Dailyhunt
Shidlaghatta News: ಶಿಡ್ಲಘಟ್ಟ ನಗರಸಭೆ ಆದಾಯ ವಸೂಲಾತಿ ಹಕ್ಕುಗಳಿಗೆ ಮರುಹರಾಜು

Shidlaghatta News: ಶಿಡ್ಲಘಟ್ಟ ನಗರಸಭೆ ಆದಾಯ ವಸೂಲಾತಿ ಹಕ್ಕುಗಳಿಗೆ ಮರುಹರಾಜು

Vishwavani 1 month ago

ಶಿಡ್ಲಘಟ್ಟ: ನಗರಸಭೆಗೆ ಸೇರಿದ ವಿವಿಧ ಆದಾಯ ಮೂಲಗಳಿಗೆ ಸಂಬಂಧಿಸಿದ ವಸೂಲಾತಿ ಹಕ್ಕುಗಳ ಮರುಹರಾಜು ಪ್ರಕ್ರಿಯೆಯನ್ನು ಮಾ.26ರಂದು ನಡೆಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪ್ರಮುಖ ಆದಾಯ ಮೂಲಗಳಾದ ಸಂತೆ ಮಾರ್ಕೆಟ್, ಧನವಹಿ ಮಾರ್ಕೆಟ್, ಖಾಸಗಿ ಬಸ್‌ಗಳ ವಾಹನ ನಿಲ್ದಾಣ ಶುಲ್ಕ ವಸೂಲಿ ಹಕ್ಕು ಹಾಗೂ ಒಳಚರಂಡಿ ಶುದ್ಧೀ ಕರಣ ಘಟಕಕ್ಕೆ ಸಂಬಂಧಿಸಿದ ಶುಲ್ಕ ವಸೂಲಿ ಹಕ್ಕುಗಳನ್ನು ಮರುಹರಾಜು ಮೂಲಕ ನೀಡಲಾಗುತ್ತಿದೆ.

Shidlaghatta News: ಶಿಡ್ಲಘಟ್ಟ ನಗರದಾದ್ಯಂತ ಭಕ್ತಿ ಸಂಭ್ರಮ ಮೂಡಿಸಿದ ಯಲ್ಲಮ್ಮ ದೇವಿ ಕರಗ ಮೆರವಣಿಗೆ

ಈ ಹಕ್ಕುಗಳಿಗೆ ಪ್ರತಿ ವರ್ಷವೂ ಮರುಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸಕ್ತ ಗುತ್ತಿಗೆದಾರರು ನಿಗದಿತ ದಿನಾಂಕದಂದು ನಗರಸಭೆ ಕಚೇರಿಯಲ್ಲಿ ನಡೆಯುವ ಬಹಿರಂಗ ಮರುಹರಾಜಿನಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ. ಅಗತ್ಯ ದಾಖಲೆ ಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿ ಗಾಗಿ ನಗರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani