Dailyhunt
Shidlaghatta News: ಜನಗಣತಿ ಪ್ರಕ್ರಿಯೆ ಸುಗಮಗೊಳಿಸಲು ಶಿಕ್ಷಕರಿಗೆ ವಿಶೇಷ ತರಬೇತಿ

Shidlaghatta News: ಜನಗಣತಿ ಪ್ರಕ್ರಿಯೆ ಸುಗಮಗೊಳಿಸಲು ಶಿಕ್ಷಕರಿಗೆ ವಿಶೇಷ ತರಬೇತಿ

Vishwavani 2 weeks ago

ಶಿಡ್ಲಘಟ್ಟ: ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಹಾಗೂ ಸಮರ್ಪಕವಾಗಿ ನಡೆಸುವ ಉದ್ದೇಶದಿಂದ ನಗರದ ಡಾಲ್ಫಿನ್ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಅಮೃತಾ ಜಿ ಅವರು, ಜನಗಣತಿ ಪ್ರಕ್ರಿಯೆ ದೇಶದ ಅಭಿವೃದ್ಧಿಗೆ ಮೂಲಭೂತವಾದ ಮಾಹಿತಿ ಸಂಗ್ರಹಿ ಸುವ ಮಹತ್ವದ ಕಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಶಿಕ್ಷಕರು ನೀಡಲಾದ ತರಬೇತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

Shidlaghatta News: ಶಿಡ್ಲಘಟ್ಟದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ: ಅನ್ನದಾಸೋಹ ಮೂಲಕ ಭಕ್ತರ ನಮನ

ಇಂದಿನ ಡಿಜಿಟಲ್ ಯುಗದಲ್ಲಿ ಜನಗಣತಿ ಕಾರ್ಯ ಸುಲಭಗೊಳಿಸಲು ಆನ್‌ಲೈನ್ ಅಪ್ಲಿಕೇಶನ್ ವ್ಯವಸ್ಥೆ ಪರಿಚಯಿಸಲಾಗಿದೆ. ನೆಟ್ವರ್ಕ್ ಸೌಲಭ್ಯ ಇಲ್ಲದ ಸ್ಥಳಗಳಲ್ಲಿಯೂ ಮಾಹಿತಿಯನ್ನು ಆಫ್‌ಲೈನ್ ಮೂಲಕ ಸಂಗ್ರಹಿಸಿ, ನಂತರ ನೆಟ್ವರ್ಕ್ ದೊರಕುವ ಸ್ಥಳದಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಜನಗಣತಿ ಕಾರ್ಯದ ವಿಧಾನಗಳು, ಅಪ್ಲಿಕೇಶನ್ ಬಳಕೆ, ಮಾಹಿತಿ ಸಂಗ್ರಹಣೆಯ ನಿಯಮಗಳು ಹಾಗೂ ಜನರೊಂದಿಗೆ ಸಂವಹನ ಮಾಡುವ ವಿಧಾನಗಳ ಕುರಿತು ವಿವರವಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಹಲವಾರು ಶಿಕ್ಷಕರು ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತ ರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani