Dailyhunt
ರಕ್ಷಣಾ ವಲಯದ ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು: ಒಂದೇ ವರ್ಷ 38,424 ಕೋಟಿ ರುಪಾಯಿ ವಹಿವಾಟು; ಶೇಕಡಾ 63ರಷ್ಟು ಏರಿಕೆ

ರಕ್ಷಣಾ ವಲಯದ ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು: ಒಂದೇ ವರ್ಷ 38,424 ಕೋಟಿ ರುಪಾಯಿ ವಹಿವಾಟು; ಶೇಕಡಾ 63ರಷ್ಟು ಏರಿಕೆ

Vishwavani 2 weeks ago

ವದೆಹಲಿ, ಏ. 2: 2025-26ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು (Defence exports) ಸಾರ್ವಕಾಲಿಕ ಗರಿಷ್ಠ 38,424 ಕೋಟಿ ರುಪಾಯಿ ತಲುಪಿದೆ. ಹಿಂದಿನ ಆರ್ಥಿಕ ವರ್ಷದಲ್ಲಿದ್ದ 23,622 ಕೋಟಿ ರುಪಾಯಿಯಿಂದ ಶೇ. 62.66ರಷ್ಟು ಏರಿಕೆಯಾಗಿದೆ ಎಂದು ಸರ್ಕಾರಿ ಅಧಿಕೃತ ಅಂಕಿ-ಅಂಶಗಳು (Official Government Data) ತಿಳಿಸಿವೆ.

14,802 ಕೋಟಿ ರುಪಾಯಿ ಹೆಚ್ಚಳವು, ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿರುವ ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಿಗೆ ಹೊರಹೋಗುವ ರಕ್ಷಣಾ ಸಾಗಣೆಯಲ್ಲಿನ ನಿರಂತರ ಹೆಚ್ಚಳವನ್ನು ಪ್ರತಿಬಿಂಬಿಸಿದೆ. ಕಳೆದ ಐದು ವರ್ಷಗಳಲ್ಲಿ ರಫ್ತು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದು ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಉಪಸ್ಥಿತಿಯ ಸ್ಥಿರ ವಿಸ್ತರಣೆಯನ್ನು ಸೂಚಿಸುತ್ತದೆ.

ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (DPSU) ಹೆಚ್ಚಿನ ಬೆಳವಣಿಗೆಗೆ ಕಾರಣವಾಗಿವೆ. ರಫ್ತು ವರ್ಷದಿಂದ ವರ್ಷಕ್ಕೆ ಶೇ. 151ರಷ್ಟು ಏರಿಕೆಯಾಗಿ 21,071 ಕೋಟಿ ರು.ಗೆ ತಲುಪಿದೆ. 25ರಲ್ಲಿ ಇದು 8,389 ಕೋಟಿ ರುಪಾಯಿಯಷ್ಟಿತ್ತು. ಖಾಸಗಿ ವಲಯವು ಸ್ಥಿರವಾದ ಲಾಭವನ್ನು ದಾಖಲಿಸಿದೆ. ರಫ್ತು ಶೇ. 14ರಷ್ಟು ಹೆಚ್ಚಾಗಿ 17,353 ಕೋಟಿ ರು.ಗೆ ತಲುಪಿದೆ. ಹಿಂದಿನ ವರ್ಷ ಇದು 15,233 ಕೋಟಿ ರುಪಾಯಿ ಇತ್ತು. ಒಟ್ಟು ರಫ್ತಿನಲ್ಲಿ DPSU ಶೇ. 54.84ರಷ್ಟಿದ್ದರೆ, ಖಾಸಗಿ ಸಂಸ್ಥೆಗಳು ಶೇ. 45.16ರಷ್ಟು ಕೊಡುಗೆ ನೀಡಿವೆ.

ಇರಾನ್ ಯುದ್ಧದ ಮಧ್ಯೆ ಪಾಕಿಸ್ತಾನದಿಂದ ಭಾರತದ ವಿರುದ್ಧ ಸಂಚು; ಮುಟ್ಟಿ ನೋಡಿಕೊಳ್ಳುವಂತ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್

2026ರ ಹಣಕಾಸು ವರ್ಷದಲ್ಲಿ ನೋಂದಾಯಿತ ರಕ್ಷಣಾ ರಫ್ತುದಾರರ ಸಂಖ್ಯೆ 145ಕ್ಕೆ ಏರಿದ್ದು, ಹಿಂದಿನ ಆರ್ಥಿಕ ವರ್ಷದಲ್ಲಿ 128ರಷ್ಟಿದ್ದು, ಶೇ. 13.3ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಇದನ್ನು ಶ್ಲಾಘಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇದು ಪ್ರಭಾವಶಾಲಿ ಯಶೋಗಾಥೆ ಎಂದು ಬಣ್ಣಿಸಿದ್ದಾರೆ.

ಭಾರತವು ರಕ್ಷಣಾ ಸಲಕರಣೆಗಳ ಜಾಗತಿಕ ಉತ್ಪಾದನಾ ಕೇಂದ್ರವಾಗುವತ್ತ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಸಾಧನೆಗೆ ರಕ್ಷಣಾ ಉತ್ಪಾದನಾ ಇಲಾಖೆ, ರಫ್ತುದಾರರು ಮತ್ತು ಉದ್ಯಮದ ಪಾಲುದಾರರ ಸಂಯೋಜಿತ ಪ್ರಯತ್ನಗಳು ಕಾರಣ ಎಂದು ಹೇಳಿದ್ದಾರೆ.

ರಕ್ಷಣಾ ರಫ್ತುಗಳಲ್ಲಿ14,802 ಕೋಟಿ ರುಪಾಯಿ ಈ ದೊಡ್ಡ ಏರಿಕೆ, ಭಾರತದ ಸ್ವದೇಶಿ ಸಾಮರ್ಥ್ಯಗಳು ಮತ್ತು ಉನ್ನತ ಉತ್ಪಾದನಾ ಶಕ್ತಿಯ ಮೇಲೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಡಿಪಿಎಸ್‌ಯುಗಳು ಶೇ. 54.84 ಶೇಕಡಾ ಖಾಸಗಿ ಕೈಗಾರಿಕೆಗಳು ಶೇ. 45.16 ಕೊಡುಗೆ ನೀಡಿರುವ ಈ ಸಾಧನೆ, ಸಹಕಾರಾತ್ಮಕ ಮತ್ತು ಆತ್ಮನಿರ್ಭರ ರಕ್ಷಣಾ ಪರಿಸರದ ಶಕ್ತಿಯನ್ನು ತೋರಿಸುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ಭಾರತವು ಈಗ 80ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani