Dailyhunt
ತಾಜ್ ಮಹಲ್ ನೋಡಲು ನ್ಯೂಯಾರ್ಕ್‌ ಯುವಕನಿಂದ  24 ಗಂಟೆಗಳ ಭಾರತ ಪ್ರವಾಸ; ವಿಡಿಯೊ ವೈರಲ್‌

ತಾಜ್ ಮಹಲ್ ನೋಡಲು ನ್ಯೂಯಾರ್ಕ್‌ ಯುವಕನಿಂದ 24 ಗಂಟೆಗಳ ಭಾರತ ಪ್ರವಾಸ; ವಿಡಿಯೊ ವೈರಲ್‌

Vishwavani 1 week ago

ವಾಷಿಂಗ್ಟನ್‌, ಏ. 3: ಆಗ್ರಾದ ತಾಜ್ ಮಹಲ್ (Taj Mahal) ವಿಶ್ವ ಪರಂಪರೆಯ ತಾಣವಾಗಿ ಜನಪ್ರಿಯ. ಹೆಚ್ಚಿನ ಪ್ರವಾಸಿಗರು ಇದರ ಸೌಂದರ್ಯ ಸವಿಯಲು ಆಗ್ರಾಕ್ಕೆ ಭೇಟಿ ನೀಡುತ್ತಾರೆ. ಇದೀಗ ಅಮೆರಿಕ ಯುವಕ ನ್ಯೂಯಾರ್ಕ್‌ನಿಂದ ಭಾರತಕ್ಕೆ ಕೇವಲ ಒಂದು ದಿನದ ಮಟ್ಟಿಗೆ, ತಾಜ್ ಮಹಲ್ ವೀಕ್ಷಿಸಲು ಆಗಮಿಸಿದ್ದಾನೆ.

ಸದ್ಯ ಈ ವಿಡಿಯೊ ವೈರಲ್ (Viral News)ಆಗಿದೆ. ಕೆವಿನ್ ಡ್ರೋನಿಯಾಕ್ (@kevindroniak) ಎಂಬ ಟ್ರಾವೆಲ್ ಇನ್​ಫ್ಲುಯೆನ್ಸರ್‌ ತಾಜ್ ಮಹಲ್ ವೀಕ್ಷಿಸುವ ಏಕೈಕ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ್ದಾನೆ.

ನ್ಯೂಯಾರ್ಕ್‌ನಿಂದ ಭಾರತಕ್ಕೆ ವಿಮಾನದಲ್ಲಿ ಬಂದು, ಆಗ್ರಾಕ್ಕೆ ಪ್ರಯಾಣಿಸಿ, ನಂತರ ನೇರವಾಗಿ ಅಮೆರಿಕಕ್ಕೆ ಹಿಂತಿರುಗುವ ವಿಡಿಯೊವನ್ನು ಶೇರ್ ಮಾಡಿದ್ದಾನೆ. ಒಂದೇ ದಿನದಲ್ಲಿ ಈ ಪ್ರವಾಸ ಮುಗಿಸಿದ್ದಾನೆ.‌ ಕೇವಲ ಒಂದೇ ದಿನದಲ್ಲಿ ತಾಜ್ ಮಹಲ್ ವೀಕ್ಷಿಸಿದ ಸಾಹಸ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:

ವಿಡಿಯೊದಲ್ಲಿ ಡ್ರೋನಿಯಾಕ್ ನ್ಯೂಯಾರ್ಕ್‌ನಿಂದ ವಿಮಾನ ಹತ್ತುವುದು, ಭಾರತದಲ್ಲಿ ಇಳಿಯುವುದು ಮತ್ತು ಬೆಳಗ್ಗೆ ತಾಜ್ ಮಹಲ್‌ಗೆ ಭೇಟಿ ನೀಡಲು ನೇರವಾಗಿ ಆಗ್ರಾಗೆ ತೆರಳುವ ದೃಶ್ಯ ಕಾಣಬಹುದು. ಆತ ತಾಜ್‌ ಮಹಲ್‌ ವೀಕ್ಷಿಸುವುದು, ಫೋಟೊ ಕ್ಲಿಕ್ಕಿಸುವುದು ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನು ಅನ್ವೇಷಿಸುವುದನ್ನು ವಿಡಿಯೊ ತೋರಿಸುತ್ತದೆ. ಆತನ ಪ್ರಕಾರ, ಇಡೀ ಪ್ರಯಾಣವು ತಾಜ್ ಮಹಲ್ ವೀಕ್ಷಿಸುವ ಒಂದೇ ಒಂದು ಉದ್ದೇಶ ಹೊಂದಿತ್ತು.

ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ತಾಜ್ ಮಹಲ್ ವೀಕ್ಷಣೆಯ ಬಳಿಕ ಆತ ಆಟೋ ರಿಕ್ಷಾದಲ್ಲಿ ಅಲ್ಲಿನ ಮಾರುಕಟ್ಟೆ ಸುತ್ತಿ ಹಾಕಿ, ಉಪಹಾರ ಸವಿದಿದ್ದಾನೆ. ಅಲ್ಲಿನ ಹೋಟೆಲೊಂದರಲ್ಲಿ ತಾಜ್ ಮಹಲ್ ಎದುರಿಗೇ ಕುಳಿತು ಬಟರ್ ಚಿಕನ್, ದಾಲ್ ಫ್ರೈ, ಬೆಳ್ಳುಳ್ಳಿ ಬಿರಿಯಾನಿ ಸವಿದಿದ್ದಾನೆ. ಬಳಿಕ ದೆಹಲಿ ವಿಮಾನ ನಿಲ್ದಾಣದ ಮೂಲಕ ಮತ್ತೆ ಅಮೆರಿಕಕ್ಕೆ ಮರಳಿದ್ದಾನೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಪ್ರಯಾಣವನ್ನು ಅವಸರದಿಂದ ಮುಗಿಸುವುದಕ್ಕಿಂತ ಹೆಚ್ಚಿನ ಸಮಯ ಮೀಸಲಿಡಬೇಕು ಎಂದಿದ್ದಾರೆ. ಮತ್ತೊಬ್ಬರು ಯುವಕನ ಧೈರ್ಯಕ್ಕೆ ಫಿದಾ ಆಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani