Dailyhunt Logo
  • Light mode
    Follow system
    Dark mode
    • Play Story
    • App Story
Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

Vishwavani 3 days ago

ಭೋಪಾಲ್‌, ಜು. 7: ಪ್ರತಿಯೊಬ್ಬರಿಗೂ ತಮ್ಮ ಮದುವೆ ಅದ್ದೂರಿಯಾಗಿ ನಡೆಯಬೇಕೆಂಬ ಆಸೆ ಇರುತ್ತದೆ. ಕೆಲವರು ಗ್ರ್ಯಾಂಡ್ ಸೆಟಪ್‌ ಮೂಲಕ ಮದುವೆಯನ್ನು ಆಯೋಜಿಸುತ್ತಾರೆ. ಇದಕ್ಕಿಂತ ಭಿನ್ನವಾಗಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಭಾರಿ ಮಳೆಯಿಂದಾಗಿ ಮಂಟಪ ಜಲಾವೃತಗೊಂಡಿದ್ದರಿಂದ ವಧುವನ್ನು ವರ ತನ್ನ ಕೈಗಳಲ್ಲಿ ಎತ್ತಿಕೊಂಡು ನೀರಿನಲ್ಲಿ ಹೆಜ್ಜೆ ಹಾಕಿದ್ದಾನೆ.

ಈ ವಿಡಿಯೊ ವೈರಲ್(Viral News)ಆಗುತ್ತಿದ್ದಂತೆ ನೆಟ್ಟಿಗರು ಲೈಕ್, ಕಮೆಂಟ್ ಮಾಡಿ ವಧು- ವರರಿಗೆ ಶುಭ ಹಾರೈಸಿದ್ದಾರೆ.

ಕೆಲವೊಮ್ಮೆ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿದರೂ ಇಂತಹ ಸಣ್ಣ ಪುಟ್ಟ ಸಮಸ್ಯೆಯಿಂದ ತೊಂದರೆ ಎದುರಾಗುತ್ತದೆ. ಆದರೆ ಇಂದೋರ್‌ನಲ್ಲಿ ಆಯೋಜಿಸಿದ ಮದುವೆಗೆ ನೆರೆ ಬಂದಿದ್ದರೂ ಯಾವುದೇ ಸಮಸ್ಯೆಯಿಲ್ಲ ಎಂಬಂತೆ ನವದಂಪತಿ ಪರಿಸ್ಥಿತಿಯನ್ನು ನಿಭಾಯಿಸಿ ತಮ್ಮ ಮದುವೆಯ ದಿನವನ್ನು ಸ್ಮರಣೀಯಗೊಳಿಸಿದ್ದಾರೆ.

ವಿಡಿಯೊ ನೋಡಿ:

ವಿವಾಹದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಧು ಮತ್ತು ವರ ಮದುವೆಯ ಬಟ್ಟೆಯಲ್ಲಿ ಕಂಡು ಬಂದಿದ್ದಾರೆ.‌ ತೀವ್ರ ಮಳೆಯಿಂದಾಗಿ ಮದುವೆ ಮಂಟಪದಲ್ಲಿ ನೆರೆ ಆವರಿಸಿತು. ವಧು-ವರರು ನೀರು ತುಂಬಿದ ಸ್ಥಳದ ಮೂಲಕ ಊಟದ ಹಾಲ್‌ ಕಡೆಗೆ ತೆರಳಿದ್ದಾರೆ.‌ ವಿವಾಹದ ವೇದಿಕೆಯು ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ವರನು ಮದುಮಗಳನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ನೀರಿನಲ್ಲಿ ನಡೆದಿದ್ದಾನೆ. ಅಷ್ಟೇ ಅಲ್ಲದೆ, ನೀರಿನಲ್ಲಿ ವಧುವನ್ನು ಬೀಳಿಸುವಂತೆ ತಮಾಷೆ ಮಾಡುತ್ತಾ ಮುಂದೆ ಸಾಗಿದ್ದಾನೆ.

ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ಇನ್ನೊಂದು ವಿಡಿಯೊದಲ್ಲಿ ಮದುವೆ ಮಂಟಪವು ನೀರಿನಿಂದ ಆವೃತವಾಗಿದ್ದು, ಅತಿಥಿಗಳು ನೆರೆಯಲ್ಲೇ ನಿಂತು ಸಮಾರಂಭಕ್ಕೆ ಸಾಕ್ಷಿಯಾಗುತ್ತಿರುವುದನ್ನು ಕಾಣಬಹುದು. ಪೂರ್ವಾ ಮತ್ತು ವೈಭವ್ ಅವರ ಈ ವಿಶಿಷ್ಟ ವಿವಾಹ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ವಿವಾಹವು CAT ರಸ್ತೆಯ ಉದ್ಯಾನದಲ್ಲಿ ನಡೆದಿದೆ. ನಿರಂತರ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿ ಸುಮಾರು 1.5ರಿಂದ 2 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಅದಾಗ್ಯೂ ಈ ಜೋಡಿ ಸ್ವಲ್ಪವೂ ಬೇಸರಿಸದೆ ಮದುವೆ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿದೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, ʼʼಇದು ಮರೆಯಲಾಗದ ಮದುವೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಏನೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳುವ ದಾರಿ ಇದೆʼʼ ಎಂದು ಕಮೆಂಟ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani