಳ್ಳಬೇಕಿತ್ತು.

Dacoit OTT Release: ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಚಿತ್ರದಲ್ಲಿದ್ದಾರೆ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವೀಲಿಯಂ ಡೇವಿಡ್ ಛಾಯಾಚಿತ್ರಗ್ರಹಣವಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani