Dailyhunt Logo
  • Light mode
    Follow system
    Dark mode
    • Play Story
    • App Story
ಸ್ಯಾಂಡಲ್‌ವುಡ್‌ಗೆ ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್‌ ಎಂಟ್ರಿ; ಒಟ್ಟೊಟ್ಟಿಗೆ ಅದ್ದೂರಿಯಾಗಿ ಲಾಂಚ್ ಆಗಲಿವೆ 2 ಸಿನಿಮಾಗಳು!

ಸ್ಯಾಂಡಲ್‌ವುಡ್‌ಗೆ ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್‌ ಎಂಟ್ರಿ; ಒಟ್ಟೊಟ್ಟಿಗೆ ಅದ್ದೂರಿಯಾಗಿ ಲಾಂಚ್ ಆಗಲಿವೆ 2 ಸಿನಿಮಾಗಳು!

Vishwavani 2 months ago

ನ್ನಪಟ್ಟಣ ಕ್ಷೇತ್ರದ ಶಾಸಕ ಸಿ ಪಿ ಯೋಗೇಶ್ವರ್‌ ಅವರ ಪುತ್ರ ಧ್ಯಾನ್ ಸ್ಯಾಂಡಲ್‌ವುಡ್‌ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ. ಹೌದು, ಧ್ಯಾನ್‌ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಧ್ಯಾನ್ ಅವರ ಚೊಚ್ಚಲ ಪ್ರವೇಶದಲ್ಲಿಯೇ ಒಟ್ಟೊಟ್ಟಿಗೆ ಎರಡು ಅದ್ದೂರಿ ಸಿನಿಮಾಗಳು ಘೋಷಣೆಯಾಗಿದ್ದು, ಎರಡೂ ಚಿತ್ರಗಳಲ್ಲಿ ತಂದೆ-ಮಗ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿರುವುದು ವಿಶೇಷ.

ಧ್ಯಾನ್‌ ಸಿನಿಮಾಗೆ ನಾಗಣ್ಣ ನಿರ್ದೇಶನ

ಪಿ.ಎಂ.ಜಿ ಫಿಲಂ ಪ್ರೊಡಕ್ಷನ್ ಪ್ರೈ. ಲಿ. ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧ್ಯಾನ್ ಯೋಗೇಶ್ವರ್ ಅವರನ್ನು ನಾಯಕನನ್ನಾಗಿ ಪರಿಚಯಿಸಲಾಗುತ್ತಿದೆ. ಹಿರಿಯ ನಿರ್ದೇಶಕ ನಾಗಣ್ಣ ಆಯಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ 'ಕರ್ಣಾಟಬಲಂ ಅಜೇಯಂ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಸಿ. ಪಿ. ಯೋಗೇಶ್ವರ್ ಅವರು ಸುಮಾರು 25 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳುತ್ತಿರುವುದು ವಿಶೇಷ. ಚಿತ್ರದಲ್ಲಿ ಧ್ಯಾನ್ ಜೊತೆಗೆ ಯೋಗೇಶ್ವರ್ ಕೂಡ ಪ್ರಮುಖ ಪಾತ್ರದಲ್ಲಿದ್ದು, ಮಿಸ್ ಯೂನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ, ಮಿಸ್ ಯೂನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಪ್ರಮುಖ ತಾರಾಗಣದಲ್ಲಿದ್ದಾರೆ.

CP Yogeshwar: ಮನೆಗೆ ಪ್ರವೇಶ ನಿರಾಕರಣೆ; ಪುತ್ರಿ ನಿಶಾ ಆರೋಪಕ್ಕೆ ಶಾಸಕ ಸಿ.ಪಿ. ಯೋಗೇಶ್ವರ್‌ ಸ್ಪಷ್ಟನೆ ಏನು?

ಬರಲಿದೆ 'ಸೈನಿಕ' ಸೀಕ್ವೆಲ್

ಇದರ ಬೆನ್ನಲ್ಲೇ ಸಿ. ಪಿ. ಯೋಗೇಶ್ವರ್ ಅವರ ಹೋಮ್ ಬ್ಯಾನರ್ 'ರಾಜಯೋಗಿ ಫಿಲಂಸ್' ಮೂಲಕ 25 ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಸೈನಿಕ' ಚಿತ್ರದ ಮುಂದುವರಿದ ಭಾಗ 'ಸೈನಿಕ 2' ಚಿತ್ರವನ್ನೂ ಘೋಷಣೆ ಮಾಡಲಾಗಿದೆ. ಈ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸಲಿದ್ದು, ಇದರಲ್ಲೂ ಸಿ. ಪಿ. ಯೋಗೇಶ್ವರ್ ಹಾಗೂ ಪುತ್ರ ಧ್ಯಾನ್ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

ಜುಲೈ 5ಕ್ಕೆ ಒಟ್ಟಿಗೆ ಮುಹೂರ್ತ

ಈ ಎರಡೂ ಬಹುನಿರೀಕ್ಷಿತ ಚಿತ್ರಗಳ ಜಂಟಿ ಮುಹೂರ್ತ ಸಮಾರಂಭವು ಜುಲೈ 5ರ ಭಾನುವಾರದಂದು ಅತ್ಯಂತ ಅದ್ದೂರಿಯಾಗಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಗಣ್ಯರು, ಹಿತೈಷಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ ಎಂದು ಸಿ. ಪಿ. ಯೋಗೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani