Dailyhunt Logo
  • Light mode
    Follow system
    Dark mode
    • Play Story
    • App Story
Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

Vishwavani 6 days ago

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ನೂರಾರು ವಿಡಿಯೊಗಳು ಹರಿದಾಡುತ್ತಿರುತ್ತವೆ. ಆದರೆ, ಅವುಗಳಲ್ಲಿ ಕೆಲವು ಮಾತ್ರ ನಮ್ಮ ಮನಸ್ಸನ್ನು ಮುಟ್ಟುತ್ತವೆ. ಅಂತಹದ್ದೇ ಒಂದು ಅಪರೂಪದ ಹಾಗೂ ಭಾವುಕವಾದ ಮುಗ್ಧ ಮಕ್ಕಳ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (actress Ramya) ಅವರ ಮನ ಗೆದ್ದಿದೆ.‌

ಅಳಿಲಿನ (Squirrel) ಅಂತ್ಯಸಂಸ್ಕಾರ ವೇಳೆ ಪುಟಾಣಿಗಳು ಕಣ್ಣೀರಿಟ್ಟ ವಿಡಿಯೊವೊಂದು ವೈರಲ್‌ ಆಗಿದೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಮಕ್ಕಳು, ಮೃತಪಟ್ಟ ಅಳಿಲಿಗೆ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಈ ವೇಳೆ ಮಕ್ಕಳಲ್ಲಿ ಕಾಣಿಸಿಕೊಂಡ ದುಃಖ ಮತ್ತು ಕಣ್ಣೀರು ನೋಡುಗರ ಮನ ಮಿಡಿಯುವಂತೆ ಮಾಡಿದೆ.

ಈ ವಿಡಿಯೋ ಸ್ಯಾಂಡಲ್ವುಡ್ ನಟಿ ರಮ್ಯಾ ಅವರ ಗಮನವನ್ನೂ ಸೆಳೆದಿದ್ದು, ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, " ಉತ್ತಮ ಸಮಾಜಕ್ಕಾಗಿ ಇಂತಹ ಮಕ್ಕಳನ್ನು ಬೆಳೆಸಬೇಕು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ಮೇಲಿನ ಕರುಣೆ, ಜೀವಿಗಳ ಬಗ್ಗೆ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಈ ಪುಟಾಣಿಗಳು ತಮ್ಮ ನಡೆ-ನುಡಿಗಳ ಮೂಲಕ ತೋರಿಸಿರುವುದಕ್ಕೆ ನೆಟ್ಟಿಗರು ಕೂಡ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಬದುಕಿದ ಬಡ ಜೀವ; ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

ಈ ಭಾವುಕ ವಿಡಿಯೋಗೆ ಸಾವಿರಾರು ಲೈಕ್‌ಗಳು, ಕಾಮೆಂಟ್‌ಗಳು ಹಾಗೂ ಶೇರ್‌ಗಳು ಹರಿದುಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani