Dailyhunt Logo
  • Light mode
    Follow system
    Dark mode
    • Play Story
    • App Story
Peddi Movie Twitter Review: ರಾಮ್‌ಚರಣ್‌ ʻಪೆದ್ದಿʼ ಸಿನಿಮಾಗೆ  ಫ್ಯಾನ್ಸ್‌ ಬಹುಪರಾಕ್‌! ಶಿವಣ್ಣ ಪಾತ್ರಕ್ಕೂ ಮೆಚ್ಚುಗೆ

Peddi Movie Twitter Review: ರಾಮ್‌ಚರಣ್‌ ʻಪೆದ್ದಿʼ ಸಿನಿಮಾಗೆ ಫ್ಯಾನ್ಸ್‌ ಬಹುಪರಾಕ್‌! ಶಿವಣ್ಣ ಪಾತ್ರಕ್ಕೂ ಮೆಚ್ಚುಗೆ

Vishwavani 1 week ago

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ' ಇಂದು (Peddi Movie) (ಜೂನ್ 4) ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಕರ್ನಾಟಕದಾದ್ಯಂತ 'ಪೆದ್ದಿ' ಹವಾ ಜೋರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social media) ಲೈವ್ ಅಪ್‌ಡೇಟ್‌ಗಳು ಹರಿದುಬರುತ್ತಿವೆ.

ಬೆಂಗಳೂರಿನಲ್ಲಿ ಅಭಿಮಾನಿಗಳು ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸುತ್ತಿದ್ದಾರೆ. ಇನ್ನು, ಶಿವರಾಜ್​​ಕುಮಾರ್ (Shivarajkumar) ಪಾತ್ರವನ್ನು ಜನರು ಕೊಂಡಾಡಿದ್ದಾರೆ. ಹಾಡುಗಳ ವಿಶ್ಯುವಲ್ಸ್ ಸೂಪರ್ ಆಗಿದ್ದು, ಎಮೋಷನ್ಸ್ ಜೊತೆ ಬ್ಲಾಕ್‌ಬಸ್ಟರ್ ಆಗಿದೆ' ಎಂದು ಕೊಂಡಾಡಿದ್ದಾರೆ.

ಉತ್ತಮ ಪ್ರತಿಕ್ರಿಯೆ

ಚಿತ್ರ ಆರಂಭದ ದೃಶ್ಯದಿಂದ ಕೊನೆಯವರೆಗೂ ರೋಮಾಂಚನಕಾರಿಯಾಗಿದೆ ಎಂದು ರಾಮ್ ಚರಣ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ವಿಶೇಷವಾಗಿ ರಾಮ್ ಚರಣ್ ಅವರ ಬಾಡಿ ಬಿಲ್ಡಿಂಗ್ ಲುಕ್ ಮತ್ತು ಪವರ್‌ಫುಲ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

Bigg Boss Kannada 13: ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ಶೋ ʻಬಿಗ್‌ ಬಾಸ್‌ʼ! ಪ್ರೋಮೋ ಔಟ್‌

ಎಆರ್ ರೆಹಮಾನ್ ಒದಗಿಸಿದ ಹಾಡುಗಳು ಮತ್ತು ರಾಮ್ ಚರಣ್ ಅವರ ಮಾಸ್ ನೃತ್ಯದ ಹೆಜ್ಜೆಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಜಾನ್ವಿ ಕಪೂರ್ ಅವರ ಗ್ಲಾಮರ್ ಮಾಸ್ ಪ್ರೇಕ್ಷಕರನ್ನು ರಂಜಿಸಿದೆ. ಆದಾಗ್ಯೂ, ಮೊದಲಾರ್ಧದಲ್ಲಿ ಲವ್ ಟ್ರ್ಯಾಕ್ ಚೆನ್ನಾಗಿ ವರ್ಕೌಟ್ ಆಗಿಲ್ಲ ಮತ್ತು ಚಿತ್ರಕಥೆಯು ಅಲ್ಲೊಂದು ಇಲ್ಲೊಂದು ನಿಧಾನವಾಗಿದೆ ಎಂದು ಕೆಲವರು ಹೇಳುತ್ತಾರೆ.

ರಾಮ್ ಚರಣ್ ಅಭಿನಯ ಅತ್ಯಂತ ಭಾವುಕ

ಕೊನೆಯ 40 ನಿಮಿಷಗಳ ಸಾಹಸ ದೃಶ್ಯಗಳು, ಪೆಹಿಲಾವನ್ ಹೋರಾಟದ ಸನ್ನಿವೇಶಗಳು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಾಮ್ ಚರಣ್ ಅವರ ಅಭಿನಯವು ಉತ್ತುಂಗದಲ್ಲಿರುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಾಸ್ತವವಾಗಿ, ಚಿತ್ರದುದ್ದಕ್ಕೂ ರಾಮ್ ಚರಣ್ ಅವರ ನಟನೆ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ದೃಶ್ಯಗಳಲ್ಲಿ ರಾಮ್ ಚರಣ್ ಅವರ ಅಭಿನಯವು ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತದೆ .

ಇನ್ನು ಕೆಲವರು ಸಿನಿಮಾ ತುಂಬಾ ಉದ್ದವಾಗಿದೆ. ಎಡಿಟಿಂಗ್ ಬಗ್ಗೆ ಸ್ವಲ್ಪ ಗಮನ ಹರಿಸಿ, ಕೆಲವು ದೃಶ್ಯಗಳನ್ನು ತೆಗೆದುಹಾಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಮೊದಲಾರ್ಧ ಚೆನ್ನಾಗಿದೆ. ಪ್ರೀ-ಇಂಟರ್ವಲ್‌ನಿಂದ ಹಿಡಿದು ಇಂಟರ್ವಲ್ ಬ್ಲಾಕ್‌ವರೆಗಿನ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರದ ಪ್ರಮುಖ ಹೈಲೈಟ್ ಆಗಿವೆ. ರಾಮ್ ಚರಣ್ ಎಂಟ್ರಿ ಸೀನ್ ಮಾಸ್ ಆಗಿದೆ. ಆದರೆ ನಾಯಕಿ ಮತ್ತು ವಿಲನ್ ಟ್ರ್ಯಾಕ್ ಅಷ್ಟಾಗಿ ಕೆಲಸ ಮಾಡಿಲ್ಲ' ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

Aamir Khan : 60ನೇ ವಯಸ್ಸಿನಲ್ಲಿ ಮದುವೆ ತನಗೆ ಸರಿಹೊಂದುವುದಿಲ್ಲ ಎಂದಿದ್ದ ಆಮಿರ್! ಮನಸ್ಸು ಬದಲಾಯಿಸಿದ್ದೇಕೆ?

ಶಿವರಾಜ್‌ಕುಮಾರ್, ಜಾನ್ವಿ ಕಪೂರ್ , ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಬುಚಿ ಬಾಬು ಸನಾ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani