Dailyhunt Logo
  • Light mode
    Follow system
    Dark mode
    • Play Story
    • App Story
Rahul Gandhi: ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಾ. ಆನಂದ್ ಕುಮಾರ್

Rahul Gandhi: ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಾ. ಆನಂದ್ ಕುಮಾರ್

Vishwavani 1 week ago

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಬಾಷಣ ಮಾಡಿದ ಸ್ಥಳ ಶುದ್ದೀಕರಣದ ಮೂಲಕ ನೇರವಾಗಿ ಅಸ್ಪೃಷ್ಯತೆ ಆಚರಣೆ ಮಾಡಿದ ವಿರುದ್ಧ ಧ್ವತಿ ಎತ್ತಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಮೇಲೆ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ.

ಪೊಲೀಸ್ ಬಲದ ಮೂಲಕ ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಎಐಸಿಸಿ(AICC) ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ್ ಕುಮಾರ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನ ಮೇಲ್ಮನೆ ಪ್ರತಿಪಕ್ಷ ನಾಯಕರು. ಅವರ ವಿರುದ್ಧ ಅಸ್ಪೃಷ್ಯತೆ ಧೋರಣೆ ಪ್ರದರ್ಶಿಸಿದ್ದರೆ, ಇದನ್ನು ಪ್ರಶ್ನಿಸಿದ ಕೆಳಮನೆ ವಿಪಕ್ಷ ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿರುವುದು ರಣಹೇಡಿತನದ ಕೃತ್ಯವಾಗಿದೆ. ಪರಮೋಚ್ಛ ವಿಪಕ್ಷ ನಾಯಕರ ಹಕ್ಕುಗಳಿಗೆ ಧಕ್ಕೆ ತರಲಾಗಿದೆ. ಈ ರಾಜಕೀಯ ಪ್ರೇರಿತ ಕ್ರಮದ ವಿರುದ್ಧ ದೇಶಾದ್ಯಂತ ಉಗ್ರ ಹೋರಾಟ ನಡೆಸುತ್ತಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಧ್ವನಿ ಎತ್ತಬೇಕು. ಬಿಜೆಪಿ ನಾಯಕರ ಮನುವಾದಿ ಸಿದ್ಧಾಂತ, ಅಸ್ಪೃಷ್ಯತೆ ಧೋರಣೆಯ ಮುಖವಾಡ ಕಳಚಬೇಕು. ಮಾತಿನ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ವಿರೋಧ ಪಕ್ಷದ ಹಕ್ಕುಗಳ ವಿರುದ್ಧ ನಡೆಯುತ್ತಿರುವ ದೊಡ್ಡ ರಾಜಕೀಯ ಸಂಘರ್ಷದ ಹೊಸ ಅಧ್ಯಾಯ ಇದಾಗಿದೆ ಎಂದಿದ್ದಾರೆ.

Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ 'ಶುದ್ಧೀಕರಣ': ಮುನೀಂದ್ರ ಆಕ್ರೋಶ

ಅಸ್ಪೃಶ್ಯತೆ ಮತ್ತು ಸಮಾನತೆಯ ಬಗ್ಗೆ ಮಾತನಾಡುವುದು ಅಪರಾಧವಾಗಿದೆ. ರಾಹುಲ್ ಗಾಂಧಿ ಹೇಳಿಕೆ ತಪ್ಪಿದ್ದರೆ-ತನಿಖೆ ನಡೆಸಬಹುದಿತ್ತು. ಹೇಳಿಕೆ ತಪ್ಪು ಎಂಬುದನ್ನು ಸಾಬೀತುಪಡಿಸುವ ಬದಲು ಎಫ್.ಐ.ಆರ್ ಹಾಕಿ ಅದನ್ನೇ ರಾಜಕೀಯ ಆಯುಧವನ್ನಾಗಿ ಬಳಸಲಾಗುತ್ತಿದೆ. ಉತ್ತರಾ ಖಂಡದ ಹಲ್ದ್ವಾನಿ 'ಶುದ್ಧೀಕರಣ' ವಿವಾದಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿ ಪ್ರಜಾಪ್ರಭುತ್ವದ ಧ್ವನಿ ಅಡಗಿಸುವ ಹುನ್ನಾರ ಕಂಡು ಬಂದಿದ್ದು, ರಾಹುಲ್ ಬಗ್ಗೆ ಬಿಜೆಪಿಗೆ ಭಯ ಆವರಿಸಿದೆ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯ ಮನೋಭಾವದೊಂದಿಗೆ ಜೋಡಿಸಿ, ಸಂಬಂಧಪಟ್ಟವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು. ವಿರೋಧ ಪಕ್ಷದ ನಾಯಕನಿಗೆ ಪ್ರಶ್ನಿಸುವ ಹಕ್ಕು ಎಷ್ಟು ಉಳಿದಿದೆ ಎಂಬುದರ ನಿಜವಾದ ಅಗ್ನಿ ಪರೀಕ್ಷೆ ಇದಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಸಂದೇಶ ನೀಡಿ ದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಅಪರಾಧವಲ್ಲ. ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವೇ ನಿಜವಾದ ರಾಜಕೀಯ ಶಕ್ತಿ ಎಂದು ಡಾ. ಆನಂದ್ ಕುಮಾರ್ ಹೇಳಿದ್ದಾರೆ.

ಮತ್ತೊಂದೆಡೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸೌಹಾರ್ದತೆ ಮೂಡಿಸುವ ಕುರಿತು ಆಡಿರುವ ಅಭಿಪ್ರಾಯಗಳಿಗೂ ಉತ್ತರ ಖಂಡ ಪೊಲೀಸರ ವರ್ತನೆಗಳಿಗೂ ಅಜಗಜಾಂತರ ವ್ಯತ್ಯಾಸ ಗಳಿವೆ. ಭಾಗವತ್ ಅಮೆರಿಕ ನೆಲದಲ್ಲಿ ಹೊಸ ಅವತಾರ ಎತ್ತಿದ್ದಾರೆ. ಆರ್.ಎಸ್.ಎಸ್. ವಿರುದ್ಧ ಅಮೆರಿಕದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲಿ ಸೌಹಾರ್ದದ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಭಾಗವತ್ ಅವರ ಅಮೆರಿಕ ಪ್ರವಾಸವೇ ದೊಡ್ಡ ವಿವಾದದ ಕೇಂದ್ರವಾಗಿದೆ. ನ್ಯೂಯಾರ್ಕ್ ಸೇರಿ ಹಲವೆಡೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಅಮೆರಿಕದ ಸಂಘಟನೆಗಳು ಆರ್.ಎಸ್.ಎಸ್ ಮತ್ತು ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಗಂಭೀರ ಆರೋಪಗಳನ್ನು ಮುಂದಿಟ್ಟಿದೆ. ಭಾಗವತ್ ಅವರ ವೀಸಾ ರದ್ದುಪಡಿಸುವುದು ಸೇರಿದಂತೆ ಹಲವು ಕ್ರಮಗಳಿಗೆ ಶಿಫಾರಸು ಮಾಡಿದೆ.

ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ನಿಜವಾದ ಹಿಂದೂ ಅಲ್ಲ ಎಂಬ ಜ್ಞಾನೋದಯದ ಮಾತುಗಳನ್ನು ಹೇಳಿದ್ದಾರೆ. ದ್ವೇಷದ ಮನಸ್ಥಿತಿಯನ್ನು ಬಿತ್ತಿ ಇದೀಗ ಸೌಹಾರ್ದತೆಯ ಸೋಗು ಹಾಕುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani