Dailyhunt
ಆಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವರ ಬಂಧನ

ಆಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವರ ಬಂಧನ

ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಕೇರಳದ ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ ಮತ್ತು ಕೊಝಿಕೋಡ್​ನ ಮೊಹಮ್ಮದ್ ಮೂಸ ಮಿಯಾಸ್, ಬಂಧಿತರು. ಇವರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ನಡೆಸಿದಾಗ ಸೂಟ್​​​​ಕೇಸ್​ನ ಕೆಳಭಾಗದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಗಳಿಂದ

703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಇದರ ಮೌಲ್ಯ 34,46,464 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸೂಕ್ತ ಸಂಗಾತಿ ಬೇಕಾ ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ !

ಸಂಬಂಧಿಸಿದ ಸುದ್ದಿ

  • ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿ ಉರುಳಿಬಿದ್ದ ತೆಂಗಿನ ಮರ
  • ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ: ಜುಲೈ- ಆಗಸ್ಟ್ ತಿಂಗಳು ಕೌಶಲ್ಯ ಮಾಸ: ಡಿಸಿಎಂ ಘೋಷಣೆ
  • ತುರ್ತು ಪರಿಸ್ಥಿತಿ ವೇಳೆ ಬಲವಂತದ ಶಸ್ತ್ರಚಿಕಿತ್ಸೆ ಮೂಲಕ ಜನಸಂಖ್ಯಾ ನಿಯಂತ್ರಣ: ಸಿ.ಟಿ.ರವಿ
  • ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ
  • ನಾನು ಯಾರಿಗೂ ಮೋಸ ಮಾಡಿಲ್ಲ: ಅರುಣಾ ಕುಮಾರಿ

Dailyhunt
Disclaimer: This content has not been generated, created or edited by Dailyhunt. Publisher: Webduniya Kannada