Dailyhunt
Vaibhav Sooryavanshi: ಪಂತ್‌, ಇಶಾನ್‌ ಕಿಶನ್‌ ಸಿಕ್ಸರ್‌ ದಾಖಲೆ ಪುಡಿಗಟ್ಟಿದ ವೈಭವ್‌ ಸೂರ್ಯವಂಶಿ

Vaibhav Sooryavanshi: ಪಂತ್‌, ಇಶಾನ್‌ ಕಿಶನ್‌ ಸಿಕ್ಸರ್‌ ದಾಖಲೆ ಪುಡಿಗಟ್ಟಿದ ವೈಭವ್‌ ಸೂರ್ಯವಂಶಿ

Vishwavani 5 days ago

ಗುವಾಹಟಿ, ಎ.8: ರಾಜಸ್ಥಾನ ರಾಯಲ್ಸ್(Mumbai Indians vs Rajasthan Royals) ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಎಲ್ಲರ ಗಮನ ಸೆಳೆದ 15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ(Vaibhav Sooryavanshi) ದಾಖಲೆಯೊಂದನ್ನು ಬರೆದಿದ್ದಾರೆ.

ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಸೂರ್ಯವಂಶಿ, ಕೇವಲ 14 ಎಸೆತಗಳಲ್ಲಿ 39 ರನ್ ಗಳಿಸಿ ರಾಜಸ್ಥಾನದ ಬೃಹತ್‌ ಮೊತ್ತಕ್ಕೆ ನೆರವಾದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ ಮತ್ತು ಒಂದು ಬೌಂಡರಿ ದಾಖಲಾಯಿತು. ಇದೇ ವೇಳೆ ಅವರು 20 ವರ್ಷ ತುಂಬುವ ಮೊದಲೇ ಐಪಿಎಲ್‌ನಲ್ಲಿ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಅವರ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಕಿಶಾನ್ ಮತ್ತು ಪಂತ್ ತಲಾ 30 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ಸೂರ್ಯವಂಶಿ 35 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ತಮ್ಮ ಹೆಸರಿಗೆ ಬರೆದಿದ್ದಾರೆ. 20 ವರ್ಷ ತುಂಬಲು ಇನ್ನೂ ಐದು ವರ್ಷಗಳು ಬಾಕಿ ಇರುವ ಕಾರಣ ಸೂರ್ಯವಂಶಿ ಈ ದಾಖಲೆಯನ್ನು ಹಲವು ವರ್ಷಗಳ ಕಾಲ ಹೊಂದಲಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಬೌಲಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 11 ಓವರ್‌ಗಳಲ್ಲಿ 3 ವಿಕೆಟ್‌ಗೆ 150 ರನ್‌ ಗಳಿಸಿತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್‌-ವೈಭವ್‌ ಸೂರ್ಯವಂಶಿ ಕೇವಲ 4.6 ಓವರ್‌ಗಳಲ್ಲಿ 80 ರನ್‌ ಜೊತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟಿತು. ವೈಭವ್‌ ಕೇವಲ 14 ಎಸೆತಗಳಲ್ಲಿ 39 ರನ್‌ ಸಿಡಿಸಿ ಔಟಾದರೆ, ಕೊನೆವರೆಗೂ ಅಬ್ಬರಿಸಿದ ಜೈಸ್ವಾಲ್‌ 32 ಎಸೆತಕ್ಕೆ ಔಟಾಗದೆ 77 ರನ್‌ ಚಚ್ಚಿದರು. ಗುರಿ ಬೆನ್ನತ್ತಿದ ಮುಂಬೈ 11 ಓವರ್‌ನಲ್ಲಿ 9 ವಿಕೆಟ್‌ಗೆ 123 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಗುಜರಾತ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಂಜಯ್ ಬಂಗಾರ್ ಪ್ರಶ್ನೆ

ಪಂದ್ಯದಲ್ಲಿ 32 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದ ಯಶಸ್ವಿ ಜೈಸ್ವಾಲ್‌, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಈ ರೇಸ್‌ನಲ್ಲಿ ವೈಭವ್ ಸೂರ್ಯವಂಶಿ ಕೂಡ ಗಮನಾರ್ಹ ಏರಿಕೆ ಕಂಡರು, ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ 4 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಡೆಲ್ಲಿ ತಂಡದ ಸಮೀರ್‌ ರಿಝ್ವಿ(160) ಎರಡನೇ ಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ 11 ಓವರ್‌ನಲ್ಲಿ 150/3 (ಜೈಸ್ವಾಲ್‌ 77, ವೈಭವ್‌ 39, ಘಜಾನ್‌ಫರ್ 2-21), ಮುಂಬೈ 11 ಓವರ್‌ನಲ್ಲಿ 123/9 (ನಮನ್‌ 25, ಬರ್ಗರ್: 21/2 ಬಿಷ್ಣೋಯ್‌ 25/2 ).

Dailyhunt
Disclaimer: This content has not been generated, created or edited by Dailyhunt. Publisher: Vishwavani