Dailyhunt Logo
  • Light mode
    Follow system
    Dark mode
    • Play Story
    • App Story
ನಾಗೇಂದ್ರ ಸ್ಥಾನಕ್ಕೆ ಯಾರು ?: ಅನ್ನಪೂರ್ಣಗೆ ಒಲಿಯುವುದೇ ಮಂತ್ರಿಗಿರಿ?, ಡಿಕೆ, ಬಿಕೆ ಸೋಮವಾರ ದಿಲ್ಲಿಗೆ ಪ್ರಯಾಣ

ನಾಗೇಂದ್ರ ಸ್ಥಾನಕ್ಕೆ ಯಾರು ?: ಅನ್ನಪೂರ್ಣಗೆ ಒಲಿಯುವುದೇ ಮಂತ್ರಿಗಿರಿ?, ಡಿಕೆ, ಬಿಕೆ ಸೋಮವಾರ ದಿಲ್ಲಿಗೆ ಪ್ರಯಾಣ

Vishwavani 2 weeks ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪಕ್ಕೆ ರಾಜೀನಾಮೆ ನೀಡಿರುವ ನಾಗೇಂದ್ರ ಅವರ ಸ್ಥಾನಕ್ಕೆ ಬದಲಿ ಯಾರು ಎನ್ನುವ ಕುತೂಹಲದ ನಡುವೆಯೇ, ಅದೇ ಜಿಲ್ಲೆಯ ಅನ್ನಪೂರ್ಣ ಅವರಿಗೆ 'ಲಕ್' ಹೊಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಬಿಜೆಪಿಯ ಪಾದಯಾತ್ರೆಯ ಉದ್ದೇಶವನ್ನು ನಿಷ್ಕ್ರಿಯಗೊಳಿಸಲು ನಾಗೇಂದ್ರ ರಾಜೀನಾಮೆಗೆ ಹೈಕಮಾಂಡ್ ಸಮ್ಮತಿಸಿತ್ತು. ಆದರೀಗ, ಖಾಲಿಯಾಗಿರುವ ಈ ಸ್ಥಾನ ವನ್ನು ಅದೇ ಸಮುದಾಯಕ್ಕೆ ನೀಡಬೇಕು ಎನ್ನುವ ಒತ್ತಡಗಳು ಹೆಚ್ಚಾಗಿವೆ. ಅದೇ ಸಮುದಾಯದ ಹಲವರ ಹೆಸರು ಓಡುತ್ತಿದ್ದರೂ, ನಾಗೇಂದ್ರ ಅವರ ರಾಜೀನಾಮೆ ಯಿಂದ ತೆರವಾಗಿರುವ ಸ್ಥಾನಕ್ಕೆ ಅದೇ ಜಿಲ್ಲೆಯ, ಅದೇ ಸಮುದಾಯದ ಅನ್ನ ಪೂರ್ಣ ತುಕಾರಾಂ ಅವರಿಗೆ ನೀಡುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

ಅನ್ನಪೂರ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮಹಿಳಾ, ಜಿಲ್ಲಾ ಹಾಗೂ ಸಮುದಾಯದ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರಿಂದ ಮಹಿಳಾ ಕೋಟಾದಲ್ಲಿ ಉಳಿಯುವ ಒಂದು ಸ್ಥಾನವನ್ನು ಬೇರೆಯವರಿಗೆ ನೀಡುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಅಸಮಾಧಾನ ಶುರುವಾಗಿರುವುದರಿಂದ ಹಾಲಿ ಸಚಿವರಿಂದ ರಾಜೀನಾಮೆ ಪಡೆದು, ಬಂಡಾಯವೆದ್ದಿರುವ ಶಾಸಕರಿಗೆ ಆ ಸ್ಥಾನ ನೀಡುವ ಲೆಕ್ಕಾಚಾರದಲ್ಲಿ ನಾಯಕರಿದ್ದರು. ಖಾಲಿಯಿರುವ ಒಂದು ಸ್ಥಾನದೊಂದಿಗೆ, ನಾಗೇಂದ್ರ ಅವರಿಂದ ತೆರವಾದ ಸ್ಥಾನ ಸೇರಿದರೆ ಒಟ್ಟು ಎರಡು ಖಾಲಿ ಇವೆ.

B Nagendra Resignation: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ನಾಗೇಂದ್ರ

ಇದಕ್ಕೆ ಸಾಧ್ಯವಾದರೆ, ಒಕ್ಕಲಿಗ ಸಮುದಾಯದಿಂದ ಒಬ್ಬರ ರಾಜೀನಾಮೆ ಪಡೆಯುವ ಆಲೋಚನೆ ಯಲ್ಲಿ ಹೈಕಮಾಂಡ್ ಇದೆ. ಆದರೆ ಆ 'ಒಬ್ಬರು' ಯಾರು ಎಂಬ ಗೊಂದಲ ಕಗ್ಗಂಟಾಗುವ ಸಾಧ್ಯತೆ ಯಿರುವುದರಿಂದ, ಈಗಿರುವ ಎರಡು ಸ್ಥಾನಗಳಲ್ಲಿಯೇ ಮ್ಯಾನೇಜ್ ಮಾಡುವ ತೀರ್ಮಾ ನಕ್ಕೆ ಹೈಕಮಾಂಡ್ ಬಂದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಮತ್ತೆ ದೆಹಲಿಗೆ: ಈ ಎಲ್ಲ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಮತ್ತೊಮ್ಮೆ ತೆರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಸೋಮವಾರ ರಾಹುಲ್ ಗಾಂಧಿ ಅವರು ಸಮಯ ನೀಡಿ, 3ನೇ ಹಂತದ ಸಂಪುಟ ವಿಸ್ತರಣೆ ಅಂತಿಮಗೊಳಿಸೋಣ ಎನ್ನುವ ಮಾತನ್ನು ಹೇಳಿದ್ದಾರೆ. ಆದ್ದರಿಂದ ಸೋಮವಾರ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿಗೆ ತೆರಳು ತ್ತಿದ್ದಾರೆ.

ಡಿಕೆ ಜತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೂ ಸೋಮವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದ್ದು, ಬಹುತೇಕ ಸೋಮವಾರ 3ನೇ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗಿದೆ. ಈ ನಡುವೆ ದೆಹಲಿಯಲ್ಲಿ ಸೋಮವಾರ ವರಿಷ್ಠರ ಸಭೆ ನಿಗದಿಯಾಗಿರುವ ನಡುವೆಯೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ.

ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಕ್ಕೆ ಕನಿಷ್ಠ ಎಂಟು ಶಾಸಕರು ದೆಹಲಿ ಕದ ತಟ್ಟಿದ್ದಾರೆ. ಭಾನುವಾರ ಇನ್ನಷ್ಟು ಶಾಸಕರು ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಲ್ಲ, ಮುಂದಿನ ಚುನಾವಣೆ ಸ್ಪರ್ಧಿಸುವೆ ಇನ್ನೊಂದೆಡೆ ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸವಾಲು ಹಾಕಿದ್ದ ಮಾಜಿ ಸಚಿವ ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಆದರೆ ಈಗಲ್ಲ ಬದಲಿಗೆ 2028ರಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.

2028ಕ್ಕೆ ಬಿ.ನಾಗೇಂದ್ರ ಎಲ್ಲಿ ಸ್ಪರ್ಧೆ ಮಾಡುತ್ತಾರೋ ಅಲ್ಲಿಯೇ ನಾನೂ ನಿಲ್ಲುವೆ. ಒಬ್ಬ ಭ್ರಷ್ಟಾ ಚಾರಿ ವಿರುದ್ಧ ನಾನೇಕೆ ನಿಲ್ಲಲಿ? ಈಗ್ಯಾಕೆ ನಾನು ಸ್ಪರ್ಧಿಸಲಿ? ಮುಂದಿನ ಚುನಾವಣೆಗೆ ಅವರು ಬರಲಿ, ಅವರು ಎಲ್ಲಿ ನಿಲುತ್ತಾರೋ ನಾನೂ ಅಲ್ಲಿಯೇ ನಿಲ್ಲುತ್ತೇನೆ. ಈಗಲೇ ಜನತಾ ನ್ಯಾಯಾ ಲಯಕ್ಕೆ ಬನ್ನಿ ಎನ್ನುವುದಾದರೆ ಸರಕಾರವನ್ನು ವಿಸರ್ಜನೆ ಮಾಡಿ ಬರಲಿ, ಆಗ ನಾವೂ ಸಿದ್ಧ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಈಗಲ್ಲ, ಮುಂದಿನ ಚುನಾವಣೆ ಸ್ಫರ್ಧೆ

ಇನ್ನೊಂದೆಡೆ ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸವಾಲು ಹಾಕಿದ್ದ ಮಾಜಿ ಸಚಿವ ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಆದರೆ ಈಗಲ್ಲ ಬದಲಿಗೆ 2028ರಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರವೇ 3ನೇ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರೂ ದೆಹಲಿಗೆ ದೌಡು

ಖಾಲಿ ಇರುವ ಎರಡು ಸ್ಥಾನಗಳ ಮೇಲೆ ಎಂಟು ಶಾಸಕರ ಕಣ್ಣು

ನಾಗೇಂದ್ರ ಬುದ್ಧಿವಂತ ಇದ್ದಾನೆ. ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾನೆ. ಅವನ ತೀರ್ಮಾನ ವನ್ನು ನಾನು ಸ್ವಾಗತ ಮಾಡುತ್ತೇನೆ. ಸಣ್ಣಪುಟ್ಟದ್ದು ಎಲ್ಲ ಒಂದು ಕಡೆ ಉಪ್ಪು ಖಾರ ಬೆರೆಸುವಂತ ಹದ್ದು ಇರುತ್ತೆ. ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಅವನಿಗೆ ಗೊತ್ತಿದೆ, ತಾನೊಬ್ಬ ಆರೋಪಿ ಅನ್ನೋದು. ಆರೋಪ ಮುಕ್ತವಾಗುವ ತನಕ ಈಗ ತೆಗೆದುಕೊಂಡಿರುವ ತೀರ್ಮಾನ ಸರಿ.

- ವಿ.ಸೋಮಣ್ಣ ಕೇಂದ್ರ ಸಚಿವ

ಬಿಜೆಪಿ ನಾಯಕರು ನಾಗೇಂದ್ರ ರಾಜೀನಾಮೆಯನ್ನು ಒಂದು ವಿಕೆಟ್ ಬಿದ್ದಿದೆ ಎಂದು ಸಂಭ್ರಮಿ ಸುತ್ತಿದ್ದಾರೆ. ರಾಜಕೀಯ ಎಂದರೆ ಐಪಿಎಲ್ ಕ್ರಿಕೆಟ್ ಪಂದ್ಯವಲ್ಲ. ವಿಕೆಟ್ ಬಿದ್ದಿದೆ ಎನ್ನುವವರು ಮೊದಲು ಬಿಜೆಪಿ ತಂಡದಲ್ಲಿ ಎಷ್ಟು ಜನ ಚಾರ್ಜ್‌ಶೀಟ್ ಹಾಕಿಸಿಕೊಂಡಿದ್ದಾರೆ, ಜೈಲುವಾಸ ಅನುಭವಿಸಿದ್ದಾರೆ, ತನಿಖೆ ಎದುರಿಸುತ್ತಿದ್ದಾರೆ, ಜಾಮೀನಿನ ಮೇಲೆ ಹೊರಗಡೆ ಇದ್ದು ಎಷ್ಟು ಜನ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದಾರೆ ಎಂದು ನೋಡಿಕೊಳ್ಳಲಿ.

-ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ
Dailyhunt
Disclaimer: This content has not been generated, created or edited by Dailyhunt. Publisher: Vishwavani