Dailyhunt Logo
  • Light mode
    Follow system
    Dark mode
    • Play Story
    • App Story
ʻಕೆಡಿʼ ಸಿನಿಮಾ ನೋಡಿ ಖುಷಿಯಾದ ಧ್ರುವ ಸರ್ಜಾ ಫ್ಯಾಮಿಲಿ; ಚಿರು ಸರ್ಜಾ ಬಗ್ಗೆ ಪತ್ನಿ ಪ್ರೇರಣಾ ಹೇಳಿದ್ದೇನು?

ʻಕೆಡಿʼ ಸಿನಿಮಾ ನೋಡಿ ಖುಷಿಯಾದ ಧ್ರುವ ಸರ್ಜಾ ಫ್ಯಾಮಿಲಿ; ಚಿರು ಸರ್ಜಾ ಬಗ್ಗೆ ಪತ್ನಿ ಪ್ರೇರಣಾ ಹೇಳಿದ್ದೇನು?

Vishwavani 1 month ago

ಟ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ʻಕೆಡಿʼ ಸಿನಿಮಾವು ಇಂದು (ಏ.30) ತೆರೆಕಂಡಿದೆ. ಜೋಗಿ ಪ್ರೇಮ್‌ ನಿರ್ದೇಶನ ಮಾಡಿರುವ ಈ ಸಿನಿಮಾವು ದೊಡ್ಡಮಟ್ಟದ ಓಪನಿಂಗ್‌ ಪಡೆದುಕೊಂಡಿದೆ. ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರಮೇಶ್‌ ಅರವಿಂದ್‌, ರವಿಚಂದ್ರನ್‌, ರೀಷ್ಮಾ ನಾಣಯ್ಯ ಮುಂತಾದವರು ನಟಿಸಿರುವ ಈ ಸಿನಿಮಾವನ್ನು ಧ್ರುವ ಸರ್ಜಾ ಅವರ ಕುಟುಂಬದ ಸದಸ್ಯರು ಕೂಡ ವೀಕ್ಷಣೆ ಮಾಡಿದ್ದಾರೆ.

ಫಸ್ಟ್‌ ಡೇ ಫಸ್ಟ್‌ ಶೋ ನೋಡಿ, ಮೆಚ್ಚಿಕೊಂಡಿದ್ದಾರೆ. ಧ್ರುವ ಸರ್ಜಾ ಅವರ ನಟನೆಯನ್ನು ಕೊಂಡಾಡಿದ್ದಾರೆ.

ಧ್ರುವನಿಗೆ ತನ್ನ ಅಣ್ಣ ಎಂದರೆ ಪ್ರಾಣ

"ನನಗೆ ಈ ಸಿನಿಮಾ ನೋಡಿ ತುಂಬಾ ಖುಷಿಯಾಗುತ್ತಿದೆ. ಅಣ್ಣ-ತಮ್ಮನ (ಚಿರು-ಧ್ರುವ) ಬಾಂಡಿಂಗ್ ಬಗ್ಗೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಧ್ರುವನಿಗೆ ತನ್ನ ಅಣ್ಣ ಎಂದರೆ ಪ್ರಾಣ, ನನ್ನ ಮಗನಿಗೆ ಒಳ್ಳೆದಾಗಲಿ ಅಂತ ಹಾರೈಸಿದೆ" ಎಂದು ಭಾವುಕರಾಗಿದ್ದಾರೆ ಧ್ರುವ ಸರ್ಜಾ ತಾಯಿ.

Dhruva Sarja: ʻಕೆಡಿʼ ಬಳಿಕ ʻಕ್ರಿಮಿನಲ್ʼ ಆದ ಧ್ರುವ ಸರ್ಜಾ; ಅದ್ದೂರಿಯಾಗಿ ಲಾಂಚ್‌ ಆಯ್ತು ಹೊಸ ಸಿನಿಮಾ!

ಪ್ರೇಮ್‌ ಅವರಿಗೆ ಅಭಿಮಾನಿಯಾಗಿದ್ದೇನೆ

"ಕೆಡಿ ಸಿನಿಮಾದಲ್ಲಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ, ಸಿನಿಮಾ ನೋಡಿ ತುಂಬಾ ಸಂತೋಷವಾಯಿತು, ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಧ್ರುವ ಅವರು ಮಾಡುವ ಚಿತ್ರ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಪತ್ನಿಯಾಗಿ ಅವರ ಪ್ರತಿ ಸಿನಿಮಾದ ಮೇಲೂ ನನಗೆ ಅಪಾರವಾದ ನಿರೀಕ್ಷೆ ಇರುತ್ತದೆ. ನಿರ್ದೇಶಕ ಪ್ರೇಮ್ ಅವರು ಅತ್ಯಂತ ಪ್ರತಿಭಾವಂತ ನಿರ್ದೇಶಕರು, ಅವರ ಕೆಲಸವನ್ನು ಕಂಡು ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ, ಅವರ ಪರಿಶ್ರಮ ತೆರೆಯ ಮೇಲೆ ಎದ್ದು ಕಾಣುತ್ತಿದೆ. ಒಂದು ಸಿನಿಮಾವನ್ನು ರೂಪಿಸಲು ಸಾಕಷ್ಟು ತ್ಯಾಗಗಳು ಬೇಕಾಗುತ್ತವೆ, ಈ ಚಿತ್ರವು ಅತಿದೊಡ್ಡ ಯಶಸ್ಸನ್ನು ಕಾಣಲಿ" ಎಂದು ಧ್ರುವ ಪತ್ನಿ ಪ್ರೇರಣಾ ಹೇಳಿದ್ದಾರೆ.

ಚಿರು ನಮ್ಮೆಲ್ಲರ ಹೃದಯಲ್ಲಿದ್ದಾರೆ

"ಚಿರು ಸರ್ಜಾ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ, ಅವರು ಧ್ರುವನ ಮನಸ್ಸಿನಲ್ಲಿ ಮತ್ತು ನಮ್ಮೆಲ್ಲರ ಹೃದಯದಲ್ಲಿದ್ದಾರೆ. 'ಕೆಡಿ' ಸಿನಿಮಾದ ಪ್ರತಿ ಕಣ್ಣೀರಿನ ಹನಿಯಲ್ಲೂ ಚಿರು ಸರ್ಜಾ ಅವರ ನೆನಪು ಅಡಗಿದೆ. ಈ ಸಿನಿಮಾದಲ್ಲಿ ಧ್ರುವ ಅವರು 'ಕಾಳಿ' ಪಾತ್ರಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಅದಕ್ಕೆ ತಕ್ಕ ಪ್ರತಿಫಲ ಸ್ಕ್ರೀನ್ ಮೇಲೆ ಕಾಣಿಸುತ್ತಿದೆ" ಎಂದು ಪ್ರೇರಣಾ ಭಾವುಕರಾಗಿ ನುಡಿದಿದ್ದಾರೆ.

ಭಾರಿ ಬಜೆಟ್‌ನಲ್ಲಿ ತಯಾರಾಗಿರುವ ಕೆಡಿ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿದೆ. ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು, ವಿಲೀಯಂ ಡೇವಿಡ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani