Dailyhunt Logo
  • Light mode
    Follow system
    Dark mode
    • Play Story
    • App Story
Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ

Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ

Vishwavani 2 months ago

ಬೆಂಗಳೂರು: ಆರೋಗ್ಯ ಇದ್ದರೆ ಜೀವನ ಸುಖವಾಗಿ ಸಾಗುತ್ತದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕಾಗಿ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಅಥವಾ ನಿಮ್ಮ ಕುಟುಂಬದವರನ್ನು ಕಾಡುತ್ತವೆ. ವೈದ್ಯರನ್ನು ಸಂಪರ್ಕಿಸಿದರೂ ಕೂಡ ಕೆಲ ಸಂದರ್ಭಗಳಲ್ಲಿ ಸೂಕ್ತ ಪರಿಹಾರ ಸಿಗುವುದಿಲ್ಲ.

ಇಂತಹ ಸಂದರ್ಭಗಳಲ್ಲಿ ಮನೆಯ ವಾತಾವರಣ ಮತ್ತು ವಿನ್ಯಾಸವೂ ಒಂದು ಕಾರಣವಾಗಿರಬಹುದು ಎಂದು ವಾಸ್ತು ಶಾಸ್ತ್ರ (Vastu Shastra) ತಿಳಿಸುತ್ತದೆ.

ಮನೆಯಲ್ಲಿ ಇರುವ ವಾಸ್ತು ದೋಷಗಳು ಅಲ್ಲಿ ವಾಸಿಸುವವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯ ದಿಕ್ಕು, ವಿನ್ಯಾಸ ಮತ್ತು ವ್ಯವಸ್ಥೆಯನ್ನು ಸರಿಯಾಗಿ ಹೊಂದಿಸುವುದು ಮುಖ್ಯ. ವಾಸ್ತುವಿನ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ, ಮನೆಯಲ್ಲಿ ವಾಸಿಸುವ ಎಲ್ಲರಿಗೂ ಆರೋಗ್ಯಕರ ಮತ್ತು ಸಮತೋಲನಯುತ ಜೀವನವನ್ನು ನಡೆಸಲು ಸಹಾಯವಾಗುತ್ತದೆ.

ಹೀಗಾಗಿ, ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲಿ ಪಾಲಿಸಬೇಕಾದ ಕೆಲವು ಪ್ರಮುಖ ವಾಸ್ತು ನಿಯಮಗಳು(Vastu Tips) ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿದ್ರಾಹೀನತೆಗೆ ಕಾರಣವಾಗುವ ವಾಸ್ತು ದೋಷ

ಮನೆಯ ಪೂರ್ವ ಮತ್ತು ಉತ್ತರ ಭಾಗಗಳು ಹಗುರವಾಗಿದ್ದು, ದಕ್ಷಿಣ ಮತ್ತು ಪಶ್ಚಿಮ ಭಾಗಗಳು ಭಾರವಾಗಿರುವುದು ಉತ್ತಮ. ಆದರೆ ಪೂರ್ವದಲ್ಲಿ ಭಾರೀ ನಿರ್ಮಾಣ ಇದ್ದು ಪಶ್ಚಿಮ ಭಾಗ ಖಾಲಿಯಾಗಿದ್ದರೆ ನಿದ್ರಾಹೀನತೆ ಕಾಣಿಸಿಕೊಳ್ಳಬಹುದು. ಉತ್ತರ ಭಾಗದಲ್ಲಿ ಭಾರ ಹೆಚ್ಚಾದರೂ ಇದೇ ಸಮಸ್ಯೆ ಉಂಟಾಗುತ್ತದೆ.

ತಲೆನೋವು, ತಲೆಸುತ್ತು ಮತ್ತು ಚಡಪಡಿಕೆ

ತಪ್ಪಾದ ದಿಕ್ಕಿನಲ್ಲಿ ಮಲಗುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ವಿಶೇಷವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ತಲೆನೋವು, ಚಡಪಡಿಕೆ, ತಲೆಸುತ್ತಿಗೆ ಕಾರಣವಾಗಬಹುದು. ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಆರೋಗ್ಯಕರ ಎಂದು ಹೇಳಲಾಗುತ್ತದೆ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಗಂಭೀರ ಕಾಯಿಲೆಗಳ ಸಾಧ್ಯತೆ

ಮನೆಯ ನೈಋತ್ಯ ದಿಕ್ಕಿನಲ್ಲಿ (ದಕ್ಷಿಣ-ಪಶ್ಚಿಮ) ಪ್ರವೇಶ ದ್ವಾರ ಅಥವಾ ಖಾಲಿ ಜಾಗ ಇರುವುದು ಅಶುಭ. ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು, ನರ ಹಾಗೂ ಮೂಳೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಅಡುಗೆಮನೆಯ ದಿಕ್ಕಿನ ಪರಿಣಾಮ

ಅಡುಗೆ ಮಾಡುವಾಗ ದಕ್ಷಿಣ ದಿಕ್ಕಿಗೆ ಮುಖ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಪಶ್ಚಿಮಾಭಿಮುಖ ಅಡುಗೆ ಮಾಡುವುದರಿಂದ ಕಣ್ಣು, ಮೂಗು, ಕಿವಿ ಸಮಸ್ಯೆಗಳು ಉಂಟಾಗಬಹುದು. ಪೂರ್ವಾಭಿಮುಖವಾಗಿ ಅಡುಗೆ ಮಾಡುವುದು ಉತ್ತಮ.

ಗೋಡೆಗಳ ಬಣ್ಣ ಮತ್ತು ಆರೋಗ್ಯ

ಮನೆಯ ಗೋಡೆಗಳ ಬಣ್ಣಗಳು ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಗಾಢ ಬಣ್ಣಗಳು ಅಸ್ವಸ್ಥತೆ ಉಂಟುಮಾಡಬಹುದು. ತಿಳಿ ಮತ್ತು ಶಾಂತ ಬಣ್ಣಗಳನ್ನು ಬಳಸುವುದರಿಂದ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ.

ಕೀಲು ನೋವು ಮತ್ತು ಸಂಧಿವಾತ ಗೋಡೆಗಳಲ್ಲಿ ಬಿರುಕುಗಳು, ಕಲೆಗಳು ಇದ್ದರೆ ಅವು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಿ ಕೀಲು ನೋವು, ಬೆನ್ನುನೋವು ಸಮಸ್ಯೆಗಳಿಗೆ ಕಾರಣವಾಗಬಹುದು. ಒಟ್ಟಿನಲ್ಲಿ, ಮನೆಯ ವಾಸ್ತು ಸರಿಯಾಗಿದ್ದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಸರಿಯಾದ ದಿಕ್ಕು, ಸ್ವಚ್ಛತೆ ಮತ್ತು ಸಮತೋಲನದ ವಿನ್ಯಾಸದಿಂದ ಆರೋಗ್ಯಕರ ಜೀವನ ಸಾಧ್ಯ.

Dailyhunt
Disclaimer: This content has not been generated, created or edited by Dailyhunt. Publisher: Vishwavani