Dailyhunt Logo
  • Light mode
    Follow system
    Dark mode
    • Play Story
    • App Story
Pahlaj Nihalani death: ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ

Pahlaj Nihalani death: ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ

Vishwavani 1 month ago

ಹಿರಿಯ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನರಾಗಿದ್ದಾರೆ (Pahlaj Nihalani death) . ದಶಕಗಳ ಕಾಲದ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ, ಪಹ್ಲಾಜ್ ನಿಹಲಾನಿ ಅವರು ಶೋಲಾ ಔರ್ ಶಬ್ನಮ್, ಆಂಖೇನ್, ಆಗ್ ಹಿ ಆಗ್, ಪಾಪ್ ಕಿ ದುನಿಯಾ ಸೇರಿದಂತೆ ಹಲವಾರು ಹಿಟ್‌ಗಳನ್ನು (CBFC chairman) ನಿರ್ಮಿಸಿದ್ದರು.

ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ (Mumbai) ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

ಪಹ್ಲಜ್ ಅವರೊಂದಿಗೆ ಹಾತ್ಕಡಿ, ಇಜಾಮ್ ಮತ್ತು ಆಗ್ ಕಾ ಗೋಲಾ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಹಿರಿಯ ನಟ ಪ್ರೇಮ್ ಚೋಪ್ರಾ , ಈ ನಷ್ಟದ ಬಗ್ಗೆ ಆಘಾತಕ್ಕೊಳಗಾಗಿದ್ದಾರೆ.

Amruthadhaare Serial: ಮಿಂಚು ಕಿಡ್ನಾಪ್‌, ಗೌತಮ್‌ ಪೊಲೀಸ್‌ ಕಸ್ಟಡಿಗೆ! ಜೈದೇವ್‌ ಅಬ್ಬರ ಶುರು

"ನಾನು ಪಹ್ಲಜ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವರು ಅತ್ಯಂತ ಅದ್ಭುತ ನಿರ್ಮಾಪಕರಾಗಿದ್ದರು ಚಲನಚಿತ್ರೋದ್ಯಮಕ್ಕೆ ಅನೇಕ ಹೊಸ ಮುಖಗಳನ್ನು ಪರಿಚಯಿಸಿದರು. ಅವರು ನನಗೆ ತುಂಬಾ ಹತ್ತಿರವಾಗಿದ್ದರು, ದುರದೃಷ್ಟವಶಾತ್ ಅವರನ್ನು ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ ಆದರೆ ಇದು ನನಗೆ ಅತ್ಯಂತ ವೈಯಕ್ತಿಕ ನಷ್ಟವಾಗಿದೆ" ಎಂದು ಹೇಳಿಕೊಂಡಿದ್ದಾರೆ.

ಬಂಗಾಳಿ ನಟ ಪ್ರೊಸೆನ್‌ಜಿತ್ ಚಟರ್ಜಿ ಪಹ್ಲಾಜ್ "ನಾನು ಮುಂಬೈನಲ್ಲಿ ಪಹ್ಲಾಜ್ ಜಿ ನಿರ್ಮಿಸಿದ ಬಂಗಾಳಿ ಚಿತ್ರದ ಚಿತ್ರೀಕರಣದಲ್ಲಿದ್ದೆ ಮತ್ತು ನಾನು ಅವರನ್ನು ಭೇಟಿಯಾದದ್ದು ಹೀಗೆ. ಚಿತ್ರೀಕರಣದ ಸಮಯದಲ್ಲಿ, ಅವರು ನನಗೆ ಒಂದು ವಿಷಯವಿದೆ ಮತ್ತು ಡೇವಿಡ್ ಧವನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಹೇಳಿದರು. ಆದ್ದರಿಂದ, ನಂತರ ನಾವು ಆಂಧಿಯಾನ್‌ನೊಂದಿಗೆ ಪ್ರಾರಂಭಿಸಿದೆವು. ಮುಂಬೈನಲ್ಲಿ ನಮ್ಮ ಕಾಲದ ಅನೇಕ ಉನ್ನತ ನಟರಿಗೆ ಬ್ರೇಕ್ ನೀಡಿದ ಒಬ್ಬ ಮಹಾನ್ ವ್ಯಕ್ತಿ, ನಿಧನದ ಸುದ್ದಿ ನಿಜಕ್ಕೂ ದುಃಖಕರ ಎಂದು ಬರೆದುಕೊಂಡಿದ್ದಾರೆ.

ನಟಿ ಶಿಲ್ಪಾ ಶಿರೋಡ್ಕರ್ ಪಹ್ಲಾಜ್ ಅವರ 1993 ರ ಬ್ಲಾಕ್ಬಸ್ಟರ್ ಆಂಖೇನ್ ಚಿತ್ರದಲ್ಲಿ ನಟಿಸಿದರು. "ಪಹ್ಲಾಜ್ ಜಿ ಯಾವಾಗಲೂ ಸೆಟ್‌ನಲ್ಲಿ ನಗುತ್ತಾ ಮತ್ತು ಎಲ್ಲರಿಗೂ ಆರಾಮದಾಯಕವಾಗಿಸುತ್ತಿದ್ದರು. ಅವರು ಸೆಟ್‌ನಲ್ಲಿ ಮೊದಲು ಬರುವ ವ್ಯಕ್ತಿಯಾಗಿದ್ದರು. ಚಂದ್ರಮುಖಿ ಪಾತ್ರಕ್ಕೆ ನಾನು ಸರಿಯಾದ ಆಯ್ಕೆಯಲ್ಲ ಎಂದು ಅನೇಕ ಜನರು ಹೇಳಿದ್ದರೂ ಸಹ ಅವರು ಆಂಖೇನ್‌ಗೆ ನನ್ನನ್ನು ಸಹಿ ಹಾಕಿದರು.

ನನಗೆ ಆ ಪಾತ್ರ ಸಿಕ್ಕಿತು. ಅವರು ಯಾವಾಗಲೂ ನನ್ನನ್ನು ಶಿಲ್ಪು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವರು ಯಾವಾಗಲೂ ತನಗೆ ಅನಿಸಿದ್ದನ್ನ. ಅವರಂತಹ ವ್ಯಕ್ತಿ ಸಿಗುವುದು ಅಪರೂಪ," ಎಂದು ಹೇಳಿಕೊಂಡಿದ್ದಾರೆ.

Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ್ರಾ ದಂಪತಿ?

ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್‌ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು.

Dailyhunt
Disclaimer: This content has not been generated, created or edited by Dailyhunt. Publisher: Vishwavani