Dailyhunt Logo
  • Light mode
    Follow system
    Dark mode
    • Play Story
    • App Story
Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

Vishwavani 1 week ago

ಸ್ಯಾಂಡಲ್‌ವುಡ್‌ನ (Sandalwood) ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕೋಮಲ್ (Komal) ಇದೇ ಬಾರಿಗೆ ಇದೇ ಮೊದಲ ಬಾರಿಗೆ ಲಾಯರ್‌ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ಕೋಮಲ್‌ ರಿಯಲ್ ಲೈಫ್‌ನಲ್ಲಿ ಎಲ್‌ ಎಲ್‌ ಬಿ ಓದಿದ್ದಾರೆ.

ತಮ್ಮ ರಿಯಲ್ ಲೈಫ್‌ ಕ್ಯಾರೆಕ್ಟರ್ ಅನ್ನು ತೆರೆಮೇಲೆ ಮಾಡುತ್ತಿದ್ದಾರೆ. ಕೋಮಲ್ ನಟನೆಯ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚಿಗಷ್ಟೆ ಕೋಮಲ್ ನಟನೆಯ ಹೊಸ ಸಿನಿಮಾ 'ತೆನಾಲಿ ಡಿ ಎ LLB' (Tanal DA LLB) ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಆಗಿತ್ತು. ಇದೀಗ ತೆನಾಲಿ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ.

ಕೋಮಲ್ ಕುಮಾರ್ ಹೊಸ ಸಿನಿಮಾ

ಬೆಂಗಳೂರಿನ ವಿಜಯನಗರದ ಮನುವನ ಬಳಿ ಇರುವ ಆದಿಚುಂಚನಗಿರಿ ಮಠದಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಕೋಮಲ್ ಕುಮಾರ್ ಹೊಸ ಸಿನಿಮಾಗೆ ಅಣ್ಣ, ಹಿರಿಯ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಶುಭಹಾರೈಸಿದರು. ವಿಶೇಷ ಎಂದರೆ ಆದಿಚುಂಚನಗಿರಿ ಸ್ವಾಮಿಗಳಾದ ನಿರ್ಮಲಾನಂದ ಮಹಾಸ್ವಾಮೀಜಿ ಕೂಡ ಚಿತ್ರತಂಡಕ್ಕೆ ಶುಭಹಾರೈಸಿದರು.

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

ಇನ್ನು ಸಿನಿಮಾದ ಟೈಟಲೇ ಹೇಳುವ ಹಾಗೆ ನಟ ಕೋಮಲ್‌ ಕುಮಾರ್‌ ಈ ಸಿನಿಮಾದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜ ಜೀವನದಲ್ಲೂ LLB ಓದಿರುವ ಕೋಮಲ್ ಸಿನಿಮಾದಲ್ಲೂ ಕರಿ ಕೋಟು ಹಾಕಿ ಮಿಂಚಲಿದ್ದಾರೆ. ಮುಹೂರ್ತ ಬಳಿಕ ಅಣ್ಣ, ನಟ ಜಗ್ಗೇಶ್ ಅವರು ತಮ್ಮ ಕೋಮಲ್ಗೆ ಕಪ್ಪು ಕೋಟು ಗಿಫ್ಟ್ ಆಗಿ ನೀಡಿದರು. ಬಳಿಕ ಮಾತನಾಡಿದ ನಟ ಜಗ್ಗೇಶ್, ತಮ್ಮನ ಸಿನಿಮಾಗೆ ಶುಭಹಾರೈಸಿದರು. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಇದಾಗಿದೆ ಎಂದು ಹೇಳಿದರು.

ನಟ ಕೋಮಲ್ ಅವರು ಮಾತನಾಡಿ, 'ಲಾಯರ್ ಆಗಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ಈಗ ಸಿನಿಮಾದಲ್ಲಿ ಕರಿ ಕೋಟು ಧರಿಸಿ ಬರುತ್ತಿದ್ದೀನೆ, ಪಾತ್ರ ತುಂಬಾ ಚೆನ್ನಾಗಿದೆ' ಎಂದು ಹೇಳಿದರು. ಇನ್ನೂ ಕೋಮಲ್‌ಗೆ ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. 'ಮೊದಲ ಬಾರಿಗೆ ಕೋಮಲ್ ಅವರ ಜೊತೆ ನಟಿಸುತ್ತಿದ್ದೇನೆ, ಪಾತ್ರದ ಬಗ್ಗೆ ಈಗಲೇ ಜಾಸ್ತಿ ಹೇಳಲು ಸಾಧ್ಯವಿಲ್ಲ' ಎಂದು ಹೇಳಿದರು.

ನಿರ್ದೇಶಕ ಸಿದ್ದ್ರುವ್‌ ಸಿದ್ದು ಮಾತನಾಡಿ ಈ ಕಥೆ ಕೋಮಲ್ ಸರ್ ಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ. ಕಥೆ ಕೇಳಿದಾಗ ಅವರು ಕೂಡ ಇಂಪ್ರೇಸ್ ಆದ್ರು ಕೋಮಲ್ ಸರ್ ನಿಜ ಜೀವನದಲ್ಲಿಯೂ ಲಾಯರ್ ಹಾಗಾಗಿ ನಮ್ಗೆ ಮತ್ತಷ್ಟು ಫ್ಲಸ್ ಆಗುತ್ತೆ .ಜಗ್ಗೇಶ್ ಸರ್ ಮಹೂರ್ತಕ್ಕೆ ಬಂದಿದ್ದು ಖುಷಿ ಕೊಟ್ಟಿದೆ ಇಬ್ಬರು ನಾಯಕಿಯರು ಕೂಡ ಕಥೆ ಕೇಳೀ ಒಪ್ಪಿಕೊಂಡಿದ್ದಾರೆ ಖುಷಿ ಇದೆ ಎಂದರು.

Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

ಈ ಸಿನಿಮಾದಲ್ಲಿ ಮತ್ತೋರ್ವ ನಟಿ ಅಕ್ಷಿತಾ ಬೋಪಯ್ಯ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಸಿದ್ದ್ರುವ್‌ ಸಿದ್ದು ಸೇರಿದಂತೆ ಸಂತೋಷ್‌ ಮಾಯಪ್ಪ, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ, ರೇಣುಕಾ ಪ್ರಸಾದ್‌ ಬಂಡವಾಳ ಹಾಕಿದ್ದಾರೆ. ರಿತ್ವಿಕ್‌ ಮುರಳಿಧರನ್‌ ಸಂಗೀತ ನಿರ್ದೇಶನ ಮಾಡುತ್ತಿದ್ದು ಉದಯ್‌ ಲೀಲಾ ಅವರ ಕ್ಯಾಮೆರಾ ವರ್ಕ್‌ ಸಿನಿಮಾಗಿರಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani