Dailyhunt Logo
  • Light mode
    Follow system
    Dark mode
    • Play Story
    • App Story
ಮೂರು ದಿನಗಳ ಸಾಹಿತ್ಯ,  ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಡಲ್ಲಾಸ್

ಮೂರು ದಿನಗಳ ಸಾಹಿತ್ಯ, ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಡಲ್ಲಾಸ್

Vishwavani 5 days ago

ವರದಿ- ತ್ರಿವೇಣಿ ರಾವ್, ಶಿಕಾಗೊ

ಲ್ಲಾಸ್: ಅಮೆರಿಕನ್ನಡಿಗರ (america kannadigas) ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸಲು ಪ್ರಾರಂಭಿಸಲಾದ ಕನ್ನಡ ಸಾಹಿತ್ಯ ರಂಗದಿಂದ (kannada sahitya ranga) ಪ್ರತಿ ಬಾರಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುವ ನಿರ್ದಿಷ್ಟ ವಿಷಯಾಧಾರಿತ ಸಮ್ಮೇಳನ ಈ ಬಾರಿ ಮಲ್ಲಿಗೆ ಕನ್ನಡ ಕೂಟದ (mallige kannada koota) ಸಹಯೋಗದೊಂದಿಗೆ ಡಲ್ಲಾಸ್ (dallas) ಅದ್ದೂರಿಯಾಗಿ ನಡೆಸಲಾಯಿತು.

ಮೇ 1, 2 ಮತ್ತು 3ರಂದು ನಡೆದ ಮೂರು ದಿನಗಳ ಸಮ್ಮೇಳನ ಸಾಹಿತ್ಯ, ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಅಮೆರಿಕದ ಸಾಹಿತ್ಯಾಸಕ್ತ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿಯ ಸಾಹಿತ್ಯ, ಸಿನಿಮಾ, ಸಂಸ್ಕೃತಿಯ ಅನಾವರಣಗೊಳಿಸಲಾಯಿತು.

'ಸಾಹಿತ್ಯ ಮತ್ತು ಸಿನಿಮಾ' ವಿಷಯವನ್ನು ಆಧರಿಸಿದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ಹಾಗೂ ಚಿಂತಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಈ ಸಂದರ್ಭದಲ್ಲಿ 'ಸಾಹಿತ್ಯ ಮತ್ತು ಸಿನಿಮಾ' ಕುರಿತಾಗಿ ರಚಿಸಲಾದ ಲೇಖನಗಳ ಸಂಕಲನ 'ಬರಹ ಬಿಂಬ' ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ʼʼ2-3 ದಿನ ಅಥವಾ ಮುಂದಿನ ವಾರʼʼ: ಇರಾನ್‌ ವಿರುದ್ಧದ ದಾಳಿಗೆ ಮುಹೂರ್ತ ಫಿಕ್ಸ್‌ ಮಾಡಿದ್ರಾ ಡೊನಾಲ್ಡ್‌ ಟ್ರಂಪ್‌?

ಕಳೆದ ವರ್ಷ ನಿಧನರಾದ ಪತ್ರಕರ್ತ ಶಾಮ್ ಅವರ ಸ್ಮರಣಾರ್ಥ 'ಶಾಮ್ ಡಾಟ್ ಕಾಮ್' ಎಂಬ ಪುಸ್ತಕ ಮತ್ತು ಇತರ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಈ ಕೃತಿಗಳನ್ನು ಸಮ್ಮೇಳನದ ಕೈಪಿಡಿಯೊಂದಿಗೆ ಎಲ್ಲರಿಗೂ ವಿತರಿಸಲಾಯಿತು.

ಮೂರು ದಿನಗಳ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಿನಿಮಾವನ್ನು ಕೇಂದ್ರವಾಗಿಟ್ಟುಕೊಂಡು ಹಲವು ವಿಚಾರಗೋಷ್ಠಿಗಳು, ಸಂವಾದಗಳು ಹಾಗೂ ವಿಶೇಷ ಉಪನ್ಯಾಸಗಳು ನಡೆದವು. ಅಮೆರಿಕನ್ನಡಿಗ ಲೇಖಕರ ಕಥೆಗಳನ್ನು ಆಧರಿಸಿದ ಕಿರುಚಿತ್ರಗಳ ಪ್ರದರ್ಶನ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿತ್ತು. ಕನ್ನಡ ಸಿನಿಮಾಗಳ ಕುರಿತು ಆಯೋಜಿಸಲಾದ 'ಸಿನಿಮಾ ಕ್ವಿಜ್' ಕಾರ್ಯಕ್ರಮದಲ್ಲಿ ಹಿರಿ-ಕಿರಿಯರು ಉತ್ಸಾಹದಿಂದ ಪಾಲ್ಗೊಂಡರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ನಾಡಿನ ಪರಂಪರೆ, ಜನಪದ ಮತ್ತು ಚಲನಚಿತ್ರ ಸಂಗೀತವನ್ನು ಪ್ರತಿಬಿಂಬಿಸುವ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದವು. ಮಕ್ಕಳು, ಯುವಕರು ಮತ್ತು ಮಹಿಳೆಯರು ನೀಡಿದ ನೃತ್ಯ ಪ್ರದರ್ಶನಗಳನ್ನು ನೀಡಿದರು. ಸಂಗೀತ, ನೃತ್ಯ ಮತ್ತು ಮನರಂಜನೆಯ ಸಂಯೋಜನೆಯಾಗಿ ಸಮ್ಮೇಳನವು ಎಲ್ಲರ ಮೆಚ್ಚುಗೆ ಗಳಿಸಿತು. ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೂ ಮೂರು ದಿನಗಳ ಕಾಲ ಅತ್ಯಂತ ರುಚಿಕರವಾದ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಹೊರ್ಮುಜ್‌ ಜಲಸಂಧಿ ಮೇಲಿನ ಹಿಡಿತ ಮತ್ತಷ್ಟು ಬಿಗಿಗೊಳಿಸಿದ ಇರಾನ್‌; ಹೊಸ ಪ್ರಾಧಿಕಾರ ರಚನೆ: ಹಡಗುಗಳ ಸಂಚಾರಕ್ಕೆ ಇನ್ನು ಪೂರ್ವಾನುಮತಿ ಕಡ್ಡಾಯ

ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು 'ಸಾಹಿತ್ಯ ಮತ್ತು ಸಿನಿಮಾ' ವಿಷಯದ ಕುರಿತು ಮಾತನಾಡಿ ಸಾಹಿತ್ಯ ಮತ್ತು ಚಲನಚಿತ್ರಗಳ ನಡುವಿನ ಆಪ್ತ ಸಂಬಂಧವನ್ನು ಮನೋಜ್ಞವಾಗಿ ವಿವರಿಸಿದರು. ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ವಿವಿಧ ಸಮಿತಿಗಳ ಸದಸ್ಯರು, ಸ್ವಯಂಸೇವಕರು ಹಾಗೂ ಸಹಯೋಗಿಗಳಿಗೆ ಧನ್ಯವಾದ ಸಲ್ಲಿಸುವುದರೊಂದಿಗೆ ಮುಕ್ತಾಯಗೊಂಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Vishwavani