Dailyhunt Logo
  • Light mode
    Follow system
    Dark mode
    • Play Story
    • App Story
Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

Vishwavani 1 week ago

ಶಶಿಧರ ಹಾಲಾಡಿ

ನಿಜ, ಅಮೆರಿಕದಂತಹ ದೊಡ್ಡ ಮತ್ತು ಆಧುನಿಕ ದೇಶದಲ್ಲೂ ಕೆಲವು ಮೂಢನಂಬಿಕೆಗಳಿವೆ. ಅವುಗಳಲ್ಲಿ ನನಗೆ ಎದ್ದು ಕಂಡಿದ್ದೇನೆಂದರೆ, ನ್ಯೂಯಾರ್ಕ್ ನಗರದ ಬ್ರೂಕ್‌ಲಿನ್ ಸೇತುವೆಯ ಕಬ್ಬಿಣದ ತಂತಿಗಳಿಗೆ ಹಾಕಿದ್ದ ನೂರಾರು ಬೀಗಗಳು; ಆ ಐತಿಹಾಸಿಕ ಸೇತುವೆಯ ಕಬ್ಬಿಣದ ತಂತಿಗಳನ್ನು ಕಳ್ಳರು ಕದಿಯುತ್ತಾರೆಂದು ರಕ್ಷಣೆಗಾಗಿ ಹಾಕಿದ ಬೀಗಗಳು ಅವು ಅಲ್ಲ!

ಬದಲಿಗೆ, ಪ್ರೇಮಿಗಳು ಹಾಕಿದ ಬೀಗಗಳು ಅವು! ಪ್ರೇಮಿಗಳು, ಪ್ರೀತಿಸುವವರು, ಅಲ್ಲಿಗೆ ಬಂದು, ಪುಟಾಣಿ ಬೀಗಗಳನ್ನು ಅಲ್ಲಿನ ತಂತಿಗೆ ಹಾಕಿದರೆ, ಅವರ ಪ್ರೇಮ ಶಾಶ್ವತವಾಗಿರುತ್ತದೆ ಎಂಬ ನಂಬಿಕೆಯಿಂದ, ಪುಟ್ಟ ಬೀಗ ಖರೀದಿಸಿ, ಅಲ್ಲಿ ಲಾಕ್ ಮಾಡುತ್ತಾರೆ. ಈ 'ಲಾಕ್' ಪದವು ಹೊರಡಿ ಸುವ ಧ್ವನಿಯು ನಿಜಕ್ಕೂ ಶಕ್ತಿಶಾಲಿ.

Shashidhara Halady Column: ಒಂದೇ ಓಟೆಯಿಂದ ಹಲವು ಮೊಳಕೆಗಳು ಸಾಧ್ಯವೇ?

ಪ್ರೇಮಿಗಳು ಲಾಕ್ ಮಾಡಿದ ಅಂತಹ ನೂರಾರು ಬೀಗಗಳು ಬ್ರೂಕ್‌ಲಿನ್ ಬ್ರಿಜ್‌ನಲ್ಲಿವೆ. ಅಮರ ಪ್ರೇಮವನ್ನು ಸಾರುವ ಅಂತಹ ನೂರಾರು ಬೀಗಗಳಿರುವ ಆ ದೇಶದಲ್ಲಿ, ಭಗ್ನ ಪ್ರೇಮಿಗಳೂ ಸಾಕಷ್ಟು ಇರಲೇಬೇಕು; ಆ ವಿಷಯ ಬೇಡ ಬಿಡಿ; ಆದರೆ, ತಂತಿಗೆ ಲಾಕ್ ಮಾಡಿದರೆ, ಪ್ರೀತಿ ಅಮರವಾಗುತ್ತದೆ ಎಂಬ ಈ ನಂಬಿಕೆಯ (ಮೂಢ ನಂಬಿಕೆಯ) ಹಿಂದೆ, ಯುವ ಪ್ರೇಮಿಗಳ ಮಧುರ ಪ್ರೀತಿಯ ಸಾಗರವೇ ಅಡಗಿದೆ ಎಂಬುದು ಮಾತ್ರ ನಿಜಕ್ಕೂ ಸಕಾರಾತ್ಮಕ. ನಮ್ಮ ಬದುಕಿನ ತಳಹದಿಯೇ ಪ್ರೀತಿ ತಾನೆ!

ನ್ಯೂಯಾರ್ಕ್‌ನ ಈ ಪ್ರಸಿದ್ಧ ಬ್ರೂಕ್‌ಲಿನ್‌ನ ಬ್ರಿಜ್ ಕುರಿತು ಸಾಕಷ್ಟು ಬರಹಗಳು ಬಂದಿವೆ; ಅಲ್ಲಿನ ಈಸ್ಟ್ ರಿವರ್‌ಗೆ ಅಡ್ಡಲಾಗಿ 1883ರಲ್ಲಿ ನಿರ್ಮಿಸಿರುವ ಈ ತೂಗುಸೇತುವೆಯ ಮಧ್ಯಭಾಗವು 1595 ಅಡಿ ಉದ್ದವಿದ್ದು (ಒಟ್ಟು ಉದ್ದ 6016 ಅಡಿ), ಆಗಿನ ಕಾಲದಲ್ಲಿ ಜಗತ್ತಿನ ಅತಿ ಉದ್ದನೆಯ ತೂಗು ಸೇತುವೆ ಎಂದು ಹೆಸರಾಗಿತ್ತು. ನ್ಯೂಯಾರ್ಕ್ ಮತ್ತು ಬ್ರೂಕ್ಲಿನ್‌ಗಳನ್ನು ಸಂಪರ್ಕಿಸುವ ಈ ತೂಗು ಸೇತುವೆಯ ಮೇಲೆ, ರೈಲು ಮತ್ತು ವಾಹನ ಸಂಚಾರವಿದೆ; ಸೈಕಲ್ ಮತ್ತು ಪಾದಚಾರಿ ಮಾರ್ಗವೂ ಇದೆ. ಪ್ರತಿದಿನ ಈ ಸೇತುವೆಯನ್ನು ದಾಟುವವರ ಸರಾಸರಿ ಸಂಖ್ಯೆ ಸುಮಾರು 1,21,93.

1869-1883ರಷ್ಟು ಮುಂಚೆಯೇ ಈ ಬಹೂಪಯೋಗಿ, ಸುಂದರ ಮತ್ತು ಪ್ರಮುಖ ಸೇತುವೆಯನ್ನು ಅಮೆರಿಕದವರು ನಿರ್ಮಿಸಿದರು! ಅದರ ಮೇಲೆ ನಿಂತಾಗ ನನಗೆ ನೆನಪಾದ ಒಂದು ಸಂಗತಿ ಎಂದರೆ, 1869ರಲ್ಲಿ ನಮ್ಮ ದೇಶದ ಪ್ರಗತಿ ಎಷ್ಟಿತ್ತು? ಆಗ ತಾನೆ ಸಿಪಾಯಿ ದಂಗೆ (ಅವರು ಹೆಸರಿಸಿದ್ದು) ಅಥವಾ ಮೊದಲ ಸ್ವಾತಂತ್ರ್ಯ ಸಂಗ್ರಾಮ (ನಮ್ಮವರು ಹೆಸರಿಸಿದ್ದು) ಮುಗಿದಿತ್ತು. ಬೇರೆಯವರ ವಸಾಹತಾಗಿದ್ದ ನಮಗೆ ಆಗಿನ ದಿನಗಳಲ್ಲಿ ಅಂತಹ ಸೇತುವೆಯನ್ನು ನಿರ್ಮಿಸುವ ಸ್ವಾತಂತ್ರ್ಯ ವಿತ್ತೇ? ನಮ್ಮ ಹಳ್ಳಿಯ ಬಳಿಯಿರುವ ಹಾಲಾಡಿ ನದಿ ದಾಟಲು ಒಂದು ಸರಳ ಸೇತುವೆ ನಿರ್ಮಾಣ ವಾಗಲು, 1960ರ ತನಕ (ದೇಶಕ್ಕೆ ಸ್ವಾತಂತ್ರ್ಯ ಬಂದು 13 ವರ್ಷಗಳ ತನಕ) ಕಾಯಬೇಕಾಯ್ತು! ಅದಕ್ಕೇ ಹೇಳುವುದು, ನಾಡು ಅಭಿವೃದ್ಧಿ ಹೊಂದಲು ಸ್ವಾತಂತ್ರ್ಯ ಎಂಬುದು ಎಷ್ಟು ಮುಖ್ಯ ಎಂದು!

Dailyhunt
Disclaimer: This content has not been generated, created or edited by Dailyhunt. Publisher: Vishwavani