Dailyhunt Logo
  • Light mode
    Follow system
    Dark mode
    • Play Story
    • App Story
ಮಗುವಿನ ಮೇಲೆ ಪೋಷಕರ  ಕ್ರೌರ್ಯ: ಎತ್ತರ ಬೆಳೆಯಲೆಂದು ಬಾಗಿಲಿಗೆ ಕಟ್ಟಿಹಾಕಿ ಹಿಂಸೆ; ವೈರಲ್‌ ವಿಡಿಯೊ ಇಲ್ಲಿದೆ

ಮಗುವಿನ ಮೇಲೆ ಪೋಷಕರ ಕ್ರೌರ್ಯ: ಎತ್ತರ ಬೆಳೆಯಲೆಂದು ಬಾಗಿಲಿಗೆ ಕಟ್ಟಿಹಾಕಿ ಹಿಂಸೆ; ವೈರಲ್‌ ವಿಡಿಯೊ ಇಲ್ಲಿದೆ

Vishwavani 1 week ago

ವದೆಹಲಿ, ಜು. 7: ಇತ್ತೀಚೆಗೆ ಪೋಷಕರು ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಮೊಬೈಲ್ ನೋಡುತ್ತ ಸಮಯ ಕಳೆಯುವುದು, ಮಗುವನ್ನು ಒಬ್ಬಂಟಿಯಾಗಿ ಕಾರಿನಲ್ಲಿ ಬಿಡುವುದು ಹೀಗೆ ಜವಾಬ್ದಾರಿ ಇಲ್ಲದ್ದಂತೆ ವರ್ತಿಸಿ ಅನೇಕ ಅವಘಡಗಳು ನಡೆದಿವೆ.

ಈ ನಡುವೆ ದಂಪತಿ ತಮ್ಮ ಸ್ವಂತ ಮಗುವನ್ನೇ ವಿಚಿತ್ರವಾಗಿ ನಡೆಸಿಕೊಂಡಿರುವ ಘಟನೆಯೊಂದು (Viral Video) ವರದಿಯಾಗಿದೆ. ಎತ್ತರ ಹೆಚ್ಚು ಮಾಡಲೆಂದು ಮಗುವಿನ ಕೈ ಕಾಲುಗಳನ್ನು ಕಟ್ಟಿ ಬಾಗಿಲಿಗೆ ನೇತುಹಾಕಿ ಹಿಂಸಿಸಿದ್ದಾರೆ.

ಚಿಕ್ಕ ಮಗುವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವ ಈ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ಬಾಗಿಲಿನ ಚೌಕಟ್ಟಿಗೆ ಕೈ ಕಟ್ಟಿ ಹಾಕಿ ನೇತು ಹಾಕಲಾಗಿರುವುದು, ನೋವಿನಿಂದ ಮಗು ಅಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ವಿಡಿಯೊ ನೋಡಿ:

ಮಗು ಅಳುತ್ತಿರುವುದನ್ನು ಗಮನಿಸಿದ ಪಕ್ಕದ ಮನೆಯ ಮಹಿಳೆಯೊಬ್ಬರು ಧಾವಿಸಿ ಯಾಕೆ ಹಿಂಸಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. "ಮಗುವಿಗೆ ಯಾಕೆ ಹೀಗೆ ಚಿತ್ರಹಿಂಸೆ ನೀಡುತ್ತೀರಾ? ಕೆಳಗಿನ ಮಹಡಿಯವರೆಗೂ ಮಗುವಿನ ಚೀರಾಟ ಕೇಳಿಸುತ್ತಿದೆʼʼ ಎಂದು ವಿಡಿಯೊ ಮಾಡುತ್ತ ಪ್ರಶ್ನಿಸಿದ್ದಾರೆ.

ವಾಟರ್ ಮೆಟ್ರೋದಲ್ಲಿ ಗರ್ಬಾ ನೃತ್ಯ; ಕಿರಿಕಿರಿ ಮಾಡಿದ್ದಕ್ಕೆ ನೆಟ್ಟಿಗರಿಂದ ಕ್ಲಾಸ್‌

ಇದಕ್ಕೆ ಉತ್ತರಿಸಿದ ಮಗುವಿನ ತಾಯಿ, ʼʼಇದು ವೈಯಕ್ತಿಕ ವಿಷಯ. ನೀವು ಮಧ್ಯ ಪ್ರವೇಶಿಸಬೇಡಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾಳೆ. ಅಲ್ಲದೆ ವಿಡಿಯೊ ಮಾಡದಂತೆ ಎಚ್ಚರಿಸಿದ್ದಾಳೆ. ಬಳಿಕ ಮಗುವನ್ನು ಕೆಳಗೆ ಇಳಿಸಿದ ತಂದೆ, "ಮಗು ಕುಳ್ಳ ಇದ್ದಾನೆ. ಅವನ ಎತ್ತರವನ್ನು ಹೆಚ್ಚಿಸುವುದಕ್ಕಾಗಿಯೇ ನಾವು ಈ ರೀತಿ ಬಾಗಿಲಿಗೆ ನೇತುಹಾಕಿದ್ದೇವೆʼʼ ಎಂದು ವಿಚಿತ್ರ ಕಾರಣ ನೀಡಿದ್ದಾರೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ದಂಪತಿಯನ್ನು ಗುರುತಿಸಿ ಆರೋಪ ನಿಜವೆಂದು ಸಾಬೀತಾದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಮೆಂಟ್‌ ಮಾಡಿ, ʼʼಇತರ ದೇಶಗಳಂತೆ ಇಲ್ಲೂ ಮಕ್ಕಳ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಇದರಿಂದ ಪೋಷಕರು ಕಲಿಯಲು ಪಾಠ ಸಿಗುತ್ತದೆʼʼ ಎಂದಿದ್ದಾರೆ. ಮತ್ತೊಬ್ಬರು, ​ʼʼಮಗುವನ್ನು ಈ ರೀತಿ ಕಟ್ಟಿ ನೇತುಹಾಕುವುದರಿಂದ ಎತ್ತರ ಹೆಚ್ಚುತ್ತದೆ ಎಂಬುದು ಮೂರ್ಖತನ. ಈ ರೀತಿ ಹಿಂಸಿಸುವುದು ತಪ್ಪುʼʼ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani