Dailyhunt Logo
  • Light mode
    Follow system
    Dark mode
    • Play Story
    • App Story
Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

Vishwavani 2 months ago

ವದೆಹಲಿ, ಮೇ 18: ಉದ್ಯೋಗ ಎನ್ನುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ಆದರೆ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ. ಇದೀಗ ಯುವತಿಯೊಬ್ಬಳು ಬಾಲಿವುಡ್ ಸಿನಿಮಾ ವೀಕ್ಷಿಸಿ ಕಾರ್ಪೋರೇಟ್‌ ಕೆಲಸ ತೊರೆದು ಕಲಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ (Viral News). ಬಾಲಿವುಡ್ ಚಿತ್ರ 'ತಮಾಷಾ' ನೋಡಿದ ಬಳಿಕ ಕಲಾ ಕ್ಷೇತ್ರದಲ್ಲಿ ಆಕೆ ಮುಂದುವರಿಯಲು ಕಾರ್ಪೋರೇಟ್‌ ಉದ್ಯೋಗವನ್ನು ತ್ಯಜಿಸುತ್ತಾಳೆ.

ಆದರೆ ಆಕೆ ಆರ್ಥಿಕವಾಗಿ ಯಶಸ್ಸು ಪಡೆದಿಲ್ಲ.

ಹರ್ಷ್ ಎನ್ನುವವರು ಎಕ್ಸ್‌ನಲ್ಲಿ ಯುವತಿಯ ಎದುರಿಸಿದ ಆರ್ಥಿಕ ಸಂಕಷ್ಟ ಬಗ್ಗೆ ಬರೆದಿದ್ದಾರೆ. 30 ವರ್ಷದ ಮಹಿಳೆಯೊಬ್ಬರು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಕಾರ್ಪೋರೇಟ್‌ ಕಂಪನಿಯಲ್ಲಿ 6 ವರ್ಷ ಕೆಲಸ ಮಾಡಿದ್ದರು. ಆದರೆ ಬಾಲಿವುಡ್ ಸಿನಿಮಾ ʼತಮಾಷಾʼ ನೋಡಿದ ಬಳಿಕ ಕಲಾ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದು ನಿರ್ಧರಿಸಿ ಕೆಲಸ ತೊರೆದಿದ್ದಾರೆ.

ಆ ಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡಿ, ಆರ್ಟ್ಸ್‌ನಲ್ಲಿ ಡಿಪ್ಲೊಮಾ ಪದವಿ ಗಿಟ್ಟಿಸಿಕೊಂಡಿದ್ದಾರೆ. ಕೋರ್ಸ್ ನಂತರ, ಅವರು ಪ್ರದರ್ಶನಗಳ ಮೂಲಕ ಮತ್ತು ತಮ್ಮ ವರ್ಣಚಿತ್ರಗಳನ್ನು ಮಾರಾಟ ಮಾಡುವ ಮೂಲಕ ವೃತ್ತಿ ಜೀವನವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಕಲೆಯ ಮೂಲಕ ಜೀವನ ನಡೆಸುವಷ್ಟು ಆದಾಯ ಬರಲಿಲ್ಲ.

ಏರ್‌ಪೋರ್ಟ್‌ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್‌; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ಅಂತಿಮವಾಗಿ ಕೂಡಿಟ್ಟ ಹಣವೂ ಖಾಲಿಯಾಯಿತು. ಈಗ ಅವರು ಸ್ಥಿರತೆಗಾಗಿ ಕಾರ್ಪೋರೇಟ್ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕಾರ್ಪೋರೇಟ್ ಜೀವನಕ್ಕೆ ಮರಳಲು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ‌. ʼʼಈ ಕಥೆಯ ಒಳ್ಳೆಯ ಭಾಗವೆಂದರೆ, ಆಕೆ ಪ್ರಯತ್ನಿಸಲಿಲ್ಲ ಎಂಬ ಪಶ್ಚಾತ್ತಾಪವಿಲ್ಲ. ಆದರೆ ಕೆಟ್ಟ ಭಾಗವೆಂದರೆ, ಆಕೆ ತನ್ನ 30ರ ಹರೆಯದಲ್ಲಿ ಕಾರ್ಪೋರೇಟ್ ವೃತ್ತಿ ಜೀವನವನ್ನು ಮತ್ತೆ ಮೊದಲಿನಿಂದ ಆರಂಭ ಮಾಡಬೇಕಿದೆ‌ʼʼ ಎಂದು ಹರ್ಷ್‌ ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಉದ್ಯೋಗಿಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಒಬ್ಬರು, "ನಿಜ ಹೇಳಬೇಕೆಂದರೆ, ಸ್ಥಿರತೆಯಿಂದ ದೂರ ಸರಿದು ನಿಜವಾಗಿಯೂ ಇಷ್ಟಪಡುವದನ್ನು ಅನುಸರಿಸಲು ಸಾಕಷ್ಟು ಧೈರ್ಯ ಬೇಕಾಗುತ್ತದೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಸಿನಿಮಾ ನೋಡಿ ಭವಿಷ್ಯದ ಬಗ್ಗೆ ಇಷ್ಟು ದೊಡ್ಡ ನಿರ್ಧಾರ ಕೈಗೊಳ್ಳುವುದು ತಪ್ಪುʼʼ ಎಂದು ಕಮೆಂಟ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani