Dailyhunt Logo
  • Light mode
    Follow system
    Dark mode
    • Play Story
    • App Story
MLA S.N. Subbareddy: ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಶಾಸಕ ಸುಬ್ಬಾರೆಡ್ಡಿ ಕರೆ

MLA S.N. Subbareddy: ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಶಾಸಕ ಸುಬ್ಬಾರೆಡ್ಡಿ ಕರೆ

Vishwavani 2 months ago

ಗುಡಿಬಂಡೆ : ರೈತರ ಅಭಿವೃದ್ದಿಗಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S.N. Subbareddy) ಕರೆ ನೀಡಿದರು.

ಪಟ್ಟಣದಲ್ಲಿ ರೇಷ್ಮೇ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅರ್ಹ ರೈತರಿಗೆ ವಿವಿಧ ಕೃಷಿ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

MLA S.N. Subbareddy: 2 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ

ದೇಶದ ಆರ್ಥಿಕತೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದು ರೈತ ಇಲ್ಲವಾದರೇ ವಿಶ್ವಕ್ಕೆ ಆಹಾರವೇ ಇಲ್ಲದಂತಾಗುತ್ತದೆ. ಈ ಉದ್ದೇಶದಿಂದ ರೈತರಿಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಕೃಷಿ ಯಾಂತ್ರೀಕರಣ ಸೇರಿದಂತೆ ಹನಿ ನೀರಾವರಿ, ತುಂತುರು ನೀರಾವರಿ ಘಟಕಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಇವುಗಳನ್ನು ಪಡೆಯಲು ರೈತರು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಯಾವುದೇ ಮಧ್ಯವರ್ತಿ ಗಳನ್ನು ನಂಬಿ ಮೋಸ ಹೋಗಬಾರದು. ಅಧಿಕಾರಿಗಳೂ ಸಹ ಅರ್ಹ ರೈತರನ್ನು ಗುರ್ತಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರು.

ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ರೇಷ್ಮೇ ಇಲಾಖೆಯ ಗಂಗರಾಜು, ಮುಖಂಡರಾದ ಆದಿರೆಡ್ಡಿ, ವಿಕಾಸ್, ಬಾಬು, ಅಂಬರೀಶ್, ದಪ್ಪರ್ತಿ ನಂಜುಂಡ, ಲಕ್ಷ್ಮೀನಾರಾಯಣ, ರಿಯಾಜ್ ಪಾಷ, ನಾಗರಾಜು, ನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani