Dailyhunt Logo
  • Light mode
    Follow system
    Dark mode
    • Play Story
    • App Story
ಮೆಲೋಡಿ ಚಾಕೊಲೇಟ್‌ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್‌; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ

ಮೆಲೋಡಿ ಚಾಕೊಲೇಟ್‌ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್‌; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ

Vishwavani 1 month ago

ರೋಮ್: ಇಟಲಿ (italy) ಪ್ರಧಾನಿ ಜಾರ್ಜಿಯಾ ಮೆಲೋನಿ (PM Georgia Meloni) ಅವರನ್ನು ರೋಮ್ (rome) ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿಯಾಗಿರುವ ವಿಡಿಯೋಗಳು (viral video) ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇದರಲ್ಲಿ ಒಂದು ವಿಡಿಯೋದಲ್ಲಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದು ಅನೇಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಇಟಲಿ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ವರ್ಣಿಸಲು ಅವರು ಹಿಂದಿ ಪದಗುಚ್ಛವನ್ನು ಬಳಸಿದ್ದಾರೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ರೋಮ್ ನಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು. ಪ್ರಧಾನಿ ಮೋದಿ ಅವರ ಈ ಭೇಟಿಯು ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಹೊಸ ಅಧ್ಯಾಯ ಎಂದೇ ಕರೆಯಲಾಗುತ್ತದೆ. ಈ ಸಂಬಂಧಗಳನ್ನು ಗಾಢವಾಗಿಸಲು ಎರಡೂ ದೇಶಗಳು ಕೆಲಸ ಮಾಡುತ್ತಿವೆ ಎಂದು ಇಬ್ಬರು ನಾಯಕರು ಕೂಡ ಹೇಳಿದ್ದಾರೆ.

ಅಂಗಡಿಗೆ ದಿನನಿತ್ಯ ಆಗಮಿಸುವ ದನಕ್ಕೆ ಬಿಸಿ ಬಿಸಿ ದೋಸೆ ಆತಿಥ್ಯ: ಹೃದಯ ಗೆದ್ದ ವಿಡಿಯೊ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಮೆಲೋನಿ, ಈ ಸಂದರ್ಭದಲ್ಲಿ ಇಟಲಿ ಮತ್ತು ಭಾರತದ ಸಂಬಂಧಗಳ ಚೈತನ್ಯವನ್ನು ವಿವರಿಸಲು ಹಿಂದಿ ಪದಗುಚ್ಛವನ್ನು ಬಳಸಿದರು. ಅವರು ಮಾತನಾಡುತ್ತಾ, ಭಾರತೀಯ ಪದ 'ಪರಿಶ್ರಮ' ಎಂದರೆ ಕಠಿಣ ಪರಿಶ್ರಮ, ನಿರಂತರ ಬದ್ಧತೆ ಎಂದು ನನಗೆ ತಿಳಿದಿದೆ. ಈ ಪದವನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ 'ಪರಿಶ್ರಮ ಹಿ ಸಫಲ್ತಾ ಕಿ ಕುಂಜಿ ಹೈ ಎಂಬುದನ್ನು ಅತ್ಯಂತ ಜನಪ್ರಿಯ ರೀತಿಯಲ್ಲಿ ಬಳಸಲಾಗುತ್ತದೆ. ಇದರ ಅರ್ಥ ಕಠಿಣ ಪರಿಶ್ರಮವೇ ಯಶಸ್ಸಿಗೆ ಪ್ರಮುಖ ಮತ್ತು ನಾವು ಅದನ್ನು ಈ ರೀತಿಯಲ್ಲಿ, ಕಠಿಣ ಪರಿಶ್ರಮದಿಂದ ನಮ್ಮ ಸಂಬಂಧಗಳನ್ನು ನಿರ್ಮಿಸಲು ಬಳಸುತ್ತೇವೆ. ಇದರಿಂದ ಕೊನೆಗೆ ಯಶಸ್ಸು ದೊರೆಯುವುದು ಎಂದು ಹೇಳಿದರು.

ಪ್ರಧಾನಿ ಮೋದಿಯವರ ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಮತ್ತು ಮುಂದೆ ಆ ಸಂಬಂಧಗಳನ್ನು ಗಾಢವಾಗಿಸಲು ಎರಡೂ ದೇಶಗಳು ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದರು.

'Melodi' Effect: ಮೋದಿ-ಮೆಲೋನಿ ಭೇಟಿ ನಂತರ ಬ್ಲಿಂಕ್‌ಇಟ್‌, ಝೆಪ್ಟೊಗಳಲ್ಲಿ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

ಐದು ರಾಷ್ಟ್ರಗಳ ಪ್ರವಾಸ ಯೋಜನೆಯಲ್ಲಿ ಪ್ರಧಾನಿ ಮೋದಿ ಅವರು ಕೊನೆಗೆ ಮಂಗಳವಾರ ರೋಮ್‌ಗೆ ಆಗಮಿಸಿದರು. ಅಲ್ಲಿ ಅವರನ್ನು ವಿಧ್ಯುಕ್ತವಾಗಿ ಮಿಲಿಟರಿ ಗೌರವದೊಂದಿಗೆ ಸ್ವಾಗತಿಸಲಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani