Dailyhunt Logo
  • Light mode
    Follow system
    Dark mode
    • Play Story
    • App Story
Summer Fashion 2026: ಸೆಲೆಬ್ರಿಟಿಗಳ ಪಾರ್ಟಿವೇರ್‌ಗೆ ಸೇರಿದ ವೈಬ್ರೆಂಟ್‌ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌

Summer Fashion 2026: ಸೆಲೆಬ್ರಿಟಿಗಳ ಪಾರ್ಟಿವೇರ್‌ಗೆ ಸೇರಿದ ವೈಬ್ರೆಂಟ್‌ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌

Vishwavani 1 month ago

1/5

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಲೆಬ್ರೆಟಿಗಳ ಪಾರ್ಟಿವೇರ್‌ ಲಿಸ್ಟ್‌ನಲ್ಲಿ ಇದೀಗ ವೈಬ್ರೆಂಟ್‌ ಶೇಡ್‌ನ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ಗಳದ್ದೇ ಕಾರುಬಾರು! ಹಾಲಿವುಡ್‌ ಮಾತ್ರವಲ್ಲ, ಬಾಲಿವುಡ್‌ ಸೆಲೆಬ್ರೆಟಿಗಳು ಕೂಡ ನಾನಾ ಬಗೆಯ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ಗಳನ್ನು ಧರಿಸಲಾರಂಭಿಸಿದ್ದಾರೆ.

ಅದರಲ್ಲೂ ಶೀರ್‌ ಮೆಶ್‌ನಂತಿರುವ ಟ್ಯೂಬ್‌ ಡಿಸೈನ್‌ನಂತೆ ಕಾಣಿಸುವ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ಗಳು ಸೆಲೆಬ್ರೆಟಿಗಳ ಬಾಡಿ ಮಾಸ್‌ ಇಂಡೆಕ್ಸ್ ಹೈ ಲೈಟ್‌ ಮಾಡುವಲ್ಲಿ ಸಹಕಾರಿಯಾಗಿದೆ.

2/5

ಆಲಿಶಾ ಧರಿಸಿದ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌

ನಟಿ ಆಲಿಶಾ ಇತ್ತೀಚೆಗೆ ಫ್ಯಾಷನ್‌ ಶೂಟ್‌ನಲ್ಲಿ ಧರಿಸಿದ್ಧ ವೈಬ್ರೆಂಟ್‌ ಯೆಲ್ಲೋ ಶೇಡ್‌ನ ವೆಲ್ವೆಟ್‌ನ ಕಾರ್ಸೆಟ್‌ ಡ್ರೆಸ್‌ ಕಾಕ್‌ಟೈಲ್‌ ಹಾಗೂ ಪಾರ್ಟಿವೇರ್‌ ಸೆಲೆಬ್ರೆಟಿ ಡ್ರೆಸ್‌ಗಳ ಕೆಟಗರಿಯಲ್ಲಿ ಸದ್ಯ ಟಾಪ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಪೂರಕ ಎಂಬಂತೆ, ಆನ್‌ಲೈನ್‌ನ ನಾನಾ ಬ್ರಾಂಡ್‌ಗಳು ಕೂಡ ಈ ಗ್ಲಾಮರಸ್‌ ಔಟ್‌ಫಿಟ್‌ಗಳನ್ನು ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಳಿಸಿವೆ.

3/5

ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ ಸ್ಪೆಷಾಲಿಟಿ

ಅಂದಹಾಗೆ, ಈ ಕಾರ್ಸೆಟ್‌ ಡ್ರೆಸ್‌ನ ವಿಶೇಷತೆಯೆಂದರೇ ವೆಲ್ವೆಟ್‌ ಫ್ಯಾಬ್ರಿಕ್‌ನಲ್ಲಿ ಇದನ್ನು ಡಿಸೈನ್‌ ಮಾಡಿರುವುದು. ಅಲ್ಲದೇ, ಶೀರ್‌ ಮೆಶ್‌ ಪ್ಯಾನೆಲ್‌ನಂತಹ ವಿನ್ಯಾಸವನ್ನು ವೇಸ್ಟ್‌ಲೈನ್‌ ಹೈಲೈಟ್‌ ಆಗುವಂತೆ ಮಾಡಿರುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಇದು ಹಾಟ್‌ ಲುಕ್‌ ನೀಡುವ ಡ್ರೆಸ್

ಶೋಲ್ಡರ್‌ಲೆಸ್‌ನ ಈ ಬಾಡಿ ಫಿಟ್‌ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ ಧರಿಸಿದ ಯಾವುದೇ ಸೆಲೆಬ್ರೆಟಿಗೂ ಹಾಟ್‌ ಲುಕ್‌ ನೀಡುತ್ತದೆ. ಈ ಕಾರಣದಿಂದಾಗಿ ಸಾಕಷ್ಟು ತಾರೆಯರು ಹಾಗೂ ಸೆಲೆಬ್ರೆಟಿಗಳು ಈ ಶೈಲಿಯ ವಿನ್ಯಾಸಕ್ಕೆ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ಪೇಜ್‌ ತ್ರೀ ಸೆಲೆಬ್ರೆಟಿಗಳನ್ನು ಅಪ್ಪಿಕೊಂಡ ಡ್ರೆಸ್‌

ಫ್ಯಾಷನ್‌ ಕ್ಷೇತ್ರದ ಪೇಜ್‌ ತ್ರಿ ಸೆಲೆಬ್ರೆಟಿಗಳನ್ನು ಕೂಡ ಈ ವೆಲ್ವೆಟ್‌ ಕಾರ್ಸೆಟ್‌ ಡ್ರೆಸ್‌ ಅಪ್ಪಿಕೊಂಡಿದೆ. ಗ್ಲಾಮರಸ್‌ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Dailyhunt
Disclaimer: This content has not been generated, created or edited by Dailyhunt. Publisher: Vishwavani