Dailyhunt Logo
  • Light mode
    Follow system
    Dark mode
    • Play Story
    • App Story
ಸರ್ಕಾರ ರಚಿಸಲು ಬಹುಮತ ನೀಡಿದ ಪಶ್ಚಿಮ ಬಂಗಾಳದ ಜನತೆಗೆ ಅಡ್ಡಬಿದ್ದು ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

ಸರ್ಕಾರ ರಚಿಸಲು ಬಹುಮತ ನೀಡಿದ ಪಶ್ಚಿಮ ಬಂಗಾಳದ ಜನತೆಗೆ ಅಡ್ಡಬಿದ್ದು ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

Vishwavani 4 months ago

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವೇದಿಕೆಯಲ್ಲೇ ಅಡ್ಡಬಿದ್ದು ನಮಸ್ಕರಿಸಿದರು. ಶನಿವಾರ (ಮೇ 9) ಕೋಲ್ಕತ್ತಾದಲ್ಲಿ ನಡೆದ ಪಶ್ಚಿಮ ಬಂಗಾಳದ (West Bengal) ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜನರಿಗೆ ಪ್ರಧಾನಿ ಮೋದಿ ನಮಸ್ಕರಿಸಿದರು.

ಈ ಸಮಾರಂಭವು ಬಂಗಾಳದಲ್ಲಿ ಬಿಜೆಪಿಯ ಮೊದಲ ಸರ್ಕಾರದ ಆರಂಭವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂದು ಅಧಿಕಾರಿ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರಾಜ್ಯದ ಒಂಭತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

"ನಾನು ಪಶ್ಚಿಮ ಬಂಗಾಳದ ಜನಶಕ್ತಿಗೆ ನಮಸ್ಕರಿಸುತ್ತೇನೆ" ಎಂದು ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಜನರ ಆಶೀರ್ವಾದವು ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತ್ತು ಸಾರ್ವಜನಿಕ ಸಂಕಲ್ಪದ ಉದಾತ್ತ ಮೂಲ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಜನಸಮೂಹಕ್ಕೆ ತಲೆಬಾಗಿ, ಅಡ್ಡಬಿದ್ದು ನಮಸ್ಕರಿಸುತ್ತಿರುವುದು ಕಂಡು ಬಂದಿದೆ.

ಇಲ್ಲಿದೆ ವಿಡಿಯೊ:


ಅಮಿತ್ ಶಾ ಅವರ ಪೋಸ್ಟ್ ಇಲ್ಲಿದೆ:

ಸಮಾರಂಭದಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಇದರಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಸೇರಿದ್ದಾರೆ. ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ, ತ್ರಿಪುರಾದ ಮಾಣಿಕ್ ಸಹಾ, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಮತ್ತು ದೆಹಲಿಯ ರೇಖಾ ಗುಪ್ತಾ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

98 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತನ ಕಾಲಿಗೆರಗಿದ ಪ್ರಧಾನಿ ಮೋದಿ

ಬಿಜೆಪಿ ಸರ್ಕಾರ ಬಂದಿದೆ ಎನ್ನುತ್ತಾ ಅಮಿತ್ ಶಾ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿ ಹಿರಿಯ ಕಾರ್ಯಕರ್ತನ ಕಾಲಿಗೆರಗಿದ ಮೋದಿ

ಇನ್ನು ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ 98 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು. ಸುವೇಂದು ಅಧಿಕಾರಿ ಜತೆಗೆ, ಐದು ಬಿಜೆಪಿ ಶಾಸಕರು ಪಶ್ಚಿಮ ಬಂಗಾಳದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಸಂಪುಟದಲ್ಲಿ ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್, ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಅಗ್ನಿಮಿತ್ರ ಪಾಲ್, ಉತ್ತರ 24 ಪರಗಣ ಶಾಸಕ ಅಶೋಕ್ ಕೀರ್ತಾನಿಯಾ, ಬುಡಕಟ್ಟು ನಾಯಕ ಕ್ಷುದಿರಾಮ್ ತುಡು ಮತ್ತು ಮಾಜಿ ಕೇಂದ್ರ ಸಚಿವ ನಿಸಿತ್ ಪ್ರಾಮಾಣಿಕ್ ಸೇರಿದ್ದಾರೆ. ರಾಜ್ಯಪಾಲ ಆರ್.ಎನ್.ರವಿ ಪ್ರಮಾಣ ವಚನ ಬೋಧಿಸಿದರು.

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತು. ಕೇಸರಿ ಪಕ್ಷವು 207 ಸ್ಥಾನಗಳನ್ನು ಗಳಿಸಿತು. ಈ ಮೂಲಕ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಟಿಎಂಸಿ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani