Dailyhunt Logo
  • Light mode
    Follow system
    Dark mode
    • Play Story
    • App Story
Kundapra Kannada Festival!: ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

Kundapra Kannada Festival!: ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

Vishwavani 1 week ago

ಬೆಂಗಳೂರು: ಟೀಮ್ ಕುಂದಾಪುರಿಯ ಭಾನುವಾರ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿರುವ ಕುಂದಾಪ್ರ ಕನ್ನಡ ಉತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ.

ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆ ಯನ್ನ ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ.

ಇಲ್ಲಿ ನೃತ್ಯ ವೈಭವ, ಯಕ್ಷಗಾನ, ವಸ್ತುಪ್ರದರ್ಶನ, ಸಂಸ್ಕ್ರತಿ ಶಿಬಿರ, ಡಿಜೆ ಕುಂದಾಪುರ, ಯುವ ಸಂಗಮ, ಕುಂದಾಪುರ ಸಂವಾದ, ಸಭಾ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ ವೈಭವ, ಕುಂದಾ ಪ್ರದ ಆಚರಣೆಗಳ ಪ್ರದರ್ಶನ, ಕುಂದಾಪ್ರದ ಆಟೋಟ ಸ್ಪರ್ಧೆಗಳು ಸೇರಿ ಹತ್ತು ಹಲವು ಕಾರ್ಯ ಕ್ರಮಗಳು ಇರಲಿದೆ.

ಇದು ಕುಂದಾಪ್ರ ಕನ್ನಡ ಭಾಷೆ, ಬದುಕಿನ ಕಾರ್ಯಕ್ರಮವಷ್ಟೇ. ಕುಂದಾಪುರದವರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ. ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani