Dailyhunt Logo
  • Light mode
    Follow system
    Dark mode
    • Play Story
    • App Story
ರಾಮ ಮಂದಿರ ದೇಣಿಗೆ ಲೂಟಿ: ಆರು ಮಂದಿಯಿಂದ 40 ದಿನ ಕಳವು; ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ

ರಾಮ ಮಂದಿರ ದೇಣಿಗೆ ಲೂಟಿ: ಆರು ಮಂದಿಯಿಂದ 40 ದಿನ ಕಳವು; ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ

Vishwavani 1 week ago

ತ್ತರಪ್ರದೇಶ: ಅಯೋಧ್ಯೆ ರಾಮ ಮಂದಿರದಲ್ಲಿ (ayodhya Ram Mandir) ನಡೆದಿರುವ ದೇಣಿಗೆ ಪೆಟ್ಟಿಗೆ ಹಣ ಕಳ್ಳತನ (donation thef) ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡವು (Special Investigation Team) ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಅವಿನಾಶ್ ಶುಕ್ಲಾನನ್ನು (avinash shukla) ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ.

ಆರು ಜನರು ಸೇರಿ ಸುಮಾರು 40 ದಿನಗಳ ಕಾಲ ಮಂದಿರದ ದೇಣಿಗೆ ಪೆಟ್ಟಿಗೆಯಿಂದ ಲಕ್ಷಾಂತರ ರುಪಾಯಿ ಕಳ್ಳತನ ಮಾಡಿರುವುದಾಗಿ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಭೆಯಲ್ಲಿ ಸೋಮವಾರ ಮೂವರು ಸದಸ್ಯರ ಎಸ್‌ಐಟಿಯ ಮಧ್ಯಂತರ ವರದಿಗಳ ಕುರಿತು ಚರ್ಚೆ ನಡೆಸಲಾಯಿತು.

ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೃಹ ಸಂಜಯ್ ಪ್ರಸಾದ್ ಅವರಿಗೆ ಜೂನ್ 23 ರಂದು ಸಲ್ಲಿಸಲಾದ ಒಂಬತ್ತು ಪುಟಗಳ ವಿಶೇಷ ತನಿಖಾ ವರದಿಯಲ್ಲಿ 30 ವರ್ಷದ ಅವಿನಾಶ್ ಶುಕ್ಲಾನನ್ನು ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ. ಸಂಪೂರ್ಣ ಕಾರ್ಯಾಚರಣೆಯು ಅವರ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ.

ರಾಮ ಮಂದಿರ ದೇಣಿಗೆ ಹಗರಣ: ಪ್ರತಿದಿನ ನಾಪತ್ತೆಯಾಗುತ್ತಿತ್ತು 6-8 ಲಕ್ಷ ರುಪಾಯಿ; ಎಸ್‌ಐಟಿ ತನಿಖೆಯಲ್ಲಿ ಹೊರ ಬರುತ್ತಿದೆ ಆಘಾತಕಾರಿ ಮಾಹಿತಿ

ರಾಮ ಮಂದಿರದ ದೇಣಿಗೆ ಎಣಿಸುವ ಕಾರ್ಯ ನಡೆಸುತ್ತಿದ್ದ ಅವಿನಾಶ್ ಶುಕ್ಲಾ ವಿರುದ್ಧ ಬಲವಾದ ಪುರಾವೆಗಳು ಪತ್ತೆಯಾಗಿರುವುದರಿಂದ ಆತನನ್ನು ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ. ದೇವಾಲಯದ ಎಣಿಕೆ ಕೋಣೆಯೊಳಗೆ ಇತರ ಐವರಿಗೆ ಕಳ್ಳತನ ಮಾಡಲು ಶುಕ್ಲಾ ಸಹಾಯ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ದೇಣಿಗೆ ನಗದು ಮತ್ತು ಸಡಿಲವಾದ ನೋಟುಗಳ ಬಂಡಲ್‌ಗಳನ್ನು ಶುಕ್ಲಾ ಮರೆಮಾಡುತ್ತಿರುವುದು ಕೂಡ ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ.

ರಾಮ ಮಂದಿರದ ದೇಣಿಗೆ ಹಣ ಕದಿಯಲು ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಅವಿನಾಶ್ ಶುಕ್ಲಾಗೆ ಸಹಾಯ ಮಾಡಿದ್ದಾರೆ. ಇದರ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೀಶ್ ಕುಮಾರ್ ಯಾದವ್ ಕೂಡ ಎಣಿಕೆ ಕೋಣೆಯೊಳಗೆ ಅವರೊಂದಿಗೆ ಇದ್ದರು ಎನ್ನಲಾಗಿದೆ.

ದಾಖಲೆಗಳ ಆಧಾರದಲ್ಲಿ ಆರು ಆರೋಪಿಗಳ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿದ್ದರಿಂದ ವಿಶೇಷ ತನಿಖಾ ತಂಡವು ಇವರನ್ನು ಆರೋಪಿಗಳನ್ನಾಗಿ ಗುರುತಿಸಿದೆ. ತನಿಖೆ ವೇಳೆ ಅವಿನಾಶ್ ಶುಕ್ಲಾ ಬಳಿಯಿಂದ 20.39 ಲಕ್ಷ ರೂ. ನಗದು, 1,121 ಯುಎಸ್ ಡಾಲರ್, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಇತರ ಬೆಲೆಬಾಳುವ ವಸ್ತುಗಳು ಮತ್ತು ಒಂದು ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಶುಕ್ಲಾನ ಬ್ಯಾಂಕ್ ವ್ಯವಹಾರಗಳಲ್ಲಿ ಗಳಿಕೆಗಿಂತ ಗಣನೀಯ ಹೆಚ್ಚಳವಾಗಿರುವುದು ಕೂಡ ತನಿಖೆ ವೇಳೆ ಪತ್ತೆ ಹಚ್ಚಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಾಪ್‌ಗಢ ಜಿಲ್ಲೆಯಲ್ಲಿರುವ ಅವಿನಾಶ್ ಶುಕ್ಲಾ ನಿವಾಸದಿಂದ ಪೊಲೀಸರು ರಾಮರಾಜ್ಯ ಕೋಶ್ ಎಂಬ ಶಾಸನವನ್ನು ಹೊಂದಿರುವ ದೇಣಿಗೆ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಸಕ್ರಿಯ ಕ್ಯೂಆರ್ ಕೋಡ್ ಅಂಟಿಸಲಾಗಿತ್ತು. ಅವಿನಾಶ್ ಶುಕ್ಲಾಗೆ ಸೇರಿರುವ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ.

ತಪ್ಪಿದ ಭಾರೀ ಅನಾಹುತ ; ಮುಂಬೈ ವಿಮಾನ ನಿಲ್ದಾಣದಲ್ಲಿ ದೆಹಲಿ-ಬೌಂಡ್ ಏರ್ ಇಂಡಿಯಾ, ಎಐ ಎಕ್ಸ್‌ಪ್ರೆಸ್ ವಿಮಾನ ಮುಖಾಮುಖಿ

ಪ್ರಕರಣಕ್ಕೆ ಸಂಬಂಧಿಸಿ ಎಂಟು ಜನರನ್ನು ಬಂಧಿಸಲಾಗಿದೆ. ಸ್ಥಳೀಯ ನ್ಯಾಯಾಲಯವು ಸೋಮವಾರ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದುವರೆಗೆ ಆರೋಪಿಗಳಿಂದ 79 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani