Dailyhunt Logo
  • Light mode
    Follow system
    Dark mode
    • Play Story
    • App Story
Toxic Movie:  ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು 'ಬೀರ'?

Toxic Movie: ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು 'ಬೀರ'?

Vishwavani 6 months ago

ರಾಕಿಂಗ್ ಸ್ಟಾರ್ ಯಶ್ (Yash) ನಾಯಕನಾಗಿ ನಟಿಸಿರುವ ನಿರ್ದೇಶಕಿ ಗೀತು ಮೋಹನ್‍ದಾಸ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕರು ಮಂಗಳವಾರ ಅಧಿಕೃತವಾಗಿ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ. ಚಿತ್ರದಲ್ಲಿ ಭೀರಾ (Balaji Manohar's first look as Bheera) ಪಾತ್ರದಲ್ಲಿರುವ ನಟ ಬಾಲಾಜಿ ಮನೋಹರ್ ಅಭಿನಯಿಸುತ್ತಿದ್ದಾರೆ.

ನಟನ ಫಸ್ಟ್ ಲುಕ್ ಅನ್ನು (First Look) ಅನಾವರಣಗೊಳಿಸಿದೆ ತಂಡ.

ನಿರ್ದೇಶಕಿ ಹೇಳಿದ್ದೇನು?

ಹಳದಿ ಬಣ್ಣದ ಟಿಂಟ್ ಹೊಂದಿರುವ ದೊಡ್ಡ ಗ್ಲಾಸು ಧರಿಸಿ, ಬಾಯಲ್ಲಿ ಸಿಗಾರ್ ಇರಿಸಿಕೊಂಡು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಬಾಲಾಜಿ. "ಬಾಲಾಜಿ ಮನೋಹರ್ ಅವರನ್ನು ಭೀರಾ ಪಾತ್ರದಲ್ಲಿ ಪರಿಚಯಿಸಲಾಗುತ್ತಿದೆ - ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್. #ಟಾಕ್ಸಿಕ್ ಇನ್ ಸಿನಿಮಾಸ್ ವರ್ಲ್ಡ್‌ವೈಡ್ ಫ್ರಮ್ 19-03-2026" ಎಂದು ಬರೆದಿದ್ದಾರೆ.

Annayya Serial: ಮಾರಿಗುಡಿ ಪಂಚಾಯ್ತಿ; ಪಾರು ಮಾತು ಕೇಳಿ ವೀರಭದ್ರ ಗಡಗಡ!

ಬಾಲಾಜಿ ಮನೋಹರ್ ನಿರ್ದೇಶನದ ಅನುಭವವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಿರ್ದೇಶಕಿ ಗೀತು ಮೋಹನ್ ದಾಸ್, "ನಿಮ್ಮೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಸಂತೋಷ ತಂದಿದೆ. ನಿಮ್ಮ ಪಾರ್ಟ್‌ ಚಿತ್ರೀಕರಣ ಮುಗಿದ ನಂತರವೂ, ನೀವು ಸೆಟ್ ನಲ್ಲಿಯೇ ಇದ್ದೀರಿ. ನಾನು ಗಮನಿಸಿದೆ. ಆ ರೀತಿಯ ಡೆಡಿಕೇಶನ್‌ ಅಪರೂಪ. ನಿಮ್ಮ ಉತ್ಸಾಹ, ನಿಮ್ಮ ನಿರಂತರ ಕುತೂಹಲ ಮತ್ತು ನಿಮ್ಮ ಸಲಹೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಧನ್ಯವಾದಗಳು."ಎಂದು ಬರೆದುಕೊಂಡಿದ್ದಾರೆ.

ಎರಡೂ ಪಾತ್ರಗಳ ಲುಕ್ ಈಗಾಗಲೇ ರಿವೀಲ್

ಸೋಮವಾರ ಚಿತ್ರತಂಡವು ಚಿತ್ರದಲ್ಲಿ ಟೋನಿ ಪಾತ್ರದಲ್ಲಿ ಅಕ್ಷಯ್ ಒಬೆರಾಯ್ ಮತ್ತು ಕರ್ಮಾಡಿ ಪಾತ್ರದಲ್ಲಿ ಸುದೇವ್ ನಾಯರ್ ಅವರ ಫಸ್ಟ್ ಲುಕ್‌ಗಳನ್ನು ಬಿಡುಗಡೆ ಮಾಡಿತ್ತು. 'ಲೂಸಿಯಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನೆನಪುಳಿಯುವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ಅವರು 'ಟಾಕ್ಸಿಕ್' ಸಿನಿಮಾನಲ್ಲಿ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಅವರು ರಾಯ ಹೆಸರಿನ ಪಾತ್ರದ ಜೊತೆಗೆ 'ಟಿಕೆಟ್' ಹೆಸರಿನ ಪಾತ್ರದಲ್ಲಿಯೂ ನಟಿಸಿದ್ದು, ಎರಡೂ ಪಾತ್ರಗಳ ಲುಕ್ ಈಗಾಗಲೇ ರಿವೀಲ್ ಆಗಿದೆ.

ಟಾಕ್ಸಿಕ್‌ ಸಿನಿಮಾದಲ್ಲಿ ನಟ ಅಕ್ಷಯ್ ಒಬೆರಾಯ್ ಅವರು ಟೋನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಲುಕ್ 1950ರ ದಶಕದ ರೆಟ್ರೋ ಶೈಲಿಯಲ್ಲಿದೆ. ಉದ್ದನೆಯ ಸೈಡ್‌ಬರ್ನ್ಸ್ ಮತ್ತು ಆ ಕಾಲದ ವಿಂಟೇಜ್ ದಿರಿಸಿನಲ್ಲಿ ಅಕ್ಷಯ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

Centre blocks five OTT platforms: ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

ಇವರ ಪಾತ್ರವು ಶಾಂತವಾಗಿದ್ದರೂ ಅಷ್ಟೇ ಕ್ರೂರವಾಗಿರಲಿದೆ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ.ಮಲಯಾಳಂ ನಟ ಸುದೇವ್ ನಾಯರ್ ಕರ್ಮಡಿ (Karmadi) ಎಂಬ ಇಂಟೆನ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ತಲೆಗೆ ಫ್ಲಾಟ್ ಕ್ಯಾಪ್ ಧರಿಸಿ, ಕೈಯಲ್ಲಿ ಗನ್ ಹಿಡಿದು ಗಂಭೀರವಾಗಿ ನೋಡುತ್ತಿರುವ ಇವರ ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. 'ಟಾಕ್ಸಿಕ್' ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani