Dailyhunt Logo
  • Light mode
    Follow system
    Dark mode
    • Play Story
    • App Story
Monsoon Beauty Trend 2026: ಮಳೆಗಾಲಕ್ಕೆ ಮರಳಿದ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

Monsoon Beauty Trend 2026: ಮಳೆಗಾಲಕ್ಕೆ ಮರಳಿದ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

Vishwavani 13 hrs ago

1/5

ವಾಟರ್‌ಫ್ರೂಫ್ ಹಾಗೂ ಮ್ಯಾಟ್ ಲಿಪ್‌ಸ್ಟಿಕ್‌ಗಳು ಈ ಮಾನ್ಸೂನ್‌ಗೆ ಮರಳಿ, ಟ್ರೆಂಡಿಯಾಗಿವೆ. ಹೌದು, ಎಂದಿನಂತೆ ಮಳೆಗಾಲದಲ್ಲಿ ಹಚ್ಚಿದಾಗ ಹರಡುವ ಲಿಕ್ವಿಡ್ ಹಾಗೂ ಶೈನಿಂಗ್ ಲಿಪ್‌ಸ್ಟಿಕ್ಸ್ ಸದ್ಯ ಸೈಡಿಗೆ ಸರಿದಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಜೆನೆಟ್.

2/5

ಮಾನ್ಸೂನ್‌ನಲ್ಲಿ ಚಾಲ್ತಿಯಲ್ಲಿರುವ ಲಿಪ್‌ಸ್ಟಿಕ್ಸ್

ಹೌದು. ಬ್ಯೂಟಿ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಮಾನ್ಸೂನ್‌ನಲ್ಲಿ ಎದ್ದು ಕಾಣಿಸುವಂತಹ ಬಣ್ಣದ ಜತೆಜತೆಗೆ ನ್ಯಾಚುರಲ್ ಬಣ್ಣದ ಲಿಪ್‌ಸ್ಟಿಕ್‌ಗಳ ಕಾರುಬಾರು ಹೆಚ್ಚಾಗಿದೆಯಂತೆ. ಸ್ಕಾರ್ಲೆಟ್ ರೆಡ್, ವೈಬ್ರೆಂಟ್ ಆರೆಂಜ್, ರೆಡ್, ಪಿಂಕ್, ಪರ್ಪಲ್, ಮಜೆಂತಾ, ಲ್ಯಾವೆಂಡರ್ ಹಾಗೂ ನ್ಯಾಚುರಲ್ ಲುಕ್ ನೀಡುವ ನಾನಾ ಬಣ್ಣದ ನ್ಯೂಡ್ ಶೇಡ್‌ನಂತಹ ಲಿಪ್‌ಸ್ಟಿಕ್ಸ್ ಹಾಗೂ ಲಿಪ್ ಕ್ರಯಾನ್‌ಗಳು ಟ್ರೆಂಡಿಯಾಗಿವೆಯಂತೆ.

3/5

ಔಟಿಂ‌ಗ್‌ಗೆ ಆಯ್ಕೆ ಹೀಗಿರಲಿ

ಸೀಸನ್ ಪ್ರಕಾರ, ಮಳೆಯಲ್ಲಿ ಔಟಿಂಗ್ ಹೋಗುವಾಗ ಯಾವುದೇ ಕಾರಣಕ್ಕೂ ತೀರಾ ಶೈನಿಂಗ್ ಇರುವ ಅಥವಾ ಗ್ಲೋಸಿ ಇರುವಂತಹ ಲಿಪ್‌ಸ್ಟಿಕ್ಸ್ ಆಯ್ಕೆ ಬೇಡ! ತೀರಾ ತಿಳಿ ವರ್ಣದ ಲಿಪ್‌ಸ್ಟಿಕ್‌ ನಾಟ್ ಓಕೆ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ.

ವಾಟರ್‌ಫ್ರೂಫ್ ಲಿಪ್‌ಸ್ಟಿಕ್ಸ್ ಬಳಸುವ ಮುನ್ನ

ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ ಬಳಸುವವರು ಪ್ರತಿನಿತ್ಯ ರಾತ್ರಿ ಮಲಗುವ ವೇಳೆ ಲಿಪ್ ಬಾಮ್ ಅಥವಾ ಜೆಲ್ ಹಚ್ಚಿಕೊಳ್ಳಲೇಬೇಕು. ಇದರಿಂದ ತುಟಿಗಳು ಒರಟಾಗುವುದಿಲ್ಲ. ಬದಲಿಗೆ ಹಚ್ಚಿದಾಗ ತುಟಿಗಳು ಸುಕೋಮಲವಾಗಿ ಕಾಣಿಸುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಜ್ಯಾನೆಟ್.

4/5

ಲಿಪ್‌ಸ್ಟಿಕ್ಸ್ ಬಣ್ಣದ ಆಯ್ಕೆಗೆ ಟಿಪ್ಸ್

ಎಲ್ಲರಿಗೂ ಗೊತ್ತಿರುವಂತೆ, ಗುಲಾಬಿ ಬಣ್ಣ ಎವರ್‌ಗ್ರೀನ್ ಕಲರ್‌ಗಳಲ್ಲೊಂದು. ಆದರೆ, ಈ ಬಣ್ಣ ಎಲ್ಲರಿಗೂ ಹೊಂದುವುದಿಲ್ಲ. ಸೋ, ಕಪ್ಪಗಿರುವವರು ಆದಷ್ಟು ಮಜಂತಾ ಮಿಶ್ರಿತ ಗುಲಾಬಿ ಮ್ಯಾಟ್ ಶೇಡ್ಸ್ ಈ ಸೀಸನ್‌ನಲ್ಲಿ ಬಳಸಬಹುದು. ಮಾನ್ಸೂನ್ ಪಾರ್ಟಿಗೆ ಹೋಗುವವರು ಆದಷ್ಟೂ ಕೂಲ್ ಕಲರ್‌ಗಳಲ್ಲಿ ಲಭ್ಯವಿರುವ ಬಗೆಬಗೆಯ ಮ್ಯಾಟ್ ಅಥವಾ ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳನ್ನು ಬಳಸಬಹುದು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಿಚಾ.

5/5


ವಾಟರ್ ಫ್ರೂಫ್ ಲಿಪ್‌ಸ್ಟಿಕ್‌ ಪ್ರಿಯರಿಗೆ ಸಲಹೆಗಳು

  • ತಿಳಿ ತುಟಿಗೆ ಯಾವುದೇ ಬಣ್ಣವಾದರೂ ಓಕೆ.
  • ಡಾರ್ಕ್ ಆಗಿರುವ ತುಟಿಗಳಿಗೆ ಸೂಕ್ತ ಬಣ್ಣ ಆಯ್ಕೆ ಮಾಡಿ, ಲೇಪಿಸಿ.
  • ಡಾರ್ಕ್ ಸರ್ಕಲ್ ಇರುವ ತುಟಿಗಳಿಗೆ ಲಿಪ್ ಲೈನರ್ ಬಳಸುವುದು ಉತ್ತಮ.
  • ಟ್ರೆಡಿಷನಲ್ ಡ್ರೆಸ್‌ಗೆ ಸೂಕ್ತ ಶೇಡ್‌ನ ಲಿಪ್‌ಸ್ಟಿಕ್ಸ್ ಬಳಸಿ.
  • ಟ್ರೆಡಿಷನಲ್ ಲುಕ್‌ಗೆ ತುಟಿಯ ರಂಗು ಲೈಟಾಗಿದ್ದರೂ ಕೂಡ ಮ್ಯಾಟ್ ಫಿನಿಶಿಂಗ್ ಇರಬೇಕು.
  • ಮಾಲ್‌ಗಳಲ್ಲಿ ವಾಟರ್ ಫ್ರೂಫ್ ಲಿಪ್‌ಸ್ಟಿಕ್ಸ್ ಕೊಳ್ಳುವ ಮುನ್ನ ಟ್ರಯಲ್ ನೋಡಿ ಕೊಳ್ಳಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani