ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ (Rama Mandira) ಹುಂಡಿ ಹಣ ಕಳವು ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಶ್ರೀರಾಮನ ಪರ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್.
ಭಟ್ ಅವರು ಈ ಬೆಳವಣಿಗೆಯ ಕುರಿತು ವಿಶ್ವವಾಣಿಯ (Vishwavani) ಹಿರಿಯ ಪ್ರತಿನಿಧಿ ರಾಘವ್ ಶರ್ಮಾ ನಿಡ್ಲೆ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಯೋಧ್ಯ ಜಮೀನು ಪ್ರಕರಣದಲ್ಲಿ ಹಿಂದೆ ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಸ್ ಇದ್ದಾಗ ಆಗ ಶ್ರೀರಾಮನ ಪ್ರತಿನಿಧಿಯ ವಕೀಲರಾಗಿ ಕೆ ಎನ್ ಭಟ್ ಅವರು ಕಾರ್ಯ ನಿರ್ವಹಿಸಿದ್ದರು.
ರಾಘವ್ ಶರ್ಮ ನಿಡ್ಲೆ
ಚಂಪತ್‌ರಾಯ್ ಜೊತೆ ಸಾಕಷ್ಟು ಬಾರಿ ಒಟ್ಟಿಗೆ ಕೆಲಸ ಮಾಡಿದ್ದ ಇವರು, ಇದೀಗ ಕಳ್ಳತನ ಪ್ರಕರಣದ ಕುರಿತು ಮಾತನಾಡಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರದಂತಹ ರಾಷ್ಟ್ರಪ್ರಾಮುಖ್ಯತೆಯ ಧಾರ್ಮಿಕ ಸಂಸ್ಥೆಯಲ್ಲಿ ವ್ಯಕ್ತಿ ಆಧಾರಿತ ಆಡಳಿತಕ್ಕಿಂತ ವ್ಯವಸ್ಥೆ ಆಧಾರಿತ ಆಡಳಿತವೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು, 2003ರಿಂದ ಹಲವು ವರ್ಷಗಳ ಕಾಲ ಅಯೋಧ್ಯೆ ಪ್ರಕರಣದ ಕಾನೂನು ಹೋರಾಟದಲ್ಲಿ ಭಾಗಿಯಾಗಿದ್ದ ಅನುಭವವನ್ನು ನೆನಪಿಸಿಕೊಂಡರು. ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದು, ಅವರ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಪ್ರಾಮಾಣಿಕತೆಯ ಬಗ್ಗೆ ವೈಯಕ್ತಿಕವಾಗಿ ಯಾವುದೇ ಅನುಮಾನ ಇಲ್ಲ. ಆದರೆ ಇಷ್ಟೊಂದು ದೊಡ್ಡ ಧಾರ್ಮಿಕ ಸಂಸ್ಥೆಯ ಸಂಪೂರ್ಣ ಅಧಿಕಾರವನ್ನು ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕರಿಸುವುದು ಆಡಳಿತಾತ್ಮಕವಾಗಿ ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಕೆ. ಎನ್ ಭಟ್
ವಿಡಿಯೋ ನೋಡಿ

