Dailyhunt Logo
  • Light mode
    Follow system
    Dark mode
    • Play Story
    • App Story
Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಸೋಂಕಿತರ ಸಂಖ್ಯೆ; ಕಾರಣವೇನು?

Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಸೋಂಕಿತರ ಸಂಖ್ಯೆ; ಕಾರಣವೇನು?

Vishwavani 3 weeks ago

ಬೆಂಗಳೂರು: ಇದು ಟೆಕ್ ಯುಗ. ಎಲ್ಲವು ಗೊತ್ತಿದೆ, ಬಯಸಿದ್ದೆಲ್ಲ ಸಿಗಬೇಕು ಎನ್ನುವ ಮಕ್ಕಳು ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದ್ದಾರೆ. ಇದರ ಪರಿಣಾಮವೇ ಜೆನ್ ಝೀಗಳಲ್ಲಿ (Gen Z) ಎಚ್‌ಐವಿ (HIV) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.

ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನೆಲ್‌ನಲ್ಲಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

1997ರಿಂದ 2012ರ ಮಧ್ಯದ ಅವಧಿಯಲ್ಲಿ ಹುಟ್ಟಿರುವವರನ್ನು ಜೆನ್ ಝೀಗಳೆಂದು ಕರೆಯುತ್ತಾರೆ. ಇವರು ತಮ್ಮನ್ನು ತಾವು ತುಂಬಾ ಬುದ್ದಿವಂತರು ಎನ್ನುತ್ತಿದ್ದಾರೆ. ಸ್ಮಾರ್ಟ್ ಎಂದುಕೊಂಡು ಕೆಲವು ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಜೆನ್ ಝೀಗಳಲ್ಲಿ ಎಚ್ಚರಿಕೆ ತುಂಬಾ ಅಗತ್ಯ. ಯಾಕೆಂದರೆ ಎಚ್‌ಐವಿ ಸೋಂಕಿತರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಲೈಂಗಿಕತೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದೇ ಯುವಜನರಲ್ಲಿ ಈ ಸೋಂಕು ಹೆಚ್ಚಾಗಲು ಮುಖ್ಯ ಕಾರಣ ಎಂದು ಅವರು ಹೇಳಿದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:

Dailyhunt
Disclaimer: This content has not been generated, created or edited by Dailyhunt. Publisher: Vishwavani