Dailyhunt Logo
  • Light mode
    Follow system
    Dark mode
    • Play Story
    • App Story
63 ವರ್ಷದ ತಾತನ  ಮೇಲೆ 62 ವರ್ಷದ ಅಜ್ಜಿ ವಿವಾಹೇತರ ಸಂಬಂಧ: ಶಾಕ್ ಆದ ಜಸ್ಟಿಸ್ ನಾಗಪ್ರಸನ್ನ ಏನು ಹೇಳಿದ್ರು ನೋಡಿ Video

63 ವರ್ಷದ ತಾತನ ಮೇಲೆ 62 ವರ್ಷದ ಅಜ್ಜಿ ವಿವಾಹೇತರ ಸಂಬಂಧ: ಶಾಕ್ ಆದ ಜಸ್ಟಿಸ್ ನಾಗಪ್ರಸನ್ನ ಏನು ಹೇಳಿದ್ರು ನೋಡಿ Video

Photo and video credit: High Court of Karnataka (Video and photo is for only information purpose) ಕರ್ನಾಟಕ ಹೈಕೋರ್ಟ್‌ನ ವಿಚಾರಣಾ ಕಲಾಪಗಳಲ್ಲಿ ಎಷ್ಟೋ ಗಂಭೀರ ಪ್ರಕರಣಗಳು ಬರುತ್ತವೆ. ಆದರೆ ಇತ್ತೀಚೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ಬಂದ ವಿಚಿತ್ರ ಹಾಗೂ ಅಷ್ಟೇ ಹಾಸ್ಯಾಸ್ಪದ ಪ್ರಕರಣವೊಂದು ನ್ಯಾಯಾಲಯದಲ್ಲಿದ್ದವರನ್ನು ಕೆಲಕಾಲ ಮೌನವಾಗಿಸಿ, ನಂತರ ಮುಗುಳುನಗುವಂತೆ ಮಾಡಿತು.

ಪ್ರಕರಣದ ಹಿನ್ನೆಲೆ

63 ವರ್ಷದ ವ್ಯಕ್ತಿ ಮತ್ತು 62 ವರ್ಷದ ಮಹಿಳೆಯ ನಡುವೆ ವಿವಾಹೇತರ ಸಂಬಂಧವಿತ್ತು. ಇಬ್ಬರಿಗೂ ಮದುವೆಯಾಗಿ, ಮಕ್ಕಳಾಗಿ, ಮೊಮ್ಮಕ್ಕಳೂ ಇದ್ದಾರೆ! ವರ್ಷಗಳಿಂದ ರಹಸ್ಯವಾಗಿ ನಡೆಯುತ್ತಿದ್ದ ಈ ಅಕ್ರಮ ಸಂಬಂಧದ ವಿಚಾರ ಕೊನೆಗೂ ಮಹಿಳೆಯ ಗಂಡನಿಗೆ ತಿಳಿದುಬಂದಿದೆ. ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಕ್ಷಣ, ಗಂಡನ ಕೋಪದಿಂದ ಹಾಗೂ ಸಮಾಜದಲ್ಲಿ ಮಾನ ಹರಾಜಾಗುವುದರಿಂದ ತಪ್ಪಿಸಿಕೊಳ್ಳಲು ಮಹಿಳೆ ತಕ್ಷಣವೇ ತನ್ನ 63 ವರ್ಷದ ಪ್ರೇಮಿಯ ವಿರುದ್ಧವೇ "ಅತ್ಯಾಚಾರ" ದೂರು ದಾಖಲಿಸಿದ್ದಾಳೆ!

ಪ್ರಕರಣ ರದ್ದುಗೊಳಿಸುವಂತೆ ಕೋರಿ ಆ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದಾಗ, ಈ ವಿಚಾರಣೆ ಜಸ್ಟಿಸ್ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ಬಂತು.

ನ್ಯಾಯಮೂರ್ತಿಗಳ ಚಟಾಕಿ ಹಾಗೂ ಪ್ರತಿಕ್ರಿಯೆ

ಪ್ರಕರಣದ ದಾಖಲೆಗಳನ್ನು ಹಾಗೂ ಅರ್ಜಿದಾರರ ವಯಸ್ಸನ್ನು ನೋಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಮ್ಮೆ ಆಶ್ಚರ್ಯಚಕಿತರಾದರು. ವಿಚಾರಣೆ ವೇಳೆ ಅವರು ನೀಡಿದ ಟಿಪ್ಪಣಿಗಳು ನ್ಯಾಯಾಲಯದಲ್ಲಿದ್ದ ವಕೀಲರನ್ನು ರಂಜಿಸಿದವು. 63 ವರ್ಷದ ಪುರುಷ, 62 ವರ್ಷದ ಮಹಿಳೆ... ಇಬ್ಬರಿಗೂ ಮೊಮ್ಮಕ್ಕಳಿದ್ದಾರೆ! ಈ ವಯಸ್ಸಿನಲ್ಲಿ ಅತ್ಯಾಚಾರದ ಆರೋಪವೇ?" ಎಂದು ಜಸ್ಟಿಸ್ ನಾಗಪ್ರಸನ್ನ ಆಶ್ಚರ್ಯ ವ್ಯಕ್ತಪಡಿಸಿದರು. "ವರ್ಷಗಳಿಂದ ಇಬ್ಬರ ನಡುವೆ ಸಮ್ಮತಿಯಿಂದಲೇ ಸಂಬಂಧ ನಡೆದಿದೆ. ಗಂಡನಿಗೆ ವಿಷಯ ತಿಳಿಯುತ್ತಿದ್ದಂತೆ ಇದು ದಿಢೀರನೆ ಅತ್ಯಾಚಾರವಾಗಿ ಬದಲಾಯಿತೇ?" ಎಂದು ಪ್ರಶ್ನಿಸಿದರು. ಸಂಕಷ್ಟದಿಂದ ಪಾರಾಗಲು ಮತ್ತು ಗಂಡನಿಗೆ ಹೆದರಿ ರೇಪ್ ಕೇಸ್ ಹಾಕಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಇಂತಹ ಪ್ರಕರಣಗಳು ಕಾನೂನಿನ ತೀವ್ರ ದುರುಪಯೋಗ ಎಂದು ಅಭಿಪ್ರಾಯಪಟ್ಟಿತು.

ಹಲವು ವರ್ಷಗಳ ಸಮ್ಮತಿಯ ಸಂಬಂಧವನ್ನು, ಗಂಡನಿಗೆ ಸಿಕ್ಕಿಬಿದ್ದ ತಕ್ಷಣ ಅತ್ಯಾಚಾರವೆಂದು ಬಿಂಬಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, 63 ವರ್ಷದ ವ್ಯಕ್ತಿಯ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್ ಹಾಗೂ ಕ್ರಿಮಿನಲ್ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶಿಸಿತು. ನ್ಯಾಯಾಲಯದ ಕಲಾಪದಲ್ಲಿ ಬಂದ ಈ ವಿಚಿತ್ರ ಕೇಸ್ ಮತ್ತು ಜಸ್ಟಿಸ್ ನಾಗಪ್ರಸನ್ನ ಅವರ ಸಮಯಪ್ರಜ್ಞೆಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿವೆ.

pic.twitter.com/TrOmdg6knA - Shilpa (@shilpa_cn)

Dailyhunt
Disclaimer: This content has not been generated, created or edited by Dailyhunt. Publisher: Webduniya Kannada