Dailyhunt Logo
  • Light mode
    Follow system
    Dark mode
    • Play Story
    • App Story
ರಾಮ್‌ ಚರಣ್‌ ಬಳಿ ʻಪೆದ್ದಿʼ ಸಿನಿಮಾದ ಬಗ್ಗೆ ವಿಚಾರಿಸಿದ್ದ ಪ್ರಧಾನಿ ನರೇಂದ್ರ ಮೋದಿ; ʻಮೆಗಾ ಪವರ್‌ ಸ್ಟಾರ್‌ʼ ಹೇಳಿದ್ದೇನು?

ರಾಮ್‌ ಚರಣ್‌ ಬಳಿ ʻಪೆದ್ದಿʼ ಸಿನಿಮಾದ ಬಗ್ಗೆ ವಿಚಾರಿಸಿದ್ದ ಪ್ರಧಾನಿ ನರೇಂದ್ರ ಮೋದಿ; ʻಮೆಗಾ ಪವರ್‌ ಸ್ಟಾರ್‌ʼ ಹೇಳಿದ್ದೇನು?

Vishwavani 2 weeks ago

ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇವೆ. ಸದ್ಯ ಚಿತ್ರತಂಡವು ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಈಗಾಗಲೇ ಮುಂಬೈ, ಭೋಪಾಲ್ ಮತ್ತು ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ ಮಾಡಿರುವ ಚಿತ್ರತಂಡ ಇದೀಗ ದೇಶದ ರಾಜಧಾನಿ ದೆಹಲಿಗೆ ತಲುಪಿದೆ.

ಗುರುವಾರ (ಮೇ 28) ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಮ್ ಚರಣ್ ಕೆಲ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮೋದಿ ಬಗ್ಗೆ ಮಾತನಾಡಿದ ರಾಮ್‌ ಚರಣ್

ರಾಮ್ ಚರಣ್ ಜೊತೆಗೆ ನಾಯಕಿ ಜಾನ್ವಿ ಕಪೂರ್, ಬಾಲಿವುಡ್ ನಟರಾದ ದಿವ್ಯೇಂದು ಶರ್ಮಾ ಮತ್ತು ಬೊಮನ್ ಇರಾನಿ ಸೇರಿದಂತೆ ಹಲವರು‌ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಚರಣ್, ಈ ಹಿಂದೆ ತಾವು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ, ಅವರು 'ಪೆದ್ದಿ' ಸಿನಿಮಾದ ಬಗ್ಗೆ ಆಸಕ್ತಿಯಿಂದ ವಿವರಗಳನ್ನು ಕೇಳಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ʻಪೆದ್ದಿ ಚಿತ್ರದ ನಟನೆಗಾಗಿ ರಾಮ್‌ ಚರಣ್‌ಗೆ ನ್ಯಾಷನಲ್‌ ಅವಾರ್ಡ್‌ ಸಿಗಬೇಕುʼ ಎಂದ ನಟ ಶಿವರಾಜ್‌ಕುಮಾರ್‌

ಪೆದ್ದಿ ಬಗ್ಗೆ ಕೇಳಿದ್ದ ಮೋದಿ

"ಕಳೆದ ಬಾರಿ ನಾನು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, 'ಅಸಲಿಗೆ, ಈ 'ಪೆದ್ದಿ' ಸಿನಿಮಾ ಯಾವುದರ ಬಗ್ಗೆ ಮಾಡಿದ್ದೀರಿ?' ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು, 'ಇದು ಒಂದು ರೀತಿಯಲ್ಲಿ ವಿಕಾಸ ಭಾರತವನ್ನು ಪ್ರತಿಬಿಂಬಿಸುವ ಕಥೆ' ಎಂದು ಉತ್ತರಿಸಿದೆ. ಆಗ ಅವರು ನನ್ನೊಂದಿಗೆ ಒಂದು ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡರು" ಎಂದು ರಾಮ್‌ ಚರಣ್ ನೆನಪಿಸಿಕೊಂಡರು.

ಮೋದಿ ಹೇಳಿದ ಕಥೆ ಏನು?

"ಪಶ್ಚಿಮ ಬಂಗಾಳದಲ್ಲಿ ಮೋದಿ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾಗ, ಕೆಲವು ಯುವಕರು ಮೇಲೆ ಜರ್ಸಿ ಮತ್ತು ಕೆಳಗೆ ಲಂಗೋಟಿ ಧರಿಸಿ ಕಾಣಿಸಿಕೊಂಡಿದ್ದರಂತೆ. ಅವರು ಒಂದು ಅತ್ಯಂತ ಮರುಭೂಮಿ ಅಥವಾ ದೂರದ ಹಳ್ಳಿಯಿಂದ ಬಂದವರಾಗಿದ್ದರು. ಸುಮಾರು 40 ವರ್ಷಗಳ ಹಿಂದೆ ಆ ಗ್ರಾಮದಿಂದ 'ಮಹಮ್ಮದ್' ಎಂಬ ಫುಟ್‌ಬಾಲ್ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಿ ಆಡಿದ್ದರಂತೆ. ಆತನನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು, ಇಂದು ಅದೇ ಗ್ರಾಮದ ಶೇ.80ರಷ್ಟು ಯುವಕರು ಫುಟ್‌ಬಾಲ್ ಆಡುತ್ತಿದ್ದಾರೆ ಎಂದು ಮೋದಿ ನನಗೆ ಹೇಳಿದರು. ಒಬ್ಬ ವ್ಯಕ್ತಿಯ ಸ್ಪೂರ್ತಿ ಸಮಾಜದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಲ್ಲದು ಎಂಬುದಕ್ಕೆ ಇದೇ ಸಾಕ್ಷಿ. ನಮ್ಮ 'ಪೆದ್ದಿ' ಕೂಡ ಅಂತಹದ್ದೇ ಒಂದು ಕಥೆ. ಗ್ರಾಮೀಣ ಭಾಗದಿಂದ ಬಂದ ಯುವಕನೊಬ್ಬ ತನ್ನ ಗುರುತಿಗಾಗಿ ಹೇಗೆ ಹೋರಾಡುತ್ತಾನೆ ಎಂಬುದನ್ನು ನೀವು ಸಿನಿಮಾದಲ್ಲಿ ತೋರಿಸಿದ್ದೇವೆ" ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.

Peddi Movie: ಲಕ್ಷಾಂತರ ಜನರ ಎದುರು ದೊಡ್ಡ ಎಡವಟ್ಟು ಮಾಡಿದ ನಟ ರಾಮ್‌ ಚರಣ್!‌ ಕೊನೆಗೆ ಜಸ್‌ಪ್ರೀತ್ ಬುಮ್ರಾ ಬಳಿ ಕ್ಷಮೆ ಕೇಳಿದ್ದೇಕೆ?

"ದೇವರ ದಯೆಯಿಂದ ಇಂತಹ ಅದ್ಭುತ ತಂಡದ ಜೊತೆ ಕೆಲಸ ಮಾಡಲು ಸಾಧ್ಯವಾಯಿತು. ಕಳೆದ ಎರಡೂವರೆ ವರ್ಷಗಳಿಂದ ಸಂಪೂರ್ಣ ಶ್ರದ್ಧೆಯಿಂದ ಈ ಸಿನಿಮಾ ಮಾಡಿದ್ದೇವೆ. ಇದೊಂದು ಅದ್ಭುತ ಮನೋರಂಜನಾತ್ಮಕ, ಸ್ಪೂರ್ತಿದಾಯಕ ಸಿನಿಮಾ. ಪೋಷಕರು ತಮ್ಮ ಮಕ್ಕಳೊಂದಿಗೆ ಥಿಯೇಟರ್‌ಗೆ ಬಂದು ಈ ಸಿನಿಮಾ ನೋಡಬೇಕು, ಇದು ಮಕ್ಕಳಿಗೆ ತುಂಬಾ ಸ್ಫೂರ್ತಿ ನೀಡಲಿದೆ" ಎಂದು ರಾಮ್‌ ಚರಣ್‌ ತಿಳಿಸಿದ್ದಾರೆ.

"ಇದು ಮಣ್ಣಿನ ವಾಸನೆ ಇರುವ ಕಥೆ. ಈ ಹಿಂದೆ ನಾನು ಮಾಡಿದ ಇಂತಹದ್ದೇ ಗ್ರಾಮೀಣ ಹಿನ್ನೆಲೆಯ ಚಿತ್ರಗಳೆಲ್ಲವೂ ದೊಡ್ಡ ಯಶಸ್ಸು ಕಂಡಿವೆ. ಭಾರತದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಹೆಚ್ಚಿನವರು ಬುಡಕಟ್ಟು ಪ್ರದೇಶಗಳಿಂದಲೇ ಬಂದಿದ್ದಾರೆ. 'ಪೆದ್ದಿ' ಪಾತ್ರಕ್ಕೆ ಏನೆಲ್ಲಾ ಬೇಕೋ ಅದಕ್ಕೆ ನನ್ನ ಪ್ರಾಣ ಪಣಕಿಟ್ಟು ನಟಿಸಿದ್ದೇನೆ. ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ ಬೆಂಬಲಿಸಿ" ಎಂದು ರಾಮ್‌ ಚರಣ್‌ ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani