Dailyhunt
ವಿಡಿಯೊ ಇರುವುದು ನಿಜ, ಆದ್ರೆ ಆಕೆಯೇ ರೆಕಾರ್ಡ್‌ ಮಾಡಿದ್ದು; ಯುವತಿ ಮೊಬೈಲ್‌ ಚೆಕ್‌ ಮಾಡಿ ಎಂದ ಸಮೀರ್‌

ವಿಡಿಯೊ ಇರುವುದು ನಿಜ, ಆದ್ರೆ ಆಕೆಯೇ ರೆಕಾರ್ಡ್‌ ಮಾಡಿದ್ದು; ಯುವತಿ ಮೊಬೈಲ್‌ ಚೆಕ್‌ ಮಾಡಿ ಎಂದ ಸಮೀರ್‌

Vishwavani 1 week ago

ಹುಬ್ಬಳ್ಳಿ: ನಗರದ ಲವ್ ಜಿಹಾದ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತನ್ನ ವಿರುದ್ಧದ ಆರೋಪಗಳ ಬಗ್ಗೆ ಆರೋಪಿ ಸಮೀರ್ ಮುಲ್ಲಾ ಮೊದಲ ಬಾರಿಗೆ ಮಾತನಾಡಿದ್ದಾನೆ. ಈ ಪ್ರಕರಣದ ಸಂತ್ರಸ್ತ ಯುವತಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಆರೋಪಿ ಸಮೀರ್ (Sameer Mulla) ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಯುವತಿ ಮಾಡುತ್ತಿರುವ ಆರೋಪಗಳನ್ನು ನಿರಾಕರಿಸಿದ್ದಾನೆ.

ಸಂತ್ರಸ್ತೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಹೇಳಿರುವ ಸಮೀರ್, ವಿಡಿಯೊ ರೆಕಾರ್ಡ್ ಆಗಿರುವುದು ನಿಜ. ಆದರೆ ಅದು ಯಾರ ಮೊಬೈಲ್‌ನಲ್ಲಿ ತೆಗೆಯಲಾಗಿದೆ ಎಂಬುವುದು ನಿಮಗೆ ತಿಳಿಯಬೇಕು. ವಿಡಿಯೊ ನಾನು ಚಿತ್ರೀಕರಿಸಿಲ್ಲ. ಅದು ಇರುವುದು ಹುಡುಗಿಯ ಮೊಬೈಲ್‌ನಲ್ಲಿ. ನನ್ನ ಮೊಬೈಲ್‌ ಹುಡುಗಿ ಕಡೆಯವರು ವಶಕ್ಕೆ ಪಡೆದಿದ್ದಾರೆ, ಬೇಕಾದರೆ ಅದರಲ್ಲಿ ಚೆಕ್‌ ಮಾಡಬಹುದು, ನನ್ನ ಫೋನ್‌ನಲ್ಲಿ ಯಾವುದೇ ವಿಡಿಯೊ, ಫೋಟೊಗಳು ಇಲ್ಲ ಎಂದು ಸಮೀರ್ ಸ್ಪಷ್ಟಪಡಿಸಿದ್ದಾನೆ.

ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ತನ್ನ ಮತ್ತು ಆರೋಪಿಯಾದ ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಸಮೀರ್ ಆಗ್ರಹಿಸಿದ್ದಾನೆ.

ಇದೇ ವೇಳೆ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ, ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ, ನಿಜವಾಗಿ ಪ್ರಜ್ಞೆ ಕಳೆದುಕೊಂಡಿದ್ದು ನಾನೇ, ಹುಡುಗಿಯಲ್ಲ ಎಂದು ಸಮೀರ್ ಹೇಳಿಕೆ ನೀಡಿದ್ದಾನೆ. ವಿಡಿಯೊವನ್ನು ಆ ಹುಡುಗಿಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಸಮೀರ್ ಆರೋಪಿಸಿದ್ದಾನೆ.

ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದಾನೆ: ಸಮೀರ್‌ ಮುಲ್ಲಾ ವಿರುದ್ಧ ಸಂತ್ರಸ್ತ ಯುವತಿ ಆರೋಪ!

ನನ್ನ ಮೇಲೆ ಆರೋಪ ಮಾಡಿರುವ ಯುವತಿ ಒಳ್ಳೆಯವಳೇ. ಆದರೆ, ತನ್ನ ಪೋಷಕರು ಮತ್ತು ಅವರ ಸಮಾಜದ ಒತ್ತಡಕ್ಕೆ ಒಳಗಾಗಿ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾಳೆ. ಮೊದಲು ವಿಡಿಯೊ ಯಾರ ಮೊಬೈಲ್ ನಲ್ಲಿದೆ, ಯಾರು ಪ್ರಜ್ಞೆ ತಪ್ಪಿ ಮಲಗಿದ್ದಾರೆ, ಯಾರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಎಂದು ಸಮೀರ್ ತಿಳಿಸಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani