Dailyhunt
ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ fly91 ವಿಮಾನಯಾನ ಸೇವೆ

ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ fly91 ವಿಮಾನಯಾನ ಸೇವೆ

Vishwavani 0 months ago

ವದೆಹಲಿ, ಮಾ.31: ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ತ್ವರಿತ ಸಂಪರ್ಕಕ್ಕೆ ಅನುಕೂಲ ಆಗುವಂತೆ ʼಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ʼ ನಡುವೆ ಅತಿ ಶೀಘ್ರದಲ್ಲೇ ಹೊಸದೊಂದು ವಿಮಾನ ಸೇವೆ ಲಭ್ಯವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ಪ್ರಯತ್ನದ ಫಲವಾಗಿ fly91 ವಿಮಾನಯಾನ ಶುರುವಾಗಲಿದೆ.

ಇದೇ ಏಪ್ರಿಲ್ ಎರಡನೇ ವಾರದಿಂದಲೇ fly91 ವಿಮಾನ ಸೇವೆ ಆರಂಭವಾಗಲಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆಗೆ ಕಾರ್ಯಕ್ಕೆ ಸ್ಥಳಾವಕಾಶ ನೀಡಲಾಗಿದೆ. ಅಂತೆಯೇ fly91 ಸಂಸ್ಥೆ ಈಗಾಗಲೇ ವಿಮಾನಯಾನ ಸೇವೆಯ ಅಗತ್ಯ ಕಾರ್ಯ ಚಟುವಟಿಕೆ ಸಹ ಆರಂಭಿಸಿದೆ.

ಸಚಿವ ಜೋಶಿ ಮನವಿಗೆ ಸ್ಪಂದನೆ

ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್ ತೆರಳುವ ನಾಗರಿಕರಿಗೆ ತ್ವರಿತ ಪ್ರಯಾಣಕ್ಕೆ ಅನುಕೂಲ ಆಗುವಂತೆ ವಿಮಾನ ಸೇವೆ ಆರಂಭಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು ಈ ಹಿಂದೆ ಏರ್ ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದಿದ್ದರು. ಅದರಂತೆ fly91 ಸಂಸ್ಥೆ ಇದೀಗ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಅಣಿಯಾಗಿದೆ.

ಏಪ್ರಿಲ್ ಎರಡನೇ ವಾರದಿಂದಲೇ ಈ ಮಾರ್ಗದ ವಿಮಾನಯಾನ ಸೇವೆ ನಾಗರಿಕರಿಗೆ ಲಭ್ಯವಾಗಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ‌ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿದ fly91 ಸಂಸ್ಥೆ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ ವಿಮಾನ ಹಾರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, HYD to HBX: IC3401; 3:00 PM - 4:30 PM HBX to BLR: IC3411; 4:55 PM - 6:15 PM BLR to HBX: IC3412; 6:45 PM - 8:15 PM HBX to HYD: IC3402; 8:35 PM - 9:55 PM ವಿಮಾನಯಾನ ಸೇವೆಯ ವೇಳಾಪಟ್ಟಿ ಸಹ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇ.70 ಹೆಚ್ಚಿಸಿದೆ: ಸಚಿವ ಜೋಶಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಈ ಸಂಸ್ಥೆಗೆ ಕಾರ್ಯನಿರ್ವಹಿಸಲು ಸ್ಥಳ ಸಹ ನೀಡಲಾಗಿದ್ದು, ಸಂಸ್ಥೆಯು ಅವಶ್ಯಕ ಕಾರ್ಯಗಳನ್ನು ಪ್ರಾರಂಭಿಸಿದೆ. ಇದಕ್ಕಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು fly91 ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani