Dailyhunt
Yash: ʻಟಾಕ್ಸಿಕ್‌ʼ ಕೈಬಿಟ್ಟ ರಿಲೀಸ್‌ ಡೇಟ್‌ ಮೇಲೆ ಕಣ್ಣಿಟ್ಟ ರಾಮ್‌ ಚರಣ್; ಕೊನೆಗೂ ಘೋಷಣೆ ಆಯ್ತು ʻಪೆದ್ದಿʼ ಬಿಡುಗಡೆ ಡೇಟ್‌

Yash: ʻಟಾಕ್ಸಿಕ್‌ʼ ಕೈಬಿಟ್ಟ ರಿಲೀಸ್‌ ಡೇಟ್‌ ಮೇಲೆ ಕಣ್ಣಿಟ್ಟ ರಾಮ್‌ ಚರಣ್; ಕೊನೆಗೂ ಘೋಷಣೆ ಆಯ್ತು ʻಪೆದ್ದಿʼ ಬಿಡುಗಡೆ ಡೇಟ್‌

Vishwavani 1 week ago

ಟಾಲಿವುಡ್‌ನಲ್ಲಿ ಸದ್ಯ ಎಲ್ಲರ ಕಣ್ಣು ರಾಮ್‌ ಚರಣ್‌ ನಟನೆಯ ʻಪೆದ್ದಿʼ ಸಿನಿಮಾದ ಮೇಲೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್‌ 30ರಂದು ಪ್ರೇಕ್ಷಕರ ಮುಂದೆ ಈ ಸಿನಿಮಾ ಬರಬೇಕಿತ್ತು. ಅದಕ್ಕೂ ಮೊದಲು ಮಾರ್ಚ್ 27ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು.

ಕೊನೆಗೆ ಅದು ಏಪ್ರಿಲ್ 30ಕ್ಕೆ ಮುಂದೂಡಿತ್ತು. ಸದ್ಯ ಬಿಡುಗಡೆ ದಿನಾಂಕವೂ ಮತ್ತೊಮ್ಮೆ ಪೋಸ್ಟ್‌ ಪೋನ್‌ ಆಗಿತ್ತು. ಆದರೆ ಇದೀಗ ಹೊಸ ದಿನಾಂಕವನ್ನು ಘೋಷಣೆ ಆಗಿದ್ದು, ಯಶ್‌ ಅವರ ಟಾಕ್ಸಿಕ್‌ನಿಂದಾಗಿ ಸಿಕ್ಕ ಜೂನ್‌ 4ರ ಸ್ಲಾಟ್‌ ಅನ್ನು ʻಪೆದ್ದಿʼ ಸಿನಿಮಾ ಎನ್‌ಕ್ಯಾಶ್‌ ಮಾಡಿಕೊಂಡಿದೆ.

'ಟಾಕ್ಸಿಕ್' ದಿನಾಂಕದ ಮೇಲೆ ʻಪೆದ್ದಿʼ ಕಣ್ಣು

ಯಶ್‌ ಅವರ 'ಟಾಕ್ಸಿಕ್' ಸಿನಿಮಾ ಮಾರ್ಚ್‌ 19ರಂದು ಬರಬೇಕಿತ್ತು. ಆದರೆ ಆನಂತರ ಜೂನ್ 4ಕ್ಕೆ ಅದು ಮುಂದೂಡಲ್ಪಟ್ಟಿತ್ತು. ಆದರೆ ಈಗ ಆ ದಿನಾಂಕದಲ್ಲೂ 'ಟಾಕ್ಸಿಕ್' ಬರುತ್ತಿಲ್ಲ. ಈಗಾಗಲೇ ಯಶ್‌ ಅವರು ಅಧಿಕೃತವಾಗಿ ಪೋಸ್ಟ್‌ಪೋನ್‌ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಜೂನ್ 4ರ ಸ್ಲಾಟ್ ಖಾಲಿ ಇತ್ತು. ಇದೀಗ ಆ ಜಾಗಕ್ಕೆ 'ಪೆದ್ದಿ' ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಜೂನ್‌ 4ರಂದು ಪೆದ್ದಿ ಸಿನಿಮಾವನ್ನು ರಿಲೀಸ್‌ ಮಾಡುವುದಾಗಿ ಘೋಷಣೆ ಮಾಡಿದೆ.

Ram Charan: ರಾಮ್ ಚರಣ್ 'ಪೆದ್ದಿ' ಸಿನಿಮಾದ ಐಟಂ ಡ್ಯಾನ್ಸ್‌ನಲ್ಲಿ ಈ ಖ್ಯಾತ ನಟಿ?

ಈ ಹಿಂದೆ ಜೂನ್‌ನಲ್ಲಿ ಪೆದ್ದಿಯನ್ನು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆಯಾದರೂ, ಯಾವಾಗ ಅನ್ನೋದು ಇನ್ನೂ ಗೊತ್ತಾಗಿರಲಿಲ್ಲ. ಈಚೆಗಷ್ಟೇ ಶೂಟಿಂಗ್ ಕಂಪ್ಲೀಟ್‌ ಆಗಿದ್ದು, ಜೂನ್‌ 4ಕ್ಕೆ ರಿಲೀಸ್‌ ಮಾಡಬೇಕು ಎಂದರೆ, ಮುಂದಿನ ಒಂದು ತಿಂಗಳು ನಿರಂತರವಾಗಿ ಪೆದ್ದಿ ಟೀಮ್‌ ಪೋಸ್ಟ್‌ಪ್ರೊಡಕ್ಷನ್‌, ಪ್ರಮೋಷನ್‌ ಎಲ್ಲವನ್ನೂ ಒಂದೇ ತಿಂಗಳೊಳಗೆ ಮಾಡಬೇಕಾಗುತ್ತದೆ. ಅದೆಲ್ಲದಕ್ಕೂ ಸಜ್ಜಾಗಿ ʻಪೆದ್ದಿʼ ಟೀಮ್‌, ಅಧಿಕೃತವಾಗಿ ಘೋಷಣೆ ಮಾಡಿದೆ. ‌

Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ; 'ಪೆದ್ದಿ','ದಿ ಪ್ಯಾರಡೈಸ್'ಗೆ ಲೀಕ್ ಕಾಟ

ನಿರ್ದೇಶಕರಿಂದ ಉಂಟಾಗಿತ್ತು ಗೊಂದಲ

ಈಚೆಗೆ ವೇದಿಕೆಯೊಂದರಲ್ಲಿ ಮಾತನಾಡುತ್ತಿದ್ದ ʻಪೆದ್ದಿʼ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು "ಜೂನ್‌ 25ಕ್ಕೆ ಪೆದ್ದಿ ಸಿನಿಮಾ ಬರುತ್ತದೆ" ಎಂದುಬಿಟ್ಟರು. ಅದು ದೊಡ್ಡ ಗೊಂದಲಕ್ಕೆ ಕಾರಣವಾಯ್ತು. ಯಾಕೆಂದರೆ, ಅಕ್ಕಿನೇನಿ ಅಖಿಲ್ ಅವರ 'ಲೆನಿನ್' ಸಿನಿಮಾ ಜೂನ್ 26ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಮೊದಲು ಮೇ 1ರಂದು ಬರಬೇಕಿದ್ದ 'ಲೆನಿನ್' ಸಿನಿಮಾವನ್ನು 'ಪೆದ್ದಿ' ಕಾರಣಕ್ಕಾಗಿ ಮುಂದೂಡಲಾಗಿತ್ತು. ಆದರೆ ಈಗ ಎರಡೂ ಸಿನಿಮಾಗಳು ಕೇವಲ ಒಂದು ದಿನದ ಅಂತರದಲ್ಲಿ ಬಂದರೆ ಹೇಗೆ ಎಂಬ ಮಾತು ಕೇಳಿಬಂದಿದೆ.

ಅಲ್ಲದೆ, ಇದೇ ವೇಳೆ ಅಕ್ಕಿನೇನಿ ನಾಗಾರ್ಜುನ ಅವರು, "ನಾನು ಫಸ್ಟ್ ಕಾಪಿ ನೋಡಿದ್ದೇನೆ, ಹೊಸ ಅಖಿಲ್‌ನನ್ನು ನೀವು ನೋಡಲಿದ್ದೀರಿ. ಜೂನ್ 26 ದಿನಾಂಕವನ್ನು ನೆನಪಿಟ್ಟುಕೊಳ್ಳಿ, ಥಿಯೇಟರ್‌ನಲ್ಲಿ ಭೇಟಿಯಾಗೋಣ" ಎಂದು ಟ್ವೀಟ್‌ ಮಾಡಿದ್ದಾರೆ. ಇದರಿಂದ ಈ ಬಾರಿ ರಿಲೀಸ್‌ ರೇಸ್‌ನಿಂದ ಅಕ್ಕಿನೇನಿ ಕುಟುಂಬ ಹಿಂದೆ ಸರಿಯುವ ಲಕ್ಷಣಗಳಿಲ್ಲ ಎಂಬುದು ಸ್ಪಷ್ಟವಾಗಿತ್ತು. ರಾಮ್ ಚರಣ್ ಮತ್ತು ಅಖಿಲ್ ಆತ್ಮೀಯ ಸ್ನೇಹಿತರು. ಹಾಗೆಯೇ ಚಿರಂಜೀವಿ ಮತ್ತು ನಾಗಾರ್ಜುನ ನಡುವೆಯೂ ದಶಕಗಳ ಸ್ನೇಹವಿದೆ. ಹೀಗಿರುವಾಗ ಅನ್ನಪೂರ್ಣ ಸ್ಟುಡಿಯೋಸ್ ಜೊತೆ ಚರ್ಚಿಸದೆ ಬುಚ್ಚಿಬಾಬು ಸನಾ ಬಿಡುಗಡೆ ದಿನಾಂಕ ಘೋಷಿಸಿದರೇ ಎಂಬ ಪ್ರಶ್ನೆ ಎದ್ದಿತ್ತು.

ರಾಮ್‌ ಚರಣ್‌ ಪೆದ್ದಿ ಸಿನಿಮಾ ರಿಲೀಸ್‌ ಡೇಟ್

ಇದೀಗ ಎಲ್ಲಾ ಗೊಂದಲಗಳಿಗೂ ʻಪೆದ್ದಿʼ ಚಿತ್ರತಂಡ ತೆರೆ ಎಳೆದಿದೆ. ಜೂನ್‌ 4ರಂದು ಬಹುಭಾಷೆಯಲ್ಲಿ ಬಹುನಿರೀಕ್ಷಿತ ʻಪೆದ್ದಿʼ ಸಿನಿಮಾವನ್ನು ರಿಲೀಸ್‌ ಮಾಡಲು ಮುಂದಾಗಿದೆ. ಅಂದು ಯಶ್‌ ಅವರ ಟಾಕ್ಸಿಕ್‌ ಸಿನಿಮಾವನ್ನು ನೋಡಬೇಕು ಎಂದುಕೊಂಡಿದ್ದವರಿಗೆ ಅದರ ಬರಲು ʻಪೆದ್ದಿʼ ಸಿನಿಮಾ ಸಿಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani