Dailyhunt Logo
  • Light mode
    Follow system
    Dark mode
    • Play Story
    • App Story
ಕೊಲಂಬೊದಲ್ಲಿ ದೇವದತ್ತ ಶತಕದ ಅಲೆ; ಮೊದಲ ದಿನವೇ ಬೃಹತ್‌ ಮೊತ್ತ ಕಲೆಹಾಕಿದ ಭಾರತ

ಕೊಲಂಬೊದಲ್ಲಿ ದೇವದತ್ತ ಶತಕದ ಅಲೆ; ಮೊದಲ ದಿನವೇ ಬೃಹತ್‌ ಮೊತ್ತ ಕಲೆಹಾಕಿದ ಭಾರತ

Vishwavani 16 hrs ago

ಕೊಲಂಬೊ, ಆ.23: ಕರ್ನಾಟಕದ ದೇವದತ್ತ ಪಡಿಕ್ಕಲ್‌ ಬಾರಿಸಿದ ಮತ್ತೊಂದು ಸೊಗಾಸದ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಭಾನುವಾರ ಆರಂಭಗೊಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ ಭರ್ತಿ 300 ರನ್‌ ಗಳಿಸಿದೆ.

ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಜೋಡಿ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರು ರನ್ ಗಳಿಸುವ ಹೊಯ್ದಾಟದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡರು. ಆತಿಥೇಯ ಶ್ರೀಲಂಕಾ ಬೌಲರ್‌ಗಳು ಇದರ ಪ್ರಯೋಜನ ಪಡೆದು ರಾಹುಲ್‌ ಅವರನ್ನು 18 ರನ್‌ಗೆ ಔಟ್‌ ಮಾಡಿದರೆ, ಯಶಸ್ವಿ ಜೈಸ್ವಾಲ್ (45) ವಿಕೆಟ್‌ ಕಿತ್ತರು.

ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ದೇವದತ್ತ ಪಡಿಕ್ಕಲ್‌ ಗಾಲೆ ಟೆಸ್ಟ್‌ನಂತೆಯೇ ಈ ಪಂದ್ಯದಲ್ಲಿಯೂ ಮಿಂಚಿನ ಶತಕ ಬಾರಿಸಿದರು. ಶುಭಮನ್‌ ಗಿಲ್‌ ಜತೆ ಉತ್ತಮ ಇನಿಂಗ್ಸ್‌ ಕಟ್ಟಿದ ಅವರು 193 ಎಸೆತಗಳಿಂದ 117ರನ್‌ ಗಳಿಸಿದರು. ಈ ಮೂಲಕ ಸತತ ಎರಡು ಶತಕ ಬಾರಿಸಿದ ಸಾಧನೆಗೈದರು. ಗಿಲ್‌ ಅರ್ಧಶತಕ ಬಾರಿಸಿದ ಮರು ಎಸೆತದಲ್ಲೆ ವಿಕೆಟ್‌ ಕಳೆದುಕೊಂಡರು. ಅವರು ಭರ್ತಿ 50 ರನ್‌ ಗಳಿಸಿದರು. ಗಿಲ್‌ ಮತ್ತು ಪಡಿಕ್ಕಲ್‌ ಮೂರನೇ ವಿಕೆಟ್‌ಗೆ 120ರನ್‌ಗಳ ಜತೆಯಾಟ ನಡೆಸಿದರು.

ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ಮಣಿಕಟ್ಟಿಗೆ ಪೆಟ್ಟು ಬಿದ್ದ ಪರಿಣಾಮ ರಿಟೈರ್ಡ್ ಗಾಯದಿಂದ ಮೈದಾನ ತೊರೆಯಬೇಕಾಯಿತು. ಭಾರತದ ಇನ್ನಿಂಗ್ಸ್‌ನ 58 ನೇ ಓವರ್‌ನಲ್ಲಿ ಶ್ರೀಲಂಕಾ ವೇಗಿ ಲಹಿರು ಕುಮಾರ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಪಂತ್‌ 3 ರನ್‌ ಗಳಿಸಿದರು.

50 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರವೀಂದ್ರ ಜಡೇಜಾ

50 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯವಾಡಿದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 43 ರನ್‌ ಗಳಿಸಿ ದಿನದಾಟದ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು. 50 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು.

ಪದಾರ್ಪಣೆ ಮಾಡಿದ 33 ವರ್ಷದ ಸಾರಾಂಶ್ ಜೈನ್‌(4*) ಮತ್ತು ಧ್ರುವ್ ಜುರೆಲ್(7*) ರನ್‌ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ವೈರಲ್‌ ಜ್ವರದಿಂದ ಚೇತರಿಕೆ ಕಾಣದ ಕಾರಣ ಕುಲ್‌ದೀಪ್‌ ಯಾದವ್‌ ಅವರನ್ನು ಈ ಪಂದ್ಯದಿಂದ ಕೈಬಿಡಲಾಯಿತು. ಶ್ರೀಲಂಕಾ ಪರ ಅಸಿತಾ ಫೆರ್ನಾಂಡೋ 46 ರನ್‌ಗೆ 3 ವಿಕೆಟ್‌ ಕಿತ್ತರು. ಉಳಿದಂತೆ ಲಹಿರು ಕುಮಾರ ಮತ್ತು ಕೇಶರ ನುವಂಥ ತಲಾ ಒಂದು ವಿಕೆಟ್‌ ಪಡೆದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani