Dailyhunt Logo
  • Light mode
    Follow system
    Dark mode
    • Play Story
    • App Story
Navaratri Shopping 2026: ಎಲ್ಲೆಡೆ ನವರಾತ್ರಿ ಶಾಪಿಂಗ್‌ ಮೇನಿಯಾ

Navaratri Shopping 2026: ಎಲ್ಲೆಡೆ ನವರಾತ್ರಿ ಶಾಪಿಂಗ್‌ ಮೇನಿಯಾ

Vishwavani 2 days ago

1/5

ನವರಾತ್ರಿ ಶಾಪಿಂಗ್‌ ಮೇನಿಯಾ ಆರಂಭ

ಎಲ್ಲೆಡೆ ನವರಾತ್ರಿ ಶಾಪಿಂಗ್‌ ಮೇನಿಯಾ! ಹೌದು, ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಮುಂಬರುವ ಫೆಸ್ಟೀವ್‌ ಸೀಸನ್‌ಗೆ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಜತೆಗೆ ಎಲ್ಲ ಬಗೆಯ ಮಾರುಕಟ್ಟೆಗಳು ಸಜ್ಜಾಗಿವೆ. ಗ್ರಾಹಕರನ್ನು ಭರಸೆಳೆಯುತ್ತಿವೆ.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಎಲ್ಲಾ ಸಿಟಿಗಳಲ್ಲೂ ನವರಾತ್ರಿಯ ಶಾಪಿಂಗ್‌ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಸೀರೆ ಅಂಗಡಿಗಳು, ಬೊಂಬೆ ಮಾರುವ ಶಾಪ್‌ಗಳು, ಅಲಂಕಾರಿಕ ಸಾಮಗ್ರಿಗಳನ್ನು ಮಾರುವ ಅಂಗಡಿಗಳು, ಪೂಜಾ ಸಾಮಗ್ರಿಗಳ ದುಖಾನ್‌ಗಳು ಸೇರಿದಂತೆ ಎಲ್ಲಾ ಬಗೆಯ ಮಾರುಕಟ್ಟೆಗಳು ರೆಡಿಯಾಗಿವೆ. ಗ್ರಾಹಕರನ್ನು ಸ್ವಾಗತಿಸುತ್ತಿವೆ ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್ ದ್ವಾರಕನಾಥ್.

2/5

ನವರಾತ್ರಿ ಸೀರೆಗಳಿಗಾಗಿ ಭರ್ತಿಯಾದ ಶೋರೂಂಗಳು

ನವರಾತ್ರಿಯ ಸಂಭಮಕ್ಕೆ ಸಾಕ್ಷಿಯಾಗುವ ಕಲರ್ ಕಲರ್‌ ಸೀರೆಗಳು ಇದೀಗ ಶೋರೂಮ್‌ಗಳಲ್ಲಿ ರಾರಾಜಿಸುತ್ತಿವೆ. 9 ದಿನವೂ ಒಂದೊಂದು ಕಲರ್‌ ಉಡುವ ನಾರಿಯರು ಈಗಾಗಲೇ ಹೊಸ ಸೀರೆಗಳನ್ನು ಕೊಳ್ಳಲು ಸೀರೆ ಶಾಪ್‌ಗಳಿಗೆ ಮುಗಿಬೀಳುತ್ತಿದ್ದಾರೆ.

3/5

ನವರಾತ್ರಿಯ ಔಟ್‌ಫಿಟ್ಸ್ ಆಗಮನ

ದಸರಾ ಸಮಯದಲ್ಲಿ ನಡೆಯುವ ಗರ್ಬಾ ಹಾಗೂ ನವರಾತ್ರಿ ಡ್ಯಾನ್ಸ್‌ಗಳಿಗೆ ಧರಿಸುವಂತಹ ಬಗೆಬಗೆಯ ಡಿಸೈನರ್‌ ಲೆಹೆಂಗಾ ಹಾಗೂ ಗಾಗ್ರಾಗಳು ಕೂಡ ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ.

4/5

ದಸರಾ ಬೊಂಬೆಗಳಿಗೆ ಬೇಡಿಕೆ

ಇನ್ನು, ಈ ಬಾರಿಯೂ ಕೂಡ ಮಾರುಕಟ್ಟೆಯಲ್ಲಿ ದಸರಾ ಬೊಂಬೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಗಾಂಧಿ ಬಜಾರ್‌, ಜಯನಗರ, ಮಲ್ಲೇಶ್ವರ ಸೇರಿದಂತೆ ನಗರದ ನಾನಾ ಕಡೆ ನಾನಾ ಬಗೆಯ ಹೊಸ ದಸರಾ ಬೊಂಬೆಗಳು ಆಗಮಿಸಿವೆ.

5/5

ರಾರಾಜಿಸುತ್ತಿರುವ ಗೃಹಾಲಂಕಾರ-ಪೂಜಾ ಸಾಮಗ್ರಿಗಳು

ನವರಾತ್ರಿಯ ರಂಗು ಹೆಚ್ಚಿಸಲು ಬಾಗಿಲು ತೋರಣದಿಂದಿಡಿದು, ನಾನಾ ಬಗೆಯ ಪೂಜಾ ಸಾಮಗ್ರಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇವಿಯ ಪೂಜೆಗೆ ಅಗತ್ಯವಿರುವಂತಹ ವಸ್ತುಗಳು ಹೊಸ ರೂಪದಲ್ಲಿ ಟ್ರೆಡಿಷನಲ್‌ ಲುಕ್‌ ನೀಡಲು ಬಂದಿವೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani