Dailyhunt
2028ಕ್ಕೆ ಕಾಂಗ್ರೆಸ್ ಸೋಲು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಜೆಪಿ ನಾಯಕ ಸಿ.ಟಿ. ರವಿ

2028ಕ್ಕೆ ಕಾಂಗ್ರೆಸ್ ಸೋಲು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಜೆಪಿ ನಾಯಕ ಸಿ.ಟಿ. ರವಿ

Photo Credit X

ಬೆಂಗಳೂರು: 2028ಕ್ಕೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಸೋಲು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ನಾಯಕ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.

ಕೆಟ್ಟ ಆಡಳಿತದಿಂದಾಗಿ ಕಾಂಗ್ರೆಸ್ ಸೋಲಿಸಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ.
ಉಪಚುನಾವಣೆಯಲ್ಲೇ ಪಲ್ಟಿ ಹೊಡೆಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಶಿರ್ಷಾಸನ ಮಾಡ್ತಾ ಇದ್ದಾರೆ. ಉಪಚುನಾವಣೆಯಲ್ಲಿ ಹೀಗೆ ಮಾಡ್ತಾ ಇರೋರು ಜನರಲ್ ಎಲೆಕ್ಷನ್‌ನಲ್ಲಿ ಗೆಲ್ತಾರಾ? ಬೈ ಎಲೆಕ್ಷನ್‌ನಲ್ಲೂ ಸೋಲ್ತಾರೆ, ಜನರಲ್ ಎಲೆಕ್ಷನ್‌ನಲ್ಲಿಯೂ ಸೋಲ್ತಾರೆ ಎಂದು ಹೇಳಿದ್ದಾರೆ.

2028ರವರೆಗೂ ಜನ ನಿಮಗೆ ಬಹುಮತ ಕೊಟ್ಟಿದ್ದಾರೆ. ಜನ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟಿದ್ದಾರೆ. 2028ರ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸೋಲುತ್ತೆ. ಇನ್ನೂ ಯಾವ ಪಾರ್ಟಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ.


ಕಾಂಗ್ರೆಸ್ ಬಿಟ್ಟು ಸಿದ್ದರಾಮಯ್ಯ ಸಿಎಂ ಆಗಬೇಕಾದ್ರೆ ಅದನ್ನ ಜನ ತೀರ್ಮಾನ ಮಾಡ್ತಾರೆ. ಜನ ಕಾಂಗ್ರೆಸ್ ಅನ್ನ ಗೆಲ್ಲಿಸಲ್ಲ. ಬರೆದಿಟ್ಟುಕೊಳ್ಳಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Webduniya Kannada