Dailyhunt Logo
  • Light mode
    Follow system
    Dark mode
    • Play Story
    • App Story
ರಾಮ ಮಂದಿರ ದೇಣಿಗೆ ಕಳವು: 1 ರಿಂದ 20 ಲಕ್ಷ ರುಪಾಯಿವರೆಗೆ ದೋಚಿದ ಸಿಬ್ಬಂದಿ

ರಾಮ ಮಂದಿರ ದೇಣಿಗೆ ಕಳವು: 1 ರಿಂದ 20 ಲಕ್ಷ ರುಪಾಯಿವರೆಗೆ ದೋಚಿದ ಸಿಬ್ಬಂದಿ

Vishwavani 1 week ago

ತ್ತರ ಪ್ರದೇಶ: ಅಯೋಧ್ಯೆ (ayodhya) ರಾಮ ಮಂದಿರದ ದೇಣಿಗೆ ಕಳವು (Ram Temple Theft Case) ಪ್ರಕರಣಕ್ಕೆ ಸಂಬಂಧಿಸಿ ಹಲವು ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದರಲ್ಲಿ ಒಬ್ಬೊಬ್ಬರು 1 ಲಕ್ಷ ರೂ. ನಿಂದ 20 ಲಕ್ಷ ರೂ. ವರೆಗೆ ಕದ್ದೊಯ್ದಿದ್ದಾರೆ ಎನ್ನುವುದು ತನಿಖೆ ವೇಳೆ ಕಂಡು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಅವಿನಾಶ್ ಶುಕ್ಲಾ (Avinash Shukla) ಅತೀ ಹೆಚ್ಚು ಪ್ರಮಾಣದಲ್ಲಿ ರಾಮ ಮಂದಿರದ ದೇಣಿಗೆ ಹಣವನ್ನು ಕದ್ದಿರುವುದಾಗಿ (donation theft) ಪೊಲೀಸ್ ದಾಖಲೆಗಳು ತಿಳಿಸಿವೆ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ದಾಖಲೆಗಳ ಪ್ರಕಾರ ಬಂಧಿತ ಆರೋಪಿ ಅವಿನಾಶ್ ಶುಕ್ಲಾ 20 ಲಕ್ಷ ರೂ.ಗೂ ಹೆಚ್ಚು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಇದು ದೇವಾಲಯದ ಹಣ ಕದ್ದವರಲ್ಲಿ ಅತೀ ಹೆಚ್ಚಿನ ಲೂಟಿಯಾಗಿದೆ.

Tumakuru News: ಶಿರಾ ಕಾರ್‌ ಸ್ಫೋಟ; ನಾಡಬಾಂಬ್‌ ಕೊಟ್ಟಿದ್ದ ನಾಲ್ವರು ಅರೆಸ್ಟ್‌

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಪ್ರಾರಂಭಿಸುವ ಮೊದಲೇ ದೇವಸ್ಥಾನದ ಟ್ರಸ್ಟ್ ಆರೋಪಿಗಳಿಂದ ಹಣ ಮರಳಿ ಪಡೆಯುವ ಕಾರ್ಯವನ್ನು ಪ್ರಾರಂಭಿಸಿತ್ತು ಎಂಬುದನ್ನು ಕೂಡ ದಾಖಲೆಗಳು ತೋರಿಸಿವೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ವಿಶೇಷಾ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ರಾಮಕಾಂತ್ ಮಿಶ್ರಾ, ಕರುಣೇಶ್ ಪಾಂಡೆ, ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಮತ್ತು ಮನೀಶ್ ಕುಮಾರ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.

ದೇವಾಲಯದ ಟ್ರಸ್ಟ್ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರು ಅವಿನಾಶ್ ಶುಕ್ಲಾನಿಂದ 20 ಲಕ್ಷ ರೂ. ನಗದು, 1,121 ಅಮೆರಿಕನ್ ಡಾಲರ್, ಬೆಳ್ಳಿಯಂತಹ ಲೋಹದ ವಸ್ತು, ಎರಡು ಚಿನ್ನದ ಸರಗಳು ಮತ್ತು ಒಂದು ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.

Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್‌, Video

ಇನ್ನೋರ್ವ ಆರೋಪಿ ಅನುಕಲ್ಪ್ ಮಿಶ್ರಾನಿಂದ 16 ಲಕ್ಷ ರೂ., ಲವಕುಶ್ ಮಿಶ್ರಾನಿಂದ 14 ಲಕ್ಷ ರೂ., ರಮಾಕಾಂತ್ ಮಿಶ್ರಾನಿಂದ 7 ಲಕ್ಷ ರೂ., ಕರುಣೇಶ್ ಪಾಂಡೆಯಿಂದ 18 ಲಕ್ಷ ರೂ., ಮನೀಶ್ ಕುಮಾರ್ ಯಾದವ್ ನಿಂದ 2 ಲಕ್ಷ ರೂ. ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ನಿಂದ 1 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ದೇವಾಲಯದ ಇತರ ಕೆಲವು ಸಿಬ್ಬಂದಿ ಮೇಲೆ ಪೊಲೀಸರು ನಿಗಾ ವಹಿಸಿದ್ದು, ಜುಲೈ 10ರ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಅದು ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani