Dailyhunt Logo
  • Light mode
    Follow system
    Dark mode
    • Play Story
    • App Story
Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

Vishwavani 3 months ago

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ (Peddi Cinema) ಜೂನ್ 4ರಂದು ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಒಂದಷ್ಟು ಗ್ಲಿಂಪ್ಸ್ ನಲ್ಲಿ ರಾಮ್ ಚರಣ್ (Ram Charan) ಅವತಾರ ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.

ಪೆದ್ದಿಯಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶಿವಣ್ಣ (Shiva Rajkumar) ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ.

ಗೌರ್‌ನಾಯ್ಡು ಎಂಬ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಕುಸ್ತಿ ಅಖಾಡದಲ್ಲಿ ಅವರು ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು‌ ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರನ್ನು ನೋಡಿ ಥ್ರಿಲ್ ಆಗಿದ್ದಾರೆ.

Akshay Kumar: ಅಕ್ಷಯ್‌ ಕುಮಾರ್‌ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಟೀಸರ್‌ ಔಟ್‌!

ಉಪ್ಪೆನ ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani