Dailyhunt Logo
  • Light mode
    Follow system
    Dark mode
    • Play Story
    • App Story
40ವರ್ಷದಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಶಿವಕುಮಾರ್‌ ಯಾರೆಂಬುದೇ ಗೊತ್ತಿಲ್ಲ: ಬಿಜೆಪಿ ಲೇವಡಿ

40ವರ್ಷದಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಶಿವಕುಮಾರ್‌ ಯಾರೆಂಬುದೇ ಗೊತ್ತಿಲ್ಲ: ಬಿಜೆಪಿ ಲೇವಡಿ

Photo Credit X

ಬೆಂಗಳೂರು: 40 ವರ್ಷಗಳಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಡಿಕೆ ಶಿವಕುಮಾರ್‌ ಅವರು ಯಾರು ಎಂಬುದೇ ಗೊತ್ತಿಲ್ಲವಂತೆ ಬಿಜೆಪಿ ಲೇವಡಿ ಮಾಡಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ವ್ಯಾಪಾರಸ್ಥರ ಜತೆ ಮಾತುಕತೆ ನಡೆಸಿದರು.
ಈ ವೇಳೆ ಅಲ್ಲೇ ಇದ್ದ ಮಹಿಳೆಯೊಬ್ಬರ ಜತೆ ಡಿಕೆ ಶಿವಕುಮಾರ್ ಅವರು ತುಂಬಾನೇ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ವೇಳೆ ಅಜ್ಜಿಯ ಬಳಿ ಡಿಕೆ ಶಿವಕುಮಾರ್ ಅವರು ಬಸ್‌ನಲ್ಲಿ ಪ್ರೀಯಾಗಿ ಪ್ರಯಾಣ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಹಾ ಹೋಗುತ್ತಿದ್ದೇನೆ, ಯಾರು ಈ ಯೋಜನೆ ಕೊಟ್ಟಿದ್ದು ಎಂದು ಡಿಕೆಶಿ ಮರು ಪ್ರಶ್ನೆ ಕೇಳಿದ್ದಕ್ಕೆ, ಅಜ್ಜಿ ಅವರು ಸಿದ್ದರಾಮಯ್ಯ ಎಂದು ಹೇಳುತ್ತಾರೆ.

ಅದಕ್ಕೆ ಡಿಕೆ ಶಿವಕುಮಾರ್‌ ನಾನ್ಯಾರು ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅಜ್ಜಿ ಬೇರೆನೇ ಮಾತನಾಡಿದ್ದಾರೆ.

ಇದೀಗ ಈ ಸಂಬಂಧ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

40 ವರ್ಷಗಳಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಡಿಕೆ ಶಿವಕುಮಾರ್‌
ಅವರು ಯಾರು ಎಂಬುದೇ ಗೊತ್ತಿಲ್ಲವಂತೆ ನೋಡಿ..!!

ಡಿಕೆ ಶಿವಕುಮಾರ್‌ ಅವರೇ, ಸುಮ್ಮನೆ ಬರ ಪ್ರವಾಸ ಮಾಡಿ. ಇಂತಹ ಫೋಟೋಶೂಟ್‌ ಪ್ರವಾಸಗಳನ್ನು ಮುಂದುವರಿಸಿದರೆ, ಈ ರೀತಿಯ ಮುಜುಗರಗಳು ಮುಂದುವರಿಯುವುದು ಖಚಿತ-ನಿಶ್ಚಿತ-ಖಂಡಿತ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada